ಶಿವಮೊಗ್ಗ : ನಗರದ ಜನನಿಬಿಡ ಪ್ರದೇಶವಾದ ಕುವೆಂಪು ನಗರದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 35 ಗುಂಟೆಗಳಷ್ಟು ವಿಸ್ತೀರ್ಣವಿರುವ ಪ್ರಾಧಿಕಾರದ ಜಾಗವನ್ನು ಕಬಳಿಸಿರುವ ಭೂಗಳ್ಳರ ಕೃತ್ಯದ ಬಗ್ಗೆ ಸಾರ್ವಜನಿಕರಿಂದ ತೀವ್ರ ದೂರುಗಳು ಬಂದ ಹಿನ್ನೆಲೆಯಲ್ಲಿ, ಸೂಡಾ ಅಧ್ಯಕ್ಷರಾದ ಸಿ.ಜಿ. ಮಧುಸೂದನ್ ಹಾಗೂ ಆಯುಕ್ತರಾದ ಬಿ.ಆರ್. ಮಂಜುನಾಥ್ ಅವರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಕುವೆಂಪು ನಗರದ ವ್ಯಾಪ್ತಿಯಲ್ಲಿರುವ ಈ ಬಹುಮೌಲ್ಯದ ಜಾಗದ ಮಾರುಕಟ್ಟೆ ಮೌಲ್ಯ ಅಂದಾಜು 6 ಕೋಟಿ ರೂಪಾಯಿಗೂ ಅಧಿಕವೆಂದು ಅಂದಾಜಿಸಲಾಗಿದೆ. ಇಂತಹ ಪ್ರಮುಖ ಪ್ರದೇಶದ ಪ್ರಾಧಿಕಾರದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಅಲ್ಲಿ ಲೇಔಟ್ ನಿರ್ಮಿಸಲು ಯತ್ನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ದೂರಿನ ಮೇರೆಗೆ ಹಸ್ತಾಂತರಿಸಲ್ಪಟ್ಟ ಜಾಗದ ದಾಖಲೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್ ಮತ್ತು ಆಯುಕ್ತ ಬಿ.ಆರ್. ಮಂಜುನಾಥ್ ಅವರು ಖುದ್ದಾಗಿ ದಾಖಲೆಗಳನ್ನು ಪರಿಶೀಲಿಸಿದರು. ಪ್ರಾಧಿಕಾರದ ಜಾಗ ಅನ್ಯರ ಪಾಲಾಗಿರುವುದನ್ನು ಖಚಿತಪಡಿಸಿಕೊಂಡು, ಕೂಡಲೇ ಮರು ಸರ್ವೆ ನಡೆಸಿ ಪ್ರಾಧಿಕಾರಕ್ಕೆ ಸೇರಿದ ಸಮಗ್ರ ಜಾಗವನ್ನು ಯಾವುದೇ ವಿಳಂಬವಿಲ್ಲದೆ ವಶಕ್ಕೆ ಪಡೆಯಲು ಸ್ಥಳದಲ್ಲೇ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಡಾ ಅಧ್ಯಕ್ಷ ಮಧುಸೂದನ್, ಸಾರ್ವಜನಿಕರ ಆಸ್ತಿಯನ್ನು ಕಬಳಿಸಲು ಯತ್ನಿಸುವ ಎಷ್ಟೇ ಪ್ರಭಾವಿಗಳಾದರೂ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರಿ ಹಾಗೂ ಪ್ರಾಧಿಕಾರದ ಜಾಗ ಒತ್ತುವರಿ ಮಾಡುವ ಭೂಗಳ್ಳರ ವಿರುದ್ಧ ಮುದಾಕ್ಷಿಣ್ಯವಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದರು.
ಕೋಟ್ಯಂತರ ರೂ. ಮೌಲ್ಯದ ಸೂಡಾ ಜಾಗ ಒತ್ತುವರಿ, ಪ್ರಾಧಿಕಾರದಿಂದ ಸ್ಥಳ ಪರಿಶೀಲನೆ, ಕಠಿಣ ಕ್ರಮದ ಎಚ್ಚರಿಕೆ