ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ವಾಟ್ಸಪ್ ಸಂದೇಶಗಳು ಇದೀಗ ವೈರಲ್ ಆಗಿವೆ. ಈ ಸಂದೇಶಗಳಲ್ಲಿ ಲಯನ್ ಸಫಾರಿ ವಿಭಾಗದಲ್ಲಿ ಭದ್ರತಾ ಹಾಗೂ ಪ್ರಾಣಿಗಳ ಆರೈಕೆ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿವೆ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.
ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಾಕ್ಷರ್ ಪ್ರತಿಕ್ರಿಯಿಸಿ, ಈ ಸಂದೇಶಗಳು ಬಂದ ನಂತರವೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ವೈರಲ್ ಆಗಿರುವ ಚಾಟ್‌ಗಳಲ್ಲಿ ಹೇಳಿರುವ ವಿಷಯಗಳಲ್ಲಿ ಕೆಲವೊಂದು ಸತ್ಯವಾಗಿದ್ದರೂ, ಅವುಗಳನ್ನು ಗಮನದಲ್ಲಿಟ್ಟು ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತನಿಖಾ ತಂಡಕ್ಕೆ ಸಲ್ಲಿಸಲಾಗಿದ್ದು, ಮುಂದಿನ ಕ್ರಮ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
ತ್ಯಾವರೆಕೊಪ್ಪ ಸಫಾರಿ ದುರಂತ: ಹಳೆಯ ವಾಟ್ಸಪ್ ಸಂದೇಶ ವೈರಲ್
Old WhatsApp message goes viral
