Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ನೀಟ್ ಬದಲು ಸಿಇಟಿ ಜಾರಿಗೆ ತರಬೇಕು: ಕರುನಾಡ ಯುವಶಕ್ತಿ ಆಗ್ರಹ

July 29, 2026

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ವಿಶೇಷ ಸುದ್ದಿ»ಸಮಾಜ ಸೇವಕಿ ನಂದಿನಿಗೆ ಹೊಸ ವರ್ಷದ ಪ್ರಶಸ್ತಿ ಪುರಸ್ಕಾರ
ವಿಶೇಷ ಸುದ್ದಿ

ಸಮಾಜ ಸೇವಕಿ ನಂದಿನಿಗೆ ಹೊಸ ವರ್ಷದ ಪ್ರಶಸ್ತಿ ಪುರಸ್ಕಾರ

Raghu ShettyBy Raghu ShettyJanuary 6, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಭದ್ರಾವತಿ:ನಗರದ ಖ್ಯಾತ ರಂಗಭೂಮಿ ಕಲಾವಿದೆ, ಸಮಾಜ ಸೇವಕಿ, ಹಾಗು ಏಕ ವ್ಯಕ್ತಿ ಪ್ರದರ್ಶನ ಕಲಾವಿದೆ, ನಂದಿನಿ ಮಲ್ಲಿಕಾರ್ಜುನ್ ರವರಿಗೆ ಬೆಂಗಳೂರು ಕೆಂಗೇರಿ ಉಪ ನಗರದ ವಳಗೆರೆ ಹಳ್ಳಿಯಲ್ಲಿರುವ ಅಖಿಲ ಕರ್ನಾಟಕ ಅಂಗವಿಕಲರ ಸೇವಾ ಟ್ರಸ್ಟ್ ನಾಗರಭಾವಿ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಏರ್ಪಡಿಸಿದ್ದ 2026 ನೇ ಹೊಸ ವರ್ಷದ ಸಮಾರಂಭದ ಅಂಗವಾಗಿ ಹೊಸ ವರ್ಷದ ಪ್ರಶಸ್ತಿಯ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಸಾಮಾನ್ಯ ಗೃಹಿಣಿಯಾಗಿ ತಮ್ಮ ಕಟುಂಬದ ನಿರ್ವಹಣೆ ಮಾಡಿಕೊಂಡಿದ್ದ ಇವರು. ಗೃಹಿಣಿಯಾದವಳು ಕೇವಲ ಮನೆಗೆ ಮಾತ್ರ ಸೀಮಿತ ಎಂಬ ಮಾತನ್ನು ಸುಳ್ಳಾಗಿಸಿ, ತಮ್ಮ ಬಿಡುವಿನ ವೇಳೆಯಲ್ಲಿ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದರು.
ಇದರ ಜೊತೆಗೆ ಹವ್ಯಾಸಕ್ಕಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತ ಸಂಧರ್ಭದಲ್ಲಿ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.
ಇದರ ಪರಿಣಾಮ ನಾಟಕಗಳಲ್ಲಿನ ವಿಭಿನ್ನ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದರು. ಇದರ ಫಲವಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಇದಲ್ಲದೆ ಏಕ ವ್ಯಕ್ತಿ ಕಲಾವಿದೆ ಯಾಗಿಯೂ ಪ್ರಸಿಧ್ಧಿ ಪಡೆದರು. ಇದರ ಪರಿಣಾಮವಾಗಿ ನಂತರದ ದಿನಗಳಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಕಲಾವಿದೆಯಾಗಿ ರೂಪಗೊಂಡರು. ಈ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಉತ್ತಮ ಧ್ವನಿಯ ಹಿನ್ನಲೆ ಮಾತುಗಾರಿಕೆಯ ಚತುರತೆಯ ಫಲವಾಗಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಪರಿಣಾಮ ಆಕಾಶವಾಣಿ ಕಲಾವಿದೆಯಾಗಿಯೂ ರೂಪಗೊಂಡರು. ಇವರು ದ್ವನಿ ನೀಡಿದ ಸುಮಾರು 10 ಕ್ಕೂ ಹೆಚ್ಚು ನಾಟಕಗಳು ಬಾನುಲಿಯಲ್ಲಿ ರಾಜ್ಯದಾದ್ಯಂತ ಬಿತ್ತರಗೊಂಡು ವಿಶೇಷ ಪ್ರಸಾರ ಪಡೆದ ಮನ್ನಣೆಗೆ ಪಾತ್ರರಾದರು. ಇದಲ್ಲದೆ ಐದಕ್ಕೂ ಹೆಚ್ಚು ಸಿಡಿಗಳಿಗೆ ದ್ವನಿ ನೀಡುವ ಮೂಲಕ ಹಿನ್ನಲೆ ಸಂಭಾಷಣೆ ಮಾತುಗಾರಿಕಗೆಗೆ ಪ್ರಸಿಧ್ದರಾದರು.
ಇವರ ರಂಗಭೂಮಿ ನಟನೆಗೆ ಸಾಕ್ಷಿಯಾಗಿ ತವರು ಮನೆ, ಸನ್ಮಾನ ಸುಖ, ಸುವ್ವಿ ಬಾ ಸಂಗಯ್ಯ, ಕಿಸ್ಸಾ ಗೌತಮಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಹೆಸರುವಾಸಿಯಾದ ಬಲಿದಾನದ ನಡೆದ ಘಟನೆ ಆಧಾರಿತ ನಾಟಕ ಈಸೂರಿನ ಈ ಶೂರರು, ಉರ‍್ಮಿಳಾ, ಬಸವಣ್ಣನೇ ದಿಕ್ಕು, ಏಕ ವ್ಯಕ್ತಿ ಪ್ರಧಾನ ಆಧಾರದ ನಾಟಕಗಳಾದ ನಿರಾಕರಣೆ ಮೃಶಾಲಿ, ಸತಿ ಯಂತಹ ನಾಟಕಗಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಎಂತಹ ಪಾತ್ರಕ್ಕಾದರೂ ಸೈ ಎನಿಸಿಕೊಂಡರು.
ಇದರ ಜೊತೆಗೆ ಏಕ ವ್ಯಕ್ತಿ ಅಭಿನಯದ ಪಾತ್ರಗಳಲ್ಲಿ ರಾಜ್ಯದಲ್ಲಿ ಎಂಟನೆ ರಂಗಭೂಮಿ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೂರದರ್ಶನ ಚಂದನದಲ್ಲಿ ಪ್ರದರ್ಶನ ನೀಡಿರುತ್ತಾರೆ. ಅಭಿನಯಿಸುವುದರ ಜೊತೆಗೆ ಅನೇಕ ನಾಟಕಗಳನ್ನು ರಚಿಸಿ ನಿರ್ದಶನ ಮಾಡಿದ ಖ್ಯಾತಿ ಇವರದಾಗಿದೆ. ಇದು ಉಕ್ಕಿನ ನಗರಿ ಹಾಗು ರಂಗಭೂಮಿ ಕಲಾವಿದರ ತವರೂರಾದ ಒಂದು ಕಾಲದಲ್ಲಿ ೫೦ ಕ್ಕೂ ಹೆಚ್ಚು ನಾಟಕ ತಂಡಗಳಿದ್ದ ಭದ್ರಾವತಿ ನಗರಕ್ಕೆ ಸಂದ ಗೌರವವಾಗಿದೆ.
ಇವೆಲ್ಲದರ ಮಧ್ಯೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷೆಯಾಗಿ, ಮಾತೃ ಮಂಡಳಿ ಅಧ್ಯಕ್ಷೆಯಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ, ಶಾಂತಲಾ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಭದ್ರಾ ಸುಗಮ ಸಂಗೀತ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ಶಾಶ್ವತ ಮಹಿಳಾ ಸಮಾಜದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Share. Facebook Twitter Pinterest LinkedIn Tumblr Email
Raghu Shetty
  • Website
  • Facebook
  • Instagram

Related Posts

 ಕತ್ತಲಲ್ಲಿದ್ದ ಗ್ರಾಮಕ್ಕೆ ಬೆಳಕಾದ ಲೈನ್‌ಮ್ಯಾನ್‌ಗಳು

July 9, 2026

ತಾಯಿ ಮಮತೆಗೆ ಗಡಿ ಇಲ್ಲ: ನಾಯಿಯ ಹಾಲಿಗೆ ಮೊರೆ ಹೋದ ಬೆಕ್ಕಿನ ಮರಿ

July 1, 2026

ಜನಪ್ರತಿನಿಧಿಗಳಿಗೆ ಅಹಂಕಾರ, ಅಧಿಕಾರದ ಮದ ಏರಬಾರದು…!

June 27, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,324 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,275 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026417 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026385 Views
Don't Miss
ನಮ್ಮ ಶಿವಮೊಗ್ಗ

ನೀಟ್ ಬದಲು ಸಿಇಟಿ ಜಾರಿಗೆ ತರಬೇಕು: ಕರುನಾಡ ಯುವಶಕ್ತಿ ಆಗ್ರಹ

By Raghu ShettyJuly 29, 20260

ಶಿವಮೊಗ್ಗ: ದೇಶದ ವಿದ್ಯಾರ್ಥಿ ಗಳ ಭವಿಷ್ಯ ದೊಂದಿಗೆ ರಾಜಕೀಯ ಮಾಡುವುದನ್ನು ನಿಲ್ಲಿಸಿ, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್…

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ನೀಟ್ ಬದಲು ಸಿಇಟಿ ಜಾರಿಗೆ ತರಬೇಕು: ಕರುನಾಡ ಯುವಶಕ್ತಿ ಆಗ್ರಹ

July 29, 20260 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.