ಶಿವಮೊಗ್ಗದಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಕಲಿ ಕಥೆ ಹೇಳಿ ಯುವತಿಯನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವತಿ ಸುಮಾರು ₹2,15,000 ಕಳೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಎರಡು ತಿಂಗಳ ಹಿಂದೆ ಯುವತಿಗೆ “ಮೈಕೆಲ್” ಎಂಬ ಹೆಸರಿನ ವ್ಯಕ್ತಿಯ ಪರಿಚಯ ಫೇಸ್‌ಬುಕ್‌ನಲ್ಲಿ ಆಗಿತ್ತು. ಆತ ವಿಶ್ವಾಸ ಗಳಿಸಿ ಏಪ್ರಿಲ್ 6ರಂದು ಶಿವಮೊಗ್ಗಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದ. ಆದರೆ ಆ ದಿನ ಆತ ವಾಟ್ಸಾಪ್ ಮೂಲಕ ಸಂಪರ್ಕಿಸಿ, ತಾನು ಮುಂಬೈ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಿಲುಕಿಕೊಂಡಿರುವುದಾಗಿ ಹೇಳಿದ್ದಾನೆ.
ಸ್ವಲ್ಪ ಸಮಯದ ನಂತರ, ಮಹಿಳೆಯೊಬ್ಬರು ಕರೆ ಮಾಡಿ ತಮ್ಮನ್ನು ವಿಮಾನ ನಿಲ್ದಾಣ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಮೈಕೆಲ್ ಅವರನ್ನು ಬಿಡಿಸಲು ದಂಡ ಪಾವತಿಸಬೇಕೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿದ ಯುವತಿ ಏಪ್ರಿಲ್ 6 ಮತ್ತು 7 ರಂದು ನೆಟ್ ಬ್ಯಾಂಕಿಂಗ್ ಮತ್ತು ಫೋನ್‌ಪೇ ಮೂಲಕ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ಒಟ್ಟು ₹2,15,000 ಹಣ ಕಳೆದುಕೊಂಡ ನಂತರ ಮತ್ತೆ ಹಣ ಕೇಳಿದಾಗ ಯುವತಿಗೆ ಅನುಮಾನ ಮೂಡಿದೆ. ಕೂಡಲೇ ಅವರು ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಈ ಕುರಿತು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಬರ್ ವಂಚಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಎಚ್ಚರಿಕೆ
ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅನಾಮಿಕ ವ್ಯಕ್ತಿಗಳಿಂದ ಹಣದ ಬೇಡಿಕೆ ಬಂದರೆ ತಕ್ಷಣ ಎಚ್ಚರಿಕೆ ವಹಿಸಲು ಹಾಗೂ ಯಾವುದೇ ಹಣ ವರ್ಗಾವಣೆ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
ಫೇಸ್‌ಬುಕ್ ಸ್ನೇಹದ ಹೆಸರಿನಲ್ಲಿ ನಕಲಿ ಪ್ರೇಮ ವಂಚನೆ: ಶಿವಮೊಗ್ಗ ಯುವತಿಗೆ ₹2.15 ಲಕ್ಷ ನಷ್ಟ
Fake love scam
