ಶಿವಮೊಗ್ಗ : ಡಸ್ಟರ್ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗಾಬರಿಗೊಂಡ ಚಾಲಕ ವಾಹನವನ್ನ ಎಡಗಡೆ ತಿರುಗಿಸಿದ ಪರಿಣಾಮ ದರೆಬೈಲಿಗೆ ಗುದ್ದಿ ಸಂಪೂರ್ಣ ಸುಟ್ಟುಹೋಗಿರುವ ಘಟನೆ ಇಂದು ಮಧ್ಯಾಹ್ನ ತೀರ್ಥಹಳ್ಳಿಯ ನಾಲೂರು ಕೋಳಿಗೆ ಬಳಿ ನಡೆದಿದೆ.
ಉಡುಪಿಯಿಂದ ಸೊರಬಕ್ಕೆ ತೆರಳುತ್ತಿದ್ದ ಡಸ್ಟರ್ ಕಾರೊಂದು ಆಗುಂಬೆ, ಮೇಘರವಳ್ಳಿಯಿಂದ ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಬಳಿ ಬರುತ್ತಿದ್ದಂತೆ ಡಸ್ಟರ್ ನ ಇಂಜಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ದರೆಬೈಲಿಗೆ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಕಾರು ನೋಡನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಘಟನೆ ಸಂಭವಿಸಿದಾಗ ಕಾರಿನಲ್ಲಿ ಚಾಲಕ ಒಬ್ಬರೇ ಇದ್ದು, ಕೂಡಲೇ ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನ ಸೊರಬದ ಸುಹೇಲ್ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.