Author: Raghu Shetty

ಶಿವಮೊಗ್ಗ, : ಅಬ್ಬಲಗೆರೆಯ ಸಮೀಪ ನಡೆದ ಯುವತಿಯೊಬ್ಬರ ಸರ ಕಳವು ಮಾಡಿದ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೇ.೨೨ ರ ಸಂಜೆ ಯುವತಿಯೊಬ್ಬರು ಕಾರಿಂದ ಕೆಳಗೆ ಇಳಿಯುತ್ತಿದ್ದ ವೇಳೆ, ಹಿಂಭಾಗದಿಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಯುವತಿಯ ಕೊರಳಿನಲ್ಲಿದ್ದ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆ ಹಾಗೂ ಮಾಲು ವಶಕ್ಕೆ ವಿಶೇಷ ತಖಾ ತಂಡವನ್ನು ರಚಿಸಿತು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ ಹಾಗೂ ಉಪ ವಿಭಾಗ-ಬಿ ಡಿವೈಎಸ್‌ಪಿ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ ಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿಎಸ್‌ಐ ನವೀನ್ ಮಠಪತಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ತಖಾ ತಂಡದಲ್ಲಿ ಸಿಪಿಸಿ ಶ್ರೀಕಾಂತ್, ಕಾಶಿನಾಥ ಹಾಗೂ ಕವನ ಸೇರಿದಂತೆ…

Read More

ಶಿವಮೊಗ್ಗ : ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯಲ್ಲಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿದ ಪ್ರಕರಣವನ್ನು ವಿನೋಬನಗರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 73 ವರ್ಷದ ವೃದ್ಧೆಯೊಬ್ಬರು ಮೇ 13ರಂದು ಬೆಳಗಿನ ವಾಕಿಂಗ್‌ಗೆ ತೆರಳಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0093/2026ರಡಿ ಬಿ.ಎನ್.ಎಸ್ ಕಲಂ 309(4) ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ ಹಾಗೂ ಡಿವೈಎಸ್ಪಿ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಯಿತು. ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ ಕುಮಾರ್ ಡಿ.ಕೆ ನೇತೃತ್ವದಲ್ಲಿ ಪಿಎಸ್ಐ ತಿರುಮಲೇಶ್ ಜಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು. ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಚಾಲುಕ್ಯನಗರ ಗೋಪಾಳ ನಿವಾಸಿ ಭರತ್ (21)…

Read More

ಶಿವಮೊಗ್ಗ : ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾನವೀಯ ಕಾರ್ಯವೊಂದಕ್ಕೆ ಸಾಕ್ಷಿಯಾಗಿದ್ದಾರೆ. ನಗರ ಪೊಲೀಸ್ ಸ್ಟೇಷನ್​ ಬೀಟ್ ಸಿಬ್ಬಂದಿ ತಮ್ಮ ವ್ಯಾಪ್ತಿಯೊಳಗೆ ಗಸ್ತು ತಿರುಗುತ್ತಿದ್ದಾಗ ಅನಾಥವಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಅವರಿಗೆ ಆಸರೆ ಒದಗಿಸಿದ್ದಾರೆ. ಮಾಸ್ತಿಕಟ್ಟೆಯಲ್ಲಿ ನಡೆದ ಘಟನೆಯಿದು. ಮಹಿಳೆಯೊಬ್ಬರು ಏಕಾಂಗಿಯಾಗಿ ಅಲೆದಾಡುತ್ತಿರುವುದು ಬೀಟ್ ಸಿಬ್ಬಂದಿ ಗಮನಕ್ಕೆ ಬಂದಿದೆ. ಅಸ್ವಸ್ಥ ಸ್ಥಿತಿಯಲ್ಲಿ ನಿರಾಶ್ರಿತರಾಗಿದ್ದ ಮಹಿಳೆಯನ್ನು ಕಂಡ ಸಿಬ್ಬಂದಿ, ತಕ್ಷಣವೇ ಸ್ಪಂದಿಸಿ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಸೇರಿ, ಮಹಿಳೆಯ ಪೂರ್ವಾಪರ ಮಾಹಿತಿ ಹಾಗೂ ಆಕೆಯ ಸಂಬಂಧಿಕರ ವಿಷಯವನ್ನು ಕಲೆಹಾಕಿದ್ದಾರೆ. ಹಾಗೂ ಹೀಗೂ ಮಾಡಿ, ಅಸ್ವಸ್ಥ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಮಹಿಳೆಯ ವಿಷಯ ತಿಳಿದು ಸಂತ್ರಸ್ತ ಮಹಿಳೆಯ ಚಿಕ್ಕಮ್ಮ ಆಶ್ರಯ ನೀಡಲು ಮುಂದೆ ಬಂದಿದ್ದರಿಂದ ಅವರೊಂದಿಗೆ ಅಸ್ವಸ್ಥ ಮಹಿಳೆಯನ್ನು ಕಳುಹಿಸಿಕೊಟ್ಟಿದ್ದಾರೆ.

Read More

ಶಿವಮೊಗ್ಗ : ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ನಂದ್ರಿ ಗ್ರಾಮದ ಸರ್ವೇ ನಂ.15ರ ನಂದ್ರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ವರ್ಗಾವಣೆಗೊಂಡ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ 2 ರಿಂದ 3 ವರ್ಷ ಹಳೆಯ ಬೀಟೆ ಜಾತಿಯ ಮರದ ನಾಟ ತುಂಡುಗಳನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಒತ್ತುವರಿ ಜಮೀನಿನಲ್ಲಿನ ಕೃಷಿ ಹೊಂಡದ ಪಕ್ಕದಲ್ಲಿ ಮಣ್ಣಿನಲ್ಲಿ ಮುಚ್ಚಿ ಇಡಲಾಗಿದ್ದ 14 ಬೀಟೆ ಜಾತಿಯ ಮರದ ನಾಟ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ. ಗಣೇಶ ಬಿನ್ ಬಾಬುಶೆಟ್ಟಿ (40), ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿವಾಸಿ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ಕಾನೂನು 1969ರ ಅಡಿಯಲ್ಲಿ ಹೊಸನಗರ ವಲಯ ಕಚೇರಿಯಲ್ಲಿ ಅರಣ್ಯ ಮೊಕದ್ದಮೆ ಸಂಖ್ಯೆ 14/2026-27 ದಾಖಲಿಸಲಾಗಿದೆ. ವಿಭಾಗದ ಪರವಾಗಿ ವಶಪಡಿಸಿಕೊಂಡಿರುವ ಮರದ ನಾಟ ತುಂಡುಗಳನ್ನು ಅಮಾನತ್ತುಪಡಿಸಲಾಗಿದೆ.

Read More

ಶಿವಮೊಗ್ಗ : ರಸ್ತೆ ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳನ್ನು ತೆರವು ಮಾಡುವಾಗ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಹೈಡ್ರಾಮಾ ನಡೆದಿದೆ. ವ್ಯಾಪಾರಿಯೊಬ್ಬ ಮಾವಿನ ಹಣ್ಣುಗಳನ್ನೆಲ್ಲ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದಲ್ಲಿ ಕೆಲವರು ಮುಖ್ಯರಸ್ತೆಯ ಮೇಲೆಯೇ ವ್ಯಾಪಾರ ನಡೆಸುತ್ತಿದ್ದರು. ರಸ್ತೆ ಬಿಟ್ಟು ವ್ಯಾಪಾರ ನಡೆಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಾಪಾರಿಗಳಿಗೆ ಸೂಚಿಸಿದರು. ಇಂದು ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ವ್ಯಾಪಾರಿಯೊಬ್ಬ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಯೊಬ್ಬರು ಬುಟ್ಟಿಗಳಲ್ಲಿದ್ದ ಮಾವಿನ ಹಣ್ಣುಗಳನ್ನು ರಸ್ತೆಗೆ ಸುರಿದಿದ್ದಾರೆ. ಅಲ್ಲದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಮಾವಿನ ಹಣ್ಣುಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Read More

ಶಿವಮೊಗ್ಗ : ಕಲಿಕೆ, ನವೀನತೆ ಮತ್ತು ಸೃಜನಶೀಲ ಚಿಂತನೆಯೇ ಯಶಸ್ವಿ ಇಂಜಿನಿಯರ್‌ನ ನಿಜವಾದ ಗುರುತು ಎಂದು ಎಸ್.ಎನ್. ನಾಗರಾಜ ಹೇಳಿದರು. ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜುದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಿಸ್ಟಿರಿಯೊ ೬.೦’ ರಾಜ್ಯಮಟ್ಟದ ತಾಂತ್ರಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಎಂದರೆ ಕೇವಲ ಸರ್ಕ್ಯೂಟ್‌ಗಳು, ಮೈಕ್ರೊಪ್ರೊಸೆಸರ್‌ಗಳು ಅಥವಾ ಯಂತ್ರಗಳ ಅಧ್ಯಯ ನವಲ್ಲ. ಅದು ಕಾಣದ ಬುದ್ಧಿವಂತಿಕೆಯನ್ನು ಅರಿಯುವ ಪ್ರಯಾಣವಾಗಿದೆ. ಒಂದು ಸಣ್ಣ ಮೈಕ್ರೋಪ್ರೊಸೆಸರ್ ಕ್ಷಣಾರ್ಧದಲ್ಲಿ ಕೋಟ್ಯಾಂತರ ಕಾರ್ಯಗಳನ್ನು ನಿರ್ವಹಿ ಸುತ್ತದೆ. ಕಣ್ಣಿಗೆ ಕಾಣದ ಆ ಎಲೆಕ್ಟ್ರಾನಿಕ್ ವ್ಯವಸ್ಥೆಯೇ ಇಂದಿನ ಜಗತ್ತನ್ನು ಚಲಾಯಿಸುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಾಗ ಕೇವಲ ಯಂತ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲದೆ, ಅದರ ಹಿಂದೆ ಅಡಗಿರುವ ವಿಜ್ಞಾನ ಮತ್ತು ತಾಂತ್ರಿಕತೆಯನ್ನು ಅರ್ಥೈಸಿಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾರ್ಕ್ ಕೋಡಿಂಗ್‌ನಂತಹ ಸವಾಲುಗಳು ಮನಸ್ಸಿನ ಸ್ಪಷ್ಟತೆ, ತಾರ್ಕಿಕ ಚಿಂತನೆ ಹಾಗೂ ಕೋಡಿಂಗ್…

Read More

ಶಿವಮೊಗ್ಗ : ಮೈದಾನದಲ್ಲಿ ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸುವಂತಹ (ಫ್ಯಾನ್ ಪಾರ್ಕ್) ಅನುಭವ ನೀಡುವ ಐಪಿಎಲ್ ಫ್ಯಾನ್ ಪಾರ್ಕ್‌ನ್ನು ಶಿವಮೊಗ್ಗದಲ್ಲಿ ಮೇ16ರಂದು ಸಂಜೆ 6.30ಕ್ಕೆ ಎನ್‌ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಐಪಿಎಲ್ ಶಿವಮೊಗ್ಗ ವಿಭಾಗದ ಸಂಚಾಲಕ ನಾಗೇಂದ್ರ ಪಂಡಿತ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್‌ಇಎಸ್ ಮೈದಾನದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಗಾಗಿ ಸಿದ್ಧತೆ ಮಾಡಲಾಗಿದೆ. ಮೇ16ಸಂಜೆ ನಡೆಯುವ ಐಪಿಎಲ್ ಮ್ಯಾಚ್‌ಗಳನ್ನು ದೊಡ್ಡ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತಿದೆ. ಸುಮಾರು ೫ ಸಾವಿರ ನೋಡುಗರು ಇಲ್ಲಿಗೆ ಬರುವ ಸಾಧ್ಯತೆ ಇದೆ ಎಂದರು. ಬಹಳಷ್ಟು ಜನರು ಕ್ರಿಕೆಟ್ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಕ್ರೀಡಾಂಗಣದಲ್ಲೇ ಕುಳಿತು ನೋಡಿದ ಅನುಭವವಾಗುವಂತೆ ಈ ಫ್ಯಾನ್ ಪಾರ್ಕ್‌ನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಆಸನದ ವ್ಯವಸ್ಥೆ ಇರುವುದಿಲ್ಲ. ಜಮಖಾನದಲ್ಲಿ ಕುಳಿತುಕೊಂಡು ಅಥವಾ ಜನ ನಿಂತುಕೊಂಡೇ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಆನಂದಿಸಬೇಕು. ಕ್ರಿಕೆಟ್ ವೀಕ್ಷಣೆ ಜೊತೆಗೆ ಆಹಾರ ಮಳಿಗೆ, ಗೇಮ್ ಜೋನ್ ಇತ್ಯಾದಿಗಳು ಇರುತ್ತವೆ. ಈಗಾಗಲೇ ಹಲವು ನಗರಗಳಲ್ಲಿ ಈ…

Read More

ಸಾಗರ : ತಾಲೂಕಿನ ಆನಂದಪುರದ ಬಸ್ ನಿಲ್ದಾಣ ಮುಂಭಾಗ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಅಪರಿಚಿತ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೆ ತೆರಳಿರುವ ಘಟನೆ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆದಿದೆ. ಇನ್ನು ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ತಕ್ಷಣ ಆನಂದಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಮಾಡಿ ಕಾರು ನಿಲ್ಲಿಸದೆ ತೆರಳಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಶಿವಮೊಗ್ಗ : ನಗರದ ಎಂಆರ್‌ಎಸ್‌ ವೃತ್ತದಲ್ಲಿದ್ದ ಹಳೆಯ ವಾಟರ್‌ ಟ್ಯಾಂಕ್‌ ಅನ್ನು ಇಂದು ಮಧ್ಯಾಹ್ನ ಕೆಡವಲಾಯಿತು. ಈ ವಾಟರ್‌ ಟ್ಯಾಂಕ್‌ನಿಂದಾಗಿ ಈ ಸರ್ಕಲ್‌ ಡಬಲ್‌ ಟ್ಯಾಂಕ್‌ ಎಂದೇ ಪ್ರಖ್ಯಾತವಾಗಿತ್ತು. ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಈ ನೀರಿನ ಟ್ಯಾಂಕ್‌ ಬಳಕೆಗೆ ಯೋಗ್ಯವಿರಲಿಲ್ಲ ಮತ್ತು ಹಳೆಯದಾಗಿದ್ದರಿಂದ ನೀರು ಸೋರಿಕೆಯಾಗುತ್ತಿತ್ತು. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲಿಂದ ಸ್ವಲ್ಪ ದೂರದಲ್ಲಿ ಈಚೆಗೆ ಹೊಸ ಟ್ಯಾಂಕ್‌ ನಿರ್ಮಿಸಲಾಗಿತ್ತು. ಹಳೆಯ ಟ್ಯಾಂಕ್‌ ದುರ್ಬಲಗೊಂಡಿದ್ದರಿಂದ ಅದನ್ನು ಕೆಡವಲು ಅಧಿಕಾರಿಗಳು ನಿರ್ಧರಿಸಿದ್ದರು. ಇಂದು ಮಧ್ಯಾಹ್ನ ಜೆಸಿಬಿ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಹಳೆಯ ಟ್ಯಾಂಕ್‌ ಅನ್ನು ಕೆಡವಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಲ್‌ನಲ್ಲಿ ಕೆಲವು ಹೊತ್ತು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸರ್ಕಲ್‌ನ ಸುತ್ತಲೂ ನಿಂತು ನೂರಾರು ಜನರು ಟ್ಯಾಂಕ್‌ ಉರುಳುವ ದೃಶ್ಯವನ್ನು ಕುತೂಹಲದಿಂದ ವೀಕ್ಷಿಸಿದರು. ಈ ಕಾರ್ಯಾಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈಗ ಸಂಚಾರ ಸುಗಮವಾಗಿದೆ.

Read More

ಶಿವಮೊಗ್ಗ : ಪ್ರೇಯಸಿಯೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ ಹಾಗೂ ಆಕೆಯ ಪ್ರೀಯಕರನಿಗೆ ಗಲ್ಲು ಶಿಕ್ಷೆ ವಿಧಿಸಿ ಭದ್ರಾವತಿ ಕೋರ್ಟ್ ತೀರ್ಪು ನೀಡಿದೆ. ಜನವರಿ 15, 2020 ರಂದು ಭದ್ರಾವತಿ ಪೇಪರ್ ಟೌನ್ ಪೊಲಿಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿಯಾದ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆ ರಾಜಶೇಖರಯ್ಯ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಆಕೆಯ ಗಂಡನಾದ ಪ್ರಕಾಶ್ ಬಾಬು ಇವರಿಬ್ಬರ ಸಂಬಂಧಕ್ಕೆ ಅಡ್ಡಿ ಬರುತ್ತಾನೆ ಎಂದು ಆರೋಪಿತರಿಬ್ಬರು ಸೇರಿ ಪ್ರಕಾಶ್ ಬಾಬುವಿಗೆ ಮತ್ತು ಬರುವ ಔಷದಿಯನ್ನು ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ರು. ಈ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಈ.ಓ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಭದ್ರಾವತಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ ಗಲ್ಲು ಶಿಕ್ಷೆ ಹಾಗೂ…

Read More