Subscribe to Updates
Get the latest creative news from FooBar about art, design and business.
Author: Raghu Shetty
ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಅಂಗವಾಗಿ ನಾರಿ ಶಕ್ತಿ ಮಹಾ ಶಕ್ತಿ ಜಾಥಾ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಗಮನ ಸೆಳೆಯಿತು. ೩೦೦ಕ್ಕೂ ಹೆಚ್ಚಿನ ಮಹಿಳೆಯರು ಸೇರಿದ್ದ ಈ ಕಾರ್ಯಕ್ರಮ ನಿಜಕ್ಕೂ ನಾರಿಶಕ್ತಿಯನ್ನು ಪ್ರತಿಬಿಂಬಿಸುವಂತಿತ್ತು.ಶಾಸಕರಾದ ಎಸ್.ಎನ್. ಚನ್ನಬಸಪ್ಪ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕಿಷ್ ಬಾನು ರವರು ಜಾಥಾ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಮಹಿಳೆಯರು ವಿವಿಧ ವೇಷ ತೊಟ್ಟು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಮಹಿಳಾ ದಸರಾ ಸಮಿತಿಯ ಕಾರ್ಯದರ್ಶಿ ಅನುಪಮಾ ಮತ್ತು ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಶಿವಮೊಗ್ಗ : ಪರಿಶಿಷ್ಟ ಸಮುದಾಯಕ್ಕೆ ಸುಮಾರು ೫೧ ಜಾತಿ ಇದ್ದು, ಪ್ರಸ್ತುತ ಗೊಂಡ, ಕುರುಬ, ಕೋಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸುವದಕ್ಕೆ ಸಿದ್ದರಾಮಯ್ಯನವರ ನೇತ್ರತ್ವದ ಸರ್ಕಾರವು ಪ್ರಸ್ತಾವನೆಯನ್ನು ಮಾಡಿರುವುದು ಖಂಡನೀಯ, ಇದನ್ನು ತಕ್ಷಣದಲ್ಲಿ ಕೈ ಬಿಡುವಂತೆ ದಿಶಾ ಸಮಿತಿ ಸದಸ್ಯರಾದ ಗಿರೀಶ್ ಈ ಭದ್ರಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸೌಲಭ್ಯಗಳನ್ನು ಪರಿಶಿಷ್ಟ ಸಮುದಾಯದಿಂದ ಕಸಿದುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ ರಾಜ್ಯದಲ್ಲಿ ಕುರುಬ ಸಮಾಜ ಮತ್ತು ಪರಿಶಿಷ್ಟ ಸಮುದಾಯವರು ಅಣ್ಣ-ತಮ್ಮಂದಿರಂತೆ ಇದ್ದು ಸಂಬಂಧ ನಡುವೆ ವಿಷ ಬೀಜ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಆದಂತಹ ಸತೀಶ ಎಲ್. ಜಾರಕಿಹೊಳಿ ಪರಿಶಿಷ್ಟ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ತಿಳಿದರು ಕೂಡ ಯಾವುದೇ ರೀತಿಯಲ್ಲಿ ವಿರೋದ ವ್ಯಕ್ತಪಡಿಸುತ್ತಿಲ್ಲ. ಇದ್ದರಿಂದ ಅವರಿಗೆ ಮುಂದಿನ ರಾಜಕೀಯ ಭವಿಷ್ಯ ಕುತ್ತ ಬರುವ ಸಾಧ್ಯತೆಯಿದೆ, ಮುಂದಿನ ದಿನಗಳಲ್ಲಿ ಈ ಅನ್ಯಾಯವು ಮುಂದುವರೆದರೇ ನಮ್ಮ ಸಮುದಾಯದ ಶ್ರೀ…
ಶಿವಮೊಗ್ಗ : ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಅದರ ನಿಮಿತ್ತ ನಗರದ ಪ್ರಮುಖ ವೃತ್ತಗಳು, ರಸ್ತೆಗಳನ್ನು ಹಸಿರು ಬಂಟಿಗ್ಸ್ ತೋರಣದ ಮೂಲಕ ಶೃಂಗರಿಸಲಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ನಗರದ ಸುನ್ನಿ ಜಮಾಯಿತಿ ಉಲ್ಟಾ ಕಮಿಟಿ ಯು ಮೆರವಣಿಗೆಗೆ ಸಜ್ಜಾಗಿದೆ. ಶಾಂತಿಯುತ ಮತ್ತು ಸೌಹಾರ್ದಯುತ ಮೆರವಣಿಗೆ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಸೇರುವ ನಿರೀಕ್ಷೆಯಿದೆ. ಮೆರವಣಿಗೆಯು ಸೆ.15 ರಂದು ಮಧ್ಯಾಹ್ನ 3.00 ನಗರದ ಗಾಂಧೀಬಜಾರ್ ನ ಜಾಮೀಯಾ ಮಸೀದಿ ಮುಂಭಾಗದಿಂದ ಶುರುವಾಗಿ, ಲಷ್ಕರ್ ಮೊ ಹಲ್ಲಾ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಸರ್ಕಲ್, ಬಿಎಚ್, ರಸ್ತೆ, ನೆಹರು ರಸ್ತೆ, ಮಾರ್ನಮಿ ಬೈಲ್, ಕೆ.ಆರ್. ಪುರಂ ರಸ್ತೆ ಮೂಲಕ ಸಾಗಲಿದೆ. ರಾತ್ರಿ 9 ಗಂಟೆಯಿಂದ 10.00 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು. ಅಲ್ಲಿ ಸಮಾಜದ ಗಣ್ಯರನ್ನು, ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ರಾತ್ರಿ 10.00 ರಿಂದ ಮೌಲನಾ ಅವರ ಕಾರ್ಯಕ್ರಮಗಳು ನಡೆಯಲಿವೆ. ಹಿಂದೂ…