Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಮನುಷ್ಯರು ಮಾಡುವ ತಪ್ಪಿಗೆ ಮೂಕಪ್ರಾಣಿಯನ್ನು ಹೊಣೆ ಮಾಡುವುದು ಎಷ್ಟು ಸರಿ?

October 26, 2026

ಶಿವಮೊಗ್ಗ ಮುಕ್ತ ವಿವಿ ಪರೀಕ್ಷಾ ಅಕ್ರಮ: ನಿರ್ದೇಶಕ ಕರ್ತವ್ಯದಿಂದ ಬಿಡುಗಡೆ, ಪರೀಕ್ಷೆಗಳು ಮುಂದೂಡಿಕೆ

October 24, 2026

ಬೆದರಿದ ಸೋಮಣ್ಣ; ಅಂಬಾರಿ ಮೆರವಣಿಗೆ ರದ್ದು

October 21, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»11 ದಿನ ವೈಭವದ ದಸರಾ; ವೈವಿಧ್ಯಮಯ ಕಾರ್ಯಕ್ರಮಗಳ ಸರಮಾಲೆ
ಪ್ರಮುಖ ಸುದ್ದಿ

11 ದಿನ ವೈಭವದ ದಸರಾ; ವೈವಿಧ್ಯಮಯ ಕಾರ್ಯಕ್ರಮಗಳ ಸರಮಾಲೆ

an-11-day-grand-dasara-a-series-of-diverse-events
Raghu ShettyBy Raghu ShettyOctober 6, 2026No Comments6 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ ದಸರಾ–2026

11 ದಿನಗಳ ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ

ಅ.11 | ಭಾನುವಾರ

  • ಬೆಳಿಗ್ಗೆ 11: ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ, ಉದ್ಘಾಟನೆ ಹಾಗೂ ಚಾಲನೆ — ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟೆ ರಸ್ತೆ. ಚಲನಚಿತ್ರ ನಟ ಶ್ರೀನಾಥ್ ನೆರವೇರಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು.
  • ಸಂಜೆ 6: ಯುವ ದಸರಾ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ — ಕುವೆಂಪು ರಂಗಮಂದಿರ. ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರ್ಯಪ್ಪ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಕಲ್ಮನೆ, ವಾರ್ತಾಧಿಕಾರಿ ಮಾರುತಿ ಆರ್. ಸೇರಿದಂತೆ ಗಣ್ಯರು ಭಾಗವಹಿಸುವರು.

ಅ.12 | ಸೋಮವಾರ

  • ಬೆಳಿಗ್ಗೆ 9: ಮಕ್ಕಳ ದಸರಾ — ಕುವೆಂಪು ರಂಗಮಂದಿರ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ ಸಿ. ಉದ್ಘಾಟಿಸುವರು.
  • ಬೆಳಿಗ್ಗೆ 10.30: ರಂಗ ದಸರಾ — ಸುವರ್ಣ ಸಾಂಸ್ಕೃತಿಕ ಭವನ (ರಂಗಾಯಣ). ರಂಗಭೂಮಿ ಕಲಾವಿದ ಹರಿಗೋಪಾಲಸ್ವಾಮಿ ಹಾಗೂ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಉಪಸ್ಥಿತರಿರುವರು.
  • ಸಂಜೆ 5: ಸಾಹಿತ್ಯ ಸಂಭ್ರಮ — ಕುವೆಂಪು ರಂಗಮಂದಿರ. ಖ್ಯಾತ ಕವಿ ಹಾಗೂ ಲೇಖಕ ಡುಂಡಿರಾಜ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ ಕೆ.ಆರ್., ಮೆಸ್ಕಾಂ ಮುಖ್ಯ ಅಭಿಯಂತರ ನಾಗರಾಜ್ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅನ್ನಪೂರ್ಣ ನಾಗಪ್ಪ ಭಾಗವಹಿಸುವರು.

ಅ.13 | ಮಂಗಳವಾರ

  • ಬೆಳಿಗ್ಗೆ 10.30: ಮಹಿಳಾ ದಸರಾ — ಕುವೆಂಪು ರಂಗಮಂದಿರ. ಚಲನಚಿತ್ರ ನಟಿ ಅಭಿನಯ ಹಾಗೂ ಸರಿಗಮಪ ಖ್ಯಾತಿಯ ಕು. ಸುರಕ್ಷಾ ದಾಸ್ ಭಾಗವಹಿಸುವರು. ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಉಪಸ್ಥಿತರಿರುವರು.
  • ಸಂಜೆ 4: ಪರಿಸರ ದಸರಾ, ನಾಟಕ ಪ್ರದರ್ಶನ — ಸುವರ್ಣ ಸಾಂಸ್ಕೃತಿಕ ಭವನ. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ನರಾಯಣ್ ಉದ್ಘಾಟಿಸುವರು.

ಅ.14 | ಬುಧವಾರ

  • ಬೆಳಿಗ್ಗೆ 10: ಕಲಾ ದಸರಾ — ಶಿವಪ್ಪನಾಯಕ ಅರಮನೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಎಚ್.ಸಿ. ಭಾಗವಹಿಸುವರು.
  • ಬೆಳಿಗ್ಗೆ 10: ಚಲನಚಿತ್ರ ದಸರಾ — ಸುವರ್ಣ ಸಾಂಸ್ಕೃತಿಕ ಭವನ. ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಉದ್ಘಾಟಿಸುವರು.
  • ಸಂಜೆ 4: ಕಲಾ ಜಾಥಾ — ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆವರೆಗೆ. ವೃತ್ತ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಉದ್ಘಾಟಿಸುವರು.
  • ಸಂಜೆ 6: ಜನಪದ ಕಲಾ ವೈಭವ — ಶಿವಪ್ಪನಾಯಕ ಅರಮನೆ. ಜನಪದ ಅಕಾಡೆಮಿ ಸದಸ್ಯರು ಹಾಗೂ ಜನಪದ ಕಲಾವಿದ ದೇವಾನಂದ್ ವರಪ್ರಸಾದ್ ಭಾಗವಹಿಸುವರು.
  • ಸಂಜೆ 7: ರಂಗ ಸಂತೆ — ಕುವೆಂಪು ರಂಗಮಂದಿರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ಉದ್ಘಾಟಿಸುವರು.

ಅ.15 | ಗುರುವಾರ

  • ಬೆಳಿಗ್ಗೆ 8: ಪರಿಸರ ದಸರಾ — ಹಳೆ ಜೈಲು ಮುಖ್ಯ ದ್ವಾರದ ಪಕ್ಕದ ಉದ್ಯಾನ. ಈಶ್ವರವನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನವ್ಯಶ್ರೀ ನಾಗೇಶ್ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ. ಭಾಗವಹಿಸುವರು.
  • ಬೆಳಿಗ್ಗೆ 9: ರೈತ ದಸರಾ ಜಾಥಾ — ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ಮೈದಾನ, ಬಿ.ಎಚ್. ರಸ್ತೆ. ಜಿಲ್ಲಾ ಪ್ರಗತಿಪರ ರೈತ ಆಶಾರಾಣಿ ಸಿ.ಎಸ್. ಉಪಸ್ಥಿತರಿರುವರು.
  • ಬೆಳಿಗ್ಗೆ 10: ಯುವ ದಸರಾ ‘ಟ್ರೆಷರ್ ಹಂಟ್’ — ಮಹಾನಗರ ಪಾಲಿಕೆ ಆವರಣ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಎಸ್. ಬಣಕಾರ್ ಉದ್ಘಾಟಿಸುವರು.
  • ಬೆಳಿಗ್ಗೆ 11: ರೈತ ದಸರಾ ವೇದಿಕೆ ಕಾರ್ಯಕ್ರಮ ಹಾಗೂ ಕೃಷಿ ಉಪನ್ಯಾಸ — ಕುವೆಂಪು ರಂಗಮಂದಿರ. ಪ್ರಗತಿಪರ ರೈತ ದಯಾನಂದ ಎಸ್.ಎಂ. ಉದ್ಘಾಟಿಸುವರು. ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿಶೇಷ ಆಹ್ವಾನಿತರಾಗಿರುವರು.
  • ಸಂಜೆ 5: ಕಲಾ ದಸರಾ ಹಾಸ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ — ಶಿವಪ್ಪನಾಯಕ ಅರಮನೆ. ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿ ಹಾಗೂ ಜಿಲ್ಲಾ ಸಶಸ್ತ್ರ ಪಡೆ ಪೊಲೀಸ್ ಉಪಾಧೀಕ್ಷಕ ದಿಲೀಪ್ ಎಸ್.ವಿ. ಉಪಸ್ಥಿತರಿರುವರು.
  • ಸಂಜೆ 5: ಯಕ್ಷ ಸಂಭ್ರಮ — ಕುವೆಂಪು ರಂಗಮಂದಿರ. ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಉದ್ಘಾಟಿಸುವರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹನುಮಂತಪ್ಪ ಉಪಸ್ಥಿತರಿರುವರು.
  • ಸಂಜೆ 5: ಮಕ್ಕಳ ದಸರಾ ಸಮಾರೋಪ — ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್). ಸರಿಗಮಪ ಗಾಯಕಿ ಕು. ಕೀರ್ತಿ ಎಸ್. ಉದ್ಘಾಟಿಸುವರು. ಸೂಡಾ ಆಯುಕ್ತ ಮಂಜುನಾಥ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಎಸ್.ಆರ್. ಹಾಗೂ ಶಿವಮೊಗ್ಗ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಮಂಜೇಶ್ ಗೌಡ ಭಾಗವಹಿಸುವರು.
  • ಸಂಜೆ 6: ಆಹಾರ ಮೇಳ — ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್). ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್. ಉದ್ಘಾಟಿಸುವರು. ಡಿಹೆಚ್‌ಒ ಡಾ. ನಟರಾಜ್ ಉಪಸ್ಥಿತರಿರುವರು.

ಅ.16 | ಶುಕ್ರವಾರ

  • ಬೆಳಿಗ್ಗೆ 9.30–10.30: ಗಮಕ ದಸರಾ — ಎಸ್.ಆರ್.ಎನ್.ಎಂ. ಕಾಲೇಜು, ಶಿವಮೊಗ್ಗ. ಮಾಜಿ ಶಾಸಕ ವೈ.ಎಸ್.ವಿ. ದತ್ತ ಉದ್ಘಾಟಿಸುವರು. ಕಗಕಪ ಅಧ್ಯಕ್ಷ ಎಚ್.ಆರ್. ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಉಪಸ್ಥಿತರಿರುವರು.
  • ಬೆಳಿಗ್ಗೆ 10: ಆಹಾರ ದಸರಾ, ಅಡುಗೆ ಸ್ಪರ್ಧೆ — ವೀರಶೈವ ಕಲ್ಯಾಣ ಮಂಟಪ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸತೀಶ್ ಉದ್ಘಾಟಿಸುವರು.
  • ಸಂಜೆ 5: ಯುವ ದಸರಾ ‘ಟ್ಯಾಲೆಂಟ್ ಹಂಟ್’ — ಸಿಟಿ ಸೆಂಟರ್ ಮಾಲ್. ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಗಣೇಶ್ ಎಸ್. ಉದ್ಘಾಟಿಸುವರು.
  • ಸಂಜೆ 6.30: ಗೀತ ಸಂಗಮ — ಶ್ರೀ ಅಲ್ಲಮಪ್ರಭು ಮೈದಾನ. ಗೀತಾ ಭಟ್ಟ ಮತ್ತು ತಂಡದವರು ಕಾರ್ಯಕ್ರಮ ನೀಡುವರು. ಕನ್ನಡಸಂಘಂ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಉದ್ಘಾಟಿಸುವರು.
  • ಸಂಜೆ 7.30: ರಂಗಗೀತೆ ಗಾಯನ ಹಾಗೂ ನೃತ್ಯರೂಪಕ — ಶ್ರೀ ಅಲ್ಲಮಪ್ರಭು ಮೈದಾನ. ಜಂಟಿ ನಿರ್ದೇಶಕಿ ಗೀತಾ ಎನ್. ಯುರೆಶೀಮಿ ಉದ್ಘಾಟಿಸುವರು.
  • ರಾತ್ರಿ 8.30: ಸಂಗೀತ ಸಂಭ್ರಮ — ಶ್ರೀ ಅಲ್ಲಮಪ್ರಭು ಮೈದಾನ. ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಘೇಂದ್ರ ಜಿ. ಶಿರೋಳ್ಕರ್ ಉದ್ಘಾಟಿಸುವರು.

ಅ.17 | ಶನಿವಾರ

  • ಬೆಳಿಗ್ಗೆ 10: ಪುರಾತನ ನಾಣ್ಯ ಪ್ರದರ್ಶನ — ವೀರಶೈವ ಕಲ್ಯಾಣ ಮಂದಿರ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು.
  • ಬೆಳಿಗ್ಗೆ 10: ಆಹಾರ ದಸರಾ, ಇಡ್ಲಿ ಹಾಗೂ ಹಣ್ಣು ತಿನ್ನುವ ಸ್ಪರ್ಧೆ — ಶಿವಪ್ಪನಾಯಕ ವೃತ್ತ. ವೃತ್ತ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಉದ್ಘಾಟಿಸುವರು.
  • ಬೆಳಿಗ್ಗೆ 11: ಕಲಾ ಮತ್ತು ಜ್ಞಾನ ದಸರಾ — ಕುವೆಂಪು ರಂಗಮಂದಿರ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಅತೀಶ್ ಎಸ್. ಶೆಟ್ಟಿ ಕಾರ್ಯಕ್ರಮ ನಡೆಸಿಕೊಡುವರು.
  • ಸಂಜೆ 5.30: ಸ್ವರ ಸಂಭ್ರಮ — ಶ್ರೀ ಅಲ್ಲಮಪ್ರಭು ಮೈದಾನ. ಶಾಸಕ ಶಾರದಾ ಪೂರ್ಯಾನಾಯ್ಕ್ ಉದ್ಘಾಟಿಸುವರು. ಕೆ.ಬಿ. ಪ್ರಸನ್ನಕುಮಾರ್ ಹಾಗೂ ಕೆ.ಎನ್. ರಾಮಕೃಷ್ಣ ಮುಖ್ಯ ಅತಿಥಿಗಳಾಗಿರುವರು.
  • ಸಂಜೆ 6: ಸಂಗೀತ ಜನಪದ ಜುಗಲ್‌ಬಂದಿ — ಶ್ರೀ ಅಲ್ಲಮಪ್ರಭು ಮೈದಾನ. ಶಾಸಕ ಶಾರದಾ ಪೂರ್ಯಾನಾಯ್ಕ್ ಉದ್ಘಾಟಿಸುವರು.
  • ಸಂಜೆ 7.30: ತಬಲ ತರಂಗ — ಶ್ರೀ ಅಲ್ಲಮಪ್ರಭು ಮೈದಾನ. ಶಾಸಕ ಶಾರದಾ ಪೂರ್ಯಾನಾಯ್ಕ್ ಉದ್ಘಾಟಿಸುವರು.

ಅ.18 | ಭಾನುವಾರ

  • ಬೆಳಿಗ್ಗೆ 5.30: ಯೋಗ ದಸರಾ — ಶ್ರೀ ಅಲ್ಲಮಪ್ರಭು ಮೈದಾನ. ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು.
  • ಸಂಜೆ 5.30: ಉತ್ಕೃಷ್ಟ ಜಾಗೃತಿ ಹಾಗೂ ಭಕ್ತಿ ರಂಜನ — ಶ್ರೀ ಅಲ್ಲಮಪ್ರಭು ಮೈದಾನ. ಚಲನಚಿತ್ರ ನಟಿ ಪದ್ಮಾ ವಾಸಂತಿ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕುಮಾರಸ್ವಾಮಿ, ಅಶೋಕ್ ನಾಯ್ಡು ಹಾಗೂ ಎಸ್. ರುದ್ರೇಗೌಡ ಉಪಸ್ಥಿತರಿರುವರು.

ಅ.19 | ಸೋಮವಾರ

  • ಬೆಳಿಗ್ಗೆ 11.30: ರಂಗ ದಸರಾ ಸಮಾರೋಪ ಸಮಾರಂಭ — ಸುವರ್ಣ ಸಾಂಸ್ಕೃತಿಕ ಭವನ. ರಂಗಭೂಮಿ ಕಲಾವಿದ ಲಕ್ಷ್ಮೀನಾರಾಯಣ ರಾವ್ ಕೆ. ಉದ್ಘಾಟಿಸುವರು.
  • ಸಂಜೆ 5.30: ನಾಟ್ಯ ವೈಭವ ಹಾಗೂ ಜಾನಪದ ವೈಭವ — ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್). ಚಲನಚಿತ್ರ ನಟ ಪೃಥ್ವಿ ಅಂಬಾರ್ ಭಾಗವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್.ಕೆ. ಸಿದ್ದರಾಮಣ್ಣ ಹಾಗೂ ಎನ್.ಕೆ. ಜಗದೀಶ್ ಉಪಸ್ಥಿತರಿರುವರು.

ಅ.20 | ಮಂಗಳವಾರ

  • ಸಂಜೆ 5: ಯುವ ದಸರಾ ಮ್ಯೂಸಿಕಲ್ ನೈಟ್ — ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್). ಚಲನಚಿತ್ರ ನಟ ವಿ. ರವಿಚಂದ್ರನ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟಿ ಸಾಧು ಕೋಕಿಲ ಭಾಗವಹಿಸುವರು. ಸಚಿವ ಎಸ್. ಮಧು ಬಂಗಾರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಆಯನೂರು ಮಂಜುನಾಥ್, ಪ್ರಸನ್ನಕುಮಾರ್, ಆರ್. ಯೋಗೇಶ್ ಹಾಗೂ ಎಚ್.ಸಿ. ಯೋಗೇಶ್ ಭಾಗವಹಿಸುವರು.

ಅ.21 | ಬುಧವಾರ

  • ಸಂಜೆ 4: ಸಂಗೀತ ಸೀಮೋಲ್ಲಂಘನ — ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್). ಗಾಯಕಿ ಸುರೇಖಾ ಹೆಗಡೆ ಹಾಗೂ ಸಂಗಡಿಗರಿಂದ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಆಕರ್ಷಣೆ

ದಸರಾ ಮಹೋತ್ಸವದ ಅಂಗವಾಗಿ ರಾವಣ ದಹನ, ಆಕರ್ಷಕ ಪಟಾಕಿ ಸಿಡಿತ, ವರ್ಣರಂಜಿತ ಲೇಸರ್ ಶೋ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಚಾಮುಂಡೇಶ್ವರಿಗೆ ಚಿನ್ನದ ಅಲಂಕಾರ; ವೈಭವದ ದಸರಾ ಮೆರವಣಿಗೆ

ಶಿವಮೊಗ್ಗ: ಈ ಬಾರಿ ಶಿವಮೊಗ್ಗ ದಸರಾ ನಾಡಹಬ್ಬವನ್ನು ಅತ್ಯಂತ ವೈಭವಯುತವಾಗಿ ಆಚರಿಸಲು ಮಹಾನಗರ ಪಾಲಿಕೆ ಸಿದ್ಧತೆ ಕೈಗೊಂಡಿದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅ.11ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಚುನಾಯಿತ ಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ದಸರಾವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿ ಮಹಾನಗರ ಪಾಲಿಕೆಯ ಮೇಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.

ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ದೇವಿಯ ಮುಖವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಆಚರಣೆಗಳ ಜತೆಗೆ ಕಲೆ, ಸಾಹಿತ್ಯ, ಜನಪದ, ಕ್ರೀಡೆ, ಮಹಿಳಾ, ಮಕ್ಕಳ, ರೈತ ಹಾಗೂ ಯುವ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ನಗರದ ವಿವಿಧೆಡೆ 11 ದಿನಗಳ ಕಾಲ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.

ಸಾಂಸ್ಕೃತಿಕ ವೈಶಿಷ್ಟ್ಯ ಬಿಂಬಿಸುವ ದಸರಾ

ಶಿವಮೊಗ್ಗ: ದಸರಾ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಶಿವಮೊಗ್ಗದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಬಿಂಬಿಸುವ ರೀತಿಯಲ್ಲಿ ಈ ಬಾರಿಯ ದಸರಾ ಆಚರಣೆ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ತಿಳಿಸಿದ್ದಾರೆ.

ಧಾರ್ಮಿಕ, ಸಾಂಸ್ಕೃತಿಕ, ಕಲಾ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ದಸರಾ ಆಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವೈಭವಯುತವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

Shivamogga
Share. Facebook Twitter Pinterest LinkedIn Tumblr Email
Raghu Shetty
  • Website
  • Facebook
  • Instagram

Related Posts

ಮನುಷ್ಯರು ಮಾಡುವ ತಪ್ಪಿಗೆ ಮೂಕಪ್ರಾಣಿಯನ್ನು ಹೊಣೆ ಮಾಡುವುದು ಎಷ್ಟು ಸರಿ?

October 26, 2026

ಶಿವಮೊಗ್ಗ ಮುಕ್ತ ವಿವಿ ಪರೀಕ್ಷಾ ಅಕ್ರಮ: ನಿರ್ದೇಶಕ ಕರ್ತವ್ಯದಿಂದ ಬಿಡುಗಡೆ, ಪರೀಕ್ಷೆಗಳು ಮುಂದೂಡಿಕೆ

October 24, 2026

ಬೆದರಿದ ಸೋಮಣ್ಣ; ಅಂಬಾರಿ ಮೆರವಣಿಗೆ ರದ್ದು

October 21, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,340 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,286 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026424 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026395 Views
Don't Miss
Home

ಮನುಷ್ಯರು ಮಾಡುವ ತಪ್ಪಿಗೆ ಮೂಕಪ್ರಾಣಿಯನ್ನು ಹೊಣೆ ಮಾಡುವುದು ಎಷ್ಟು ಸರಿ?

By Raghu ShettyOctober 26, 20260

ದಸರಾ ಜಂಬೂಸವಾರಿಯಲ್ಲಿ ಸೋಮಣ್ಣ ಆನೆ ಗಾಬರಿಗೊಂಡ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ; ತಪ್ಪು ಯಾರದ್ದು ಎಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ…

ಶಿವಮೊಗ್ಗ ಮುಕ್ತ ವಿವಿ ಪರೀಕ್ಷಾ ಅಕ್ರಮ: ನಿರ್ದೇಶಕ ಕರ್ತವ್ಯದಿಂದ ಬಿಡುಗಡೆ, ಪರೀಕ್ಷೆಗಳು ಮುಂದೂಡಿಕೆ

October 24, 2026

ಬೆದರಿದ ಸೋಮಣ್ಣ; ಅಂಬಾರಿ ಮೆರವಣಿಗೆ ರದ್ದು

October 21, 2026

ಸ್ಟಿಂಗ್ ಆಪರೇಷನ್‌ನ ಮೊದಲ ಬಲಿ ನಾನೇ

October 19, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನ್ನಭಾಗ್ಯ ಅಕ್ಕಿ ಕಳಪೆ: ಫಲಾನುಭವಿಗಳ ಆಕ್ರೋಶ

September 21, 20260 Views

ಸಮೀಕ್ಷೆಗಾಗಿ ರಾಜ್ಯದಲ್ಲಿ ೧.೬೦ ಲಕ್ಷ ಶಿಕ್ಷಕರನ್ನು ನೇಮಕ

September 22, 20251 Views

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಕಾರಾವಾಸ

March 11, 20261 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.