Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಅಪರಾಧ ಲೋಕ»ಫೇಸ್‌ಬುಕ್ ಸ್ನೇಹದ ಹೆಸರಿನಲ್ಲಿ ನಕಲಿ ಪ್ರೇಮ ವಂಚನೆ: ಶಿವಮೊಗ್ಗ ಯುವತಿಗೆ ₹2.15 ಲಕ್ಷ ನಷ್ಟ
ಅಪರಾಧ ಲೋಕ

ಫೇಸ್‌ಬುಕ್ ಸ್ನೇಹದ ಹೆಸರಿನಲ್ಲಿ ನಕಲಿ ಪ್ರೇಮ ವಂಚನೆ: ಶಿವಮೊಗ್ಗ ಯುವತಿಗೆ ₹2.15 ಲಕ್ಷ ನಷ್ಟ

Fake love scam
Raghu ShettyBy Raghu ShettyApril 21, 2026No Comments1 Min Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗದಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಕಲಿ ಕಥೆ ಹೇಳಿ ಯುವತಿಯನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವತಿ ಸುಮಾರು ₹2,15,000 ಕಳೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಎರಡು ತಿಂಗಳ ಹಿಂದೆ ಯುವತಿಗೆ “ಮೈಕೆಲ್” ಎಂಬ ಹೆಸರಿನ ವ್ಯಕ್ತಿಯ ಪರಿಚಯ ಫೇಸ್‌ಬುಕ್‌ನಲ್ಲಿ ಆಗಿತ್ತು. ಆತ ವಿಶ್ವಾಸ ಗಳಿಸಿ ಏಪ್ರಿಲ್ 6ರಂದು ಶಿವಮೊಗ್ಗಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದ. ಆದರೆ ಆ ದಿನ ಆತ ವಾಟ್ಸಾಪ್ ಮೂಲಕ ಸಂಪರ್ಕಿಸಿ, ತಾನು ಮುಂಬೈ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಿಲುಕಿಕೊಂಡಿರುವುದಾಗಿ ಹೇಳಿದ್ದಾನೆ.
ಸ್ವಲ್ಪ ಸಮಯದ ನಂತರ, ಮಹಿಳೆಯೊಬ್ಬರು ಕರೆ ಮಾಡಿ ತಮ್ಮನ್ನು ವಿಮಾನ ನಿಲ್ದಾಣ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಮೈಕೆಲ್ ಅವರನ್ನು ಬಿಡಿಸಲು ದಂಡ ಪಾವತಿಸಬೇಕೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿದ ಯುವತಿ ಏಪ್ರಿಲ್ 6 ಮತ್ತು 7 ರಂದು ನೆಟ್ ಬ್ಯಾಂಕಿಂಗ್ ಮತ್ತು ಫೋನ್‌ಪೇ ಮೂಲಕ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ಒಟ್ಟು ₹2,15,000 ಹಣ ಕಳೆದುಕೊಂಡ ನಂತರ ಮತ್ತೆ ಹಣ ಕೇಳಿದಾಗ ಯುವತಿಗೆ ಅನುಮಾನ ಮೂಡಿದೆ. ಕೂಡಲೇ ಅವರು ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಈ ಕುರಿತು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಬರ್ ವಂಚಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
 ಎಚ್ಚರಿಕೆ
ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅನಾಮಿಕ ವ್ಯಕ್ತಿಗಳಿಂದ ಹಣದ ಬೇಡಿಕೆ ಬಂದರೆ ತಕ್ಷಣ ಎಚ್ಚರಿಕೆ ವಹಿಸಲು ಹಾಗೂ ಯಾವುದೇ ಹಣ ವರ್ಗಾವಣೆ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Shivamogga
Share. Facebook Twitter Pinterest LinkedIn Tumblr Email
Raghu Shetty
  • Website
  • Facebook
  • Instagram

Related Posts

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,324 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,274 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026417 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026385 Views
Don't Miss
Home

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

By Raghu ShettyJuly 28, 20260

ಶಿವಮೊಗ್ಗ, : ವಿದ್ಯಾರ್ಥಿಗಳ ಬದುಕನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದಂತಹ ಸಾಮಾಜಿಕ ಪಿಡುಗನ್ನು ತಡೆಯಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಪರಿಣಾಮಕಾರಿ…

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026

ಗಾಳಿ-ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಗೆ ರವಾನೆ

July 25, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views

ರಂಗದಸರಾ; ಕುಟುಂಬ ರಂಗ ಕಾರ್ಯಕ್ರಮ

September 18, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.