ಶಿವಮೊಗ್ಗ: ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ ೧೩೧ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಏಪ್ರಿಲ್ ಅಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ.
ಇಂಡಿಗೋ ಸಂಸ್ಥೆಯು ಏಪ್ರಿಲ್ ೩೦ರ ವರೆಗಷ್ಟೇ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿದ್ದು, ಮೇ ೧ರಿಂದ ಯಾವುದೇ ಬುಕ್ಕಿಂಗ್ ಲಭ್ಯವಿಲ್ಲ. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆ ಡಿಜಿಸಿಎ (ಆಉಅಂ) ವಿಮಾನಯಾನ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ಪೈಲಟ್‌ಗಳ ಕೆಲಸದ ಅವಧಿ ಮತ್ತು ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳಿಂದಾಗಿ ಇಂಡಿಗೋ ಸಂಸ್ಥೆಗೆ ಪೈಲಟ್‌ಗಳು ಕೊರತೆ ಎದುರಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಸಂಸ್ಥೆಯು ಸಣ್ಣ ನಗರಗಳಿಗೆ ನೀಡುತ್ತಿದ್ದ ಎಟಿಆರ್ ವಿಮಾನ ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ಸ್ಥಗಿತ
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾರ್ಗಸೂಚಿಗಳ ಪ್ರಕಾರ, ಪೈಲಟ್‌ಗಳ ಕೊರತೆಯಿಂದಾಗಿ ಇಂಡಿಗೋ ಏರ್‌ಲೈನ್ಸ್ ಮೇ ೧ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, ಇಂಡಿಗೋ ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರತಿದಿನ ವಿಮಾನಗಳನ್ನು ಸಂಚರಿಸುತ್ತಿದೆ. ಕಂಪನಿಯು ಮೂರು ತಿಂಗಳ ಅವಧಿಗೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಮೇ ಮಧ್ಯಭಾಗದಿಂದ ಮಳೆಗಾಲವೂ ಪ್ರಾರಂಭವಾಗುವುದರಿಂದ ಇದು ಆಫ್-ಸೀಸನ್ ಅವಧಿಯಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದರು.
ಡಿಜಿಸಿಎ ನಿಯಮ
ಕಳೆದ ವರ್ಷ ಜೂನ್ ೧೨ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ (ಂI೧೭೧) ವಿಮಾನ ಅಪಘಾತದ ನಂತರ, ವಿಮಾನಗಳ ಸುರಕ್ಷಿತ ಸಂಚಲನಕ್ಕಾಗಿ ಡಿಜಿಸಿಎ ಕೆಲವು ನಿಯಮಗಳನ್ನು ರೂಪಿಸಿದೆ. ಅವುಗಳನ್ನು ಜಾರಿಗೆ ತರಲು ಏರ್‌ಲೈನ್ಸ್‌ಗಳಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ. ಆ ನಿಯಮಗಳನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇಂಡಿಗೋಗೆ ಪೈಲಟ್‌ಗಳ ಕೊರತೆ ಉಂಟಾಗಿ, ವಿಮಾನ ಸೇವೆಗೆ ವ್ಯತ್ಯಯ ಉಂಟಾಗಿದೆ.
ಪ್ರಸ್ತುತ ಸ್ಟಾರ್ ಏರ್ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಪ್ರತಿದಿನ ವಿಮಾನ ಸೇವೆ ನಡೆಸುತ್ತಿದೆ. ಸ್ಪೈಸ್‌ಜೆಟ್ ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಚೆನ್ನೈಗೆ ದಿನನಿತ್ಯ ವಿಮಾನಗಳನ್ನು ನಡೆಸುತ್ತಿದೆ. ಆದರೆ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಪ್ರಯಾಣಿಕರ ಸಂಚಾರವೇ ಹೆಚ್ಚು ಇದೆ.
Subscribe to Updates
Get the latest creative news from FooBar about art, design and business.
ಶಿವಮೊಗ್ಗದಿಂದ ಇಂಡಿಗೋ ವಿಮಾನ ಸಂಚಾರ ಸೇವೆ ಸ್ಥಗಿತ ಮೇ 1ರಿಂದ
IndiGo flight services to be suspended from May 1
