Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026

ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆಗೆ ಯತ್ನ

June 8, 2026

ಕುಸಿದ ಶರಾವತಿ ಹಿನ್ನೀರು ಮಟ್ಟ: ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ

June 8, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ನಮ್ಮ ಶಿವಮೊಗ್ಗ»ವಿಕಲಚೇತನರ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ
ನಮ್ಮ ಶಿವಮೊಗ್ಗ

ವಿಕಲಚೇತನರ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ

Raghu ShettyBy Raghu ShettySeptember 27, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

Necessary action for development

ಶಿವಮೊಗ್ಗ : ರಾಜ್ಯದ ಕಿವುಡ, ಮೂಕರು ಸೇರಿದಂತೆ ವಿಕಲಚೇತನರ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾ ಗಿರುವ ಎಲ್ಲಾ ರೀತಿಯ ಕ್ರಮಗಳನ್ನು ಮಾನವೀಯ ನೆಲೆಯಲ್ಲಿ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು
ಅವರು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಮೂಕರು ಮತ್ತು ಶ್ರವಣ ಮಾಂದ್ಯರ ಸಂಘ ಇವರುಗಳ ಸಂಯುಕ್ತಾಕ್ಷರದಲ್ಲಿ ಏರ್ಪಡಿಸಲಾಗಿದ್ದ ಕಿವುಡರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು
ಈ ಸಂಬಂಧ ರಾಜ್ಯದ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ ಅವರು ಅಕ್ಟೋಬರ್ ೦೩ರಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು
ವಿಕಲಚೇತನರಿಗೆ ಅಗತ್ಯವಾಗಿರುವ ನೆರವು ಆರ್ಥಿಕ ಸಹಕಾರ ನೀಡಲಾಗುವುದು ಎಂದ ಅವರು ರಾಜ್ಯದಾದ್ಯಂತ ಈಗಾಗಲೇ ೪೪ ವಿಶೇಷ ಶಾಲೆಗಳು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ ಅದಕ್ಕಾಗಿ ಸರ್ಕಾರ ಮಾಡುತ್ತಿರುವ ಹಣಕಾಸಿನ ವಿವರವನ್ನು ಪಡೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ ಹೆಚ್ ಶಂಕರ್ ಅವರು ಮಾತನಾಡಿ ರಾಜ್ಯದಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಸಂಖ್ಯೆಯ ವಿಕಲಚೇತನರಿದ್ದು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ ಅವರ ಕುಂದು ಕೊರತೆಗಳನ್ನು ಆಲಿಸುವರು ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ವಿಕಲಚತರಿಗೆ ನೀಡಲಾಗುತ್ತಿರುವ ೧೨೦೦ ರೂ. ಗಳ ಮಾಶಾಸನವನ್ನು ೫,೦೦೦ಗಳಿಗೆ ಏರಿಸಬೇಕಾದ ಅಗತ್ಯವಿದೆ ಅಲ್ಲದೆ ರಾಜ್ಯದಾ ದ್ಯಂತ ಸಂಚರಿಸಲು ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತ ಪ್ರಯಾಣಿಕೆ ಅವಕಾಶ ಕಲ್ಪಿಸಬೇಕು. ಪ್ರತಿ ಜಿಲ್ಲೆಯಲ್ಲಿಯೂ ವಿಕಲಚೇತನರಿಗೆ ಪ್ರತ್ಯೇಕವಾಗಿ ಶಾಲೆಗಳನ್ನು ಆರಂಭಿಸಿ ಸಂಜ್ಞಾ ಭಾಷೆಯ ತಜ್ಞ ಶಿಕ್ಷಕರನ್ನು ನಿಯೋಜಿಸುವಂತೆ ಅವರು ಮನವಿ ಮಾಡಿದರು. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ವಿಕಲಚೇತನರಿಗೆ ಕಿವುಡ ಮೂಕರಿಗೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ ಅವರು, ನಿರ್ಲಕ್ಷಕ್ಕೆ ಒಳಗಾಗಿರುವ ವಿಕಲಚೇತನರಿಗೆ ಬೆಂಬಲವಾಗಿ ನಿಲ್ಲುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಸಿಸಿಎಫ್ ಹನುಮಂತಪ್ಪ ಉಮಾಶಂಕರ್ ರಮೇಶ್ ದೇವರಾಜ್ ನವೀನ್ ಕುಮಾರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು

shivamoga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಡೈರಿ ಸರ್ಕಲ್ ಬಳಿ ಕೆಸರಿನಲ್ಲಿ ಸಿಲುಕಿದ LPG ಟ್ಯಾಂಕರ್: ಹೊರತೆಗೆಯಲು ಹರಸಾಹಸ, ಸ್ಥಳೀಯರಲ್ಲಿ ಆತಂಕ

June 4, 2026

ಮುಡುಬ ಬಳಿ ಅಡಿಕೆ ತೋಟಕ್ಕೆ ನುಗ್ಗಿದ ಐರಾವತ ಬಸ್‌

June 3, 2026

ಗಾರ್ಡನ್‌ ಏರಿಯಾದಲ್ಲಿ ಅಕ್ರಮ ಪುಟ್‌ಪಾತ್ ಒತ್ತುವರಿ ತೆರವು

June 3, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,308 Views

ದೊಡ್ಡಮ್ಮ ದೇವಸ್ಥಾನ ಬಳಿ ಕೈರ್ನ್ ಸಿಕ್ಕಿ ಕೂಲಿ ಕಾರ್ಮಿಕ ಸಾವು

June 6, 2026332 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025285 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026278 Views
Don't Miss
ಅಪರಾಧ ಲೋಕ

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

By Raghu ShettyJune 8, 20260

ಶಿವಮೊಗ್ಗ : ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಅನ್ವರ್ ಕಾಲೋನಿಯಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಭೀಕರ ದಾಳಿಯಲ್ಲಿ…

ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆಗೆ ಯತ್ನ

June 8, 2026

ಕುಸಿದ ಶರಾವತಿ ಹಿನ್ನೀರು ಮಟ್ಟ: ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ

June 8, 2026

ಸರ್ಕಾರದ ಖಾಸಗೀಕರಣ ನೀತಿಗೆ ರೈತರ ಆಕ್ರೋಶ

June 6, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಭದ್ರಾವತಿಯಲ್ಲಿ ಮನೆ ಕಳ್ಳತನ ಪ್ರಕರಣ ಪತ್ತೆ – 10 ಗ್ರಾಂ ಬಂಗಾರದ ಸರ ವಶ, ಆರೋಪಿಯ ಬಂಧನ

March 12, 20260 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.