Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026

ಜೂನ್ 16: ಉದ್ಯೋಗ ನೇರ ಸಂದರ್ಶನ

June 12, 2026

ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ

June 12, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»2026 ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ಪ್ರಮುಖ ಸುದ್ದಿ

2026 ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

Students perform well in 2026 PUC results
Raghu ShettyBy Raghu ShettyApril 9, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ: 2026ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಶೇಕಡಾ 87.62% ಫಲಿತಾಂಶ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ 30 ವಿದ್ಯಾರ್ಥಿಗಳು 590 ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದ ಉತ್ತಮ ಫಲಿತಾಂಶವಾಗಿದೆ.
ಕಾಲೇಜುಗಳಲ್ಲಿ ಸಾಧನೆ: ಜಿಲ್ಲೆಯಲ್ಲಿ ಸುಮಾರು 15 ಕಾಲೇಜುಗಳು 100% ಫಲಿತಾಂಶ ಸಾಧಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ

ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ಬೃಂದಾ 590, ಮಾಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಂಜನ 582, ಶಿಕಾರಿಪುರದ ಬನಸಿರಿ ಲಯನ್ಸ್ ಪದವಿಪೂರ್ವ ಕಾಲೇಜಿನ ಸಂಗೀತಾ ಕೆ.ಎಂ. 582, ಗುತ್ಯಮ್ಮ 582 ಅಂಕ ಗಳಿಸಿದ್ದಾರೆ.

———————————————————————————————–

ಆಯನೂರಿನ ಮಹಿನ್ ಖಾನ್ ಅಫ್ರಿದಿ ಜಿಲ್ಲೆಗೆ ಪ್ರಥಮ ರ‍್ಯಾಂಕ್

ಶಿವಮೊಗ್ಗ : ತಾಲ್ಲೂಕಿನ ಆಯನೂರು ಗ್ರಾಮದ ವಿದ್ಯಾರ್ಥಿನಿ ಮಹಿನ್ ಖಾನ್ ಅಫ್ರಿದಿ ಅವರು 600ರಲ್ಲಿ 596 ಅಂಕಗಳನ್ನು ಪಡೆದು ಜಿಲ್ಲೆಯ ಪ್ರಥಮ ರ‍್ಯಾಂಕ್ ಗಳಿಸಿ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಪ್ರಸ್ತುತ ಅವರು ನಗರದ ಪೇಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ತಂದೆ ಜಬೀರ್ ಮತ್ತು ತಾಯಿ ಆಯುಷಾ.

“ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗದೆ ಶ್ರದ್ದೆಯಿಂದ ಓದಿದ್ದೇನೆ. ವೈದ್ಯೆಯಾಗುವುದು ನನ್ನ ಕನಸು, ಅದಕ್ಕಾಗಿ ಅಗತ್ಯವಾದ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇನೆ,”
: ಮಹಿನ್ ಖಾನ್ ಅಫ್ರಿದಿ,

———————————————————————————————
ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ,”

ವಾಣಿಜ್ಯ ವಿಭಾಗದಲ್ಲಿ ಶಿವಮೊಗ್ಗ ವಿಕಾಸ ಪದವಿ ಪೂರ್ವ ಕಾಲೇಜಿನ ರಕ್ಷಿತಾ ಜಿ.596, ಶಿವಮೊಗ್ಗ ಡಿ.ವಿ.ಎಸ್.ಸ್ವತಂತ್ರ್ಯ ಪದವಿ ಪೂರ್ವ ಕಾಲೇಜಿನ ವಶಿಷ್ಠ ಎಸ್.ಎಸ್.595, ಸಾಗರ ಸರ್ಕಾರ ಪದವಿ ಪೂರ್ವ ಕಾಲೇಜಿನ ಕಾರ್ತಿಕ್ ಕಾಮತ್ 593, ಶಿಕಾರಿಪುರದ ಕುಮುದ್ವತಿ ಪದವಿ ಪೂರ್ವ ಕಾಲೇಜಿನ ವರ್ಷ ಎಂ.ಬಿ. 593 ಅಂಕ ಪಡೆದಿದ್ದಾರೆ.

—————————————————————————————————–

ಶಿವಮೊಗ್ಗ : ಜಿಲ್ಲೆಯಲ್ಲಿ ಸೊರಬ ಮೂಡಗೋಡಿನ ಸತೀಶ್ ಎಂ.ಎಸ್. ಮತ್ತು ಸುಮ ಎಂ.ಎಸ್.ಸುಮ ದಂಪತಿ ಪುತ್ರಿಯಾದ ಸಾದ್ವಿ ಎಮ್.ಎಸ್. ೬೦೦ ಅಂಕಗಳಿಗೆ ೫೯೪ ಸೈನ್ಸ್ ವಿಭಾಗದಲ್ಲಿ ಪಡೆದು ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಪೇಸ್ ಕಾಲೇಜಿನಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದರು.

“ನನ್ನ ಗುರುಗಳಿಗೂ, ತಾಯ್ತಂದೆಯ ಸಹಾಯದಿಂದ ನಾನು ಉತ್ತಮ ಅಂಕಗಳನ್ನು ಪಡೆದಿದ್ದೇನೆ. ಪರಿಶ್ರಮ ಮತ್ತು ಶಿಸ್ತಿ ಈ ಯಶಸ್ಸು ಕಾರಣವಾಗಿದೆ.
: ಸಾದ್ವಿ ಎಮ್.ಎಸ್. ವಿದ್ಯಾರ್ಥಿ

ನನ್ನ ಮಗಳು ಉತ್ತಮ ಅಂಕಗಳನ್ನು ಪಡೆದಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇದರ ಹಿಂದೆ ಅವಳ ಪರಿಶ್ರಮ, ಗುರುಗಳ ಮಾರ್ಗದರ್ಶನ ಮತ್ತು ನಮ್ಮ ಬೆಂಬಲ ಇದೆ. ಮುಂದೆಯೂ ಇದೇ ರೀತಿ ಪ್ರಯತ್ನಿಸಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ.
: ಸತೀಶ್ ಎಂ.ಎಸ್ ವಿದ್ಯಾರ್ಥಿ ತಂದೆ.

ವಿಷಯವಾರು ಅಂಕಗಳು:
ಇಂಗ್ಲಿಷ್ – ೯೭
ಸಂಸ್ಕೃತ್- ೧೦೦
ಫಿಜಿಕ್ಸ್ – ೯೯
ಕೆಮಿಸ್ಟ್ರಿ – ೯೯
ಗಣಿತ – ೯೯
ಕಂಪ್ಯೂಟರ್ ಸೈನ್ಸ್ – ೧೦೦

————————————————————————–

ವಿಜ್ಞಾನ ವಿಭಾಗದಲ್ಲಿ ಪೇಸ್ ಪದವಿ ಪೂರ್ವ ಕಾಲೇಜಿನ ಮಹಿನ್ ಖಾನ್ಂ ಆಫ್ರಿದಿ 596, ಶಿವಮೊಗ್ಗ ಸರ್,ಎಂ,ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನ ಸಿ.ಟಿ.ಜಿ.595 ಮ ಶಿಕಾರಿಪುರ ಕಮಲಮ್ಮ ವೃಷಬೇಂದ್ರ ಪದವಿ ಪೂರ್ವ ಕಾಲೇಜಿನ ಅಕ್ಷತಾ ಹೆಚ್.ಎಸ್.593 ಅಂಕ ಗಳಿಸಿದ್ದಾರೆ.

2026 ಸಾಲಿನಲ್ಲಿ ಕಲಾ ವಿಭಾಗದಲ್ಲಿ 3637 ವಿದ್ಯಾರ್ಥಿಗಳು ಪರೀಕ್ಷೆ ಕುಳಿತಿದ್ದು. 2701 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5865 ವಿದ್ಯಾರ್ಥಿಗಳಲ್ಲಿ 5139 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಸಾನ ವಿಭಾಗದಲ್ಲಿ 8030 ವಿದ್ಯಾರ್ಥಿಗಳಲ್ಲಿ 7521 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶಿವಮೊಗ್ಗ : ನಗರ ಸರ್‌ಎಂವಿ ಪದವಿಪೂರ್ವ ಕಾಲೇಜಿನ ಸಿರಿ ಟಿ.ಜಿ. ಸೈನ್ಸ್ ವಿಭಾಗದಲ್ಲಿ ೬೦೦/೫೯೫ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇವರು ಗಣಪತಿ ಮತ್ತು ಗುಣವತಿ ದಂಪತಿ ಪುತ್ರಿಯಾಗಿದ್ದಾರೆ.

ನಗರ ಪ್ರದೇಶದಲ್ಲಿ 10084 ವಿದ್ಯಾರ್ಥಿಗಳಲ್ಲಿ 8721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 7448 ವಿದ್ಯಾರ್ಥಿಗಳಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು 17532 ವಿದ್ಯಾರ್ಥಿಗಳಲ್ಲಿ 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

—————————————————————

2025 ಸಾಲಿನ ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದಿಂದ 3598 ವಿದ್ಯಾರ್ಥಿಗಳಲ್ಲಿ 2373 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಿಂದ 5602 ವಿದ್ಯಾರ್ಥಿಗಳಿಂದ 4483 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 7577 ವಿದ್ಯಾರ್ಥಿಗಳಲ್ಲಿ 6550 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಭಾಗದಲ್ಲಿ 12892 ವಿದ್ಯಾರ್ಥಿಗಳಲ್ಲಿ 10508 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 3885 ವಿದ್ಯಾರ್ಥಿಗಳಲ್ಲಿ 2898 ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ.
ಒಟ್ಟು 16777 ವಿದ್ಯಾರ್ಥಿಗಳಲ್ಲಿ 13406 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

——————————————————

ಪಿಯುಸಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ ಪ್ರಮಾಣ ಹೆಚ್ಚಳ, ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದರು

ಶಿವಮೊಗ್ಗ: 2026ನೇ ಸಾಲಿನ ಪಿಯುಸಿ ಫಲಿತಾಂಶದಲ್ಲ್ಗಿ ಜಿಲ್ಲೆ ಗಮನಾರ್ಹ ಸಾಧನೆಯನ್ನು ದಾಖಲಿಸಿದೆ. ಕಳೆದ ಬಾರಿ ಜಿಲ್ಲೆಗೆ 79.91% ಶೇಕಡಾ ಫಲಿತಾಂಶ ಬಂದಿದೆ, ಈ ಬಾರಿ 87.62% ಫಲಿತಾಂಶ ದಾಖಲಾಗಿದೆ. ಈ ಪ್ರಗತಿ ಸುಮಾರು 8% ಹೆಚ್ಚಳವಾಗಿದೆ.
ಜಿಲ್ಲೆಯ ವಿದ್ಯಾರ್ಥಿಗಳು ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚಿನ ಅಂಕಗಳನ್ನು ಪಡೆದಿದ್ದು, ಡಿಸ್ಟಿಂಕ್ಷನ್ ಫಲಿತಾಂಶದಲ್ಲಿ ಮಹತ್ತರ ಸುಧಾರಣೆ ಕಂಡುಬಂದಿದೆ. 100% ಫಲಿತಾಂಶ ಪಡೆದಿರುವ ಸುಮಾರು 15 ಕಾಲೇಜುಗಳು ಈ ಬಾರಿ ಜಿಲ್ಲೆಯಲ್ಲಿ ದಾಖಲೆ ಮಾಡಿದ್ದಾರೆ.
: ಚಂದ್ರಪ್ಪ ಎಸ್. ಗುಂಡ್ಲಪಲ್ಲಿ, ಜಿಲ್ಲಾ ಶಿಕ್ಷಣಾಧಿಕಾರಿ (DDPI)

Shivamogga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026

ಜೂನ್ 16: ಉದ್ಯೋಗ ನೇರ ಸಂದರ್ಶನ

June 12, 2026

ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ

June 12, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,311 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026393 Views

ದೊಡ್ಡಮ್ಮ ದೇವಸ್ಥಾನ ಬಳಿ ಕೈರ್ನ್ ಸಿಕ್ಕಿ ಕೂಲಿ ಕಾರ್ಮಿಕ ಸಾವು

June 6, 2026356 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025297 Views
Don't Miss
ಅಪರಾಧ ಲೋಕ

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

By Raghu ShettyJune 13, 20260

ಶಿವಮೊಗ್ಗ: ನಗರದ ಗಾಂಧಿ ಬಜಾರ್ ಸಮೀಪ ನಡೆದಿದ್ದ ನರಸಿಂಹ ಹತ್ಯೆ ಪ್ರಕರಣವನ್ನು ಭೇದಿಸಿರುವ ಶಿವಮೊಗ್ಗ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ…

ಜೂನ್ 16: ಉದ್ಯೋಗ ನೇರ ಸಂದರ್ಶನ

June 12, 2026

ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ

June 12, 2026

ಹಾಡಹಗಲೇ ರೌಡಿಶೀಟರ್ ನರಸಿಂಹನ ಭೀಕರ ಹತ್ಯೆ; ಹಳೆಯ ವೈಷಮ್ಯದ ಶಂಕೆ

June 12, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views

ರಂಗದಸರಾ; ಕುಟುಂಬ ರಂಗ ಕಾರ್ಯಕ್ರಮ

September 18, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.