ಶಿವಮೊಗ್ಗ: ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ಬಿಸಿಎ ಹಾಗೂ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳು ಕುವೆಂಪು ವಿವಿ ೨೦೨೪ನೇ ಸಾಲಿನ ಪರೀಕ್ಷಾ ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಎರಡು ಚಿನ್ನದ ಪದಕಗಳೊಂದಿಗೆ ಹಲವಾರು ರ‍್ಯಾಂಕ್‌ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಬಿಸಿಎ ವಿಭಾಗದಲ್ಲಿ ಮಾನಸ ಟಿ.ಸಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿಎಸ್ಸಿ ವಿಭಾಗದಲ್ಲಿ ರಶ್ಮಿ ಆರ್.ಎ ದ್ವಿತೀಯ ರ‍್ಯಾಂಕ್ ಜೊತೆಗೆ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಹೇಮಾ ಜೆ. ಗೋರ್ಪಡೆ ಹಾಗೂ ಪ್ರೀತಿ ಎಸ್.ಎ ತೃತೀಯ ರ‍್ಯಾಂಕ್, ಅನು ಸೋಮಶೇಖರ್ ನಾಲ್ಕನೇ ರ‍್ಯಾಂಕ್, ತೇಜಶ್ರೀ ಎನ್.ಆರ್ ಆರನೇ ರ‍್ಯಾಂಕ್ ಹಾಗೂ ಸ್ನೇಹ ಕೆ.ಎಂ ಹತ್ತನೇ ರ‍್ಯಾಂಕ್ ಪಡೆದು ಗಮನಸೆಳೆದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಲ್. ಅರವಿಂದ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಎನ್.ಇ.ಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
