ಶಿವಮೊಗ್ಗ : ಐದು ವರ್ಷದ ಹಿಂದೆ ನಗರದ ಹೊನ್ನಾಳಿ ರಸ್ತೆಯ ರಾಘವೇಂದ್ರ ಕ್ಲಾತ್ ಹತ್ತಿರ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.
2021ರ ಮೇ 4ರಂದು ರಾತ್ರಿ ಸುಮಾರು 2.45ರ ವೇಳೆಗೆ ಆರೋಪಿ ಮೊಹಮ್ಮದ್ ನೂರುಲ್ಲಾ, ಮೊಹಮ್ಮದ್ ತಬರಕ್ ಉಲ್ಲಾ, ಸೈಯದ್ ಅಹಮ್ಮದ್ ಎಂಬುವರು ದೂರುದಾರರ ಬಳಿ ಚಾಕು ತೋರಿಸಿ ಬೆದರಿಕೆ ಹಾಕಿ 500 ನಗದು ಹಾಗೂ 12,000 ಮೌಲ್ಯದ ಮೊಬೈಲ್ ಫೋನ್ ದರೋಡೆ ಮಾಡಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಸಂಜೀವ್ ಕುಮಾರ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್ ವಾದ ಮಂಡಿಸಿದ್ದರು. ಓರ್ವ ಆರೋಪಿ ಮೊಹಮ್ಮದ್ ನೂರುಲ್ಲಾ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆ ಒಂದನೇ ಹೆಚ್ಚುವರಿ ನ್ಯಾಯಾಲಯ ಹಾಗೂ ಸತ್ರಾ ನ್ಯಾಯಾಲಯದ
ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
ದರೋಡೆ ಪ್ರಕರಣ, ಆರೋಪಿಗೆ ಜೈಲು ಶಿಕ್ಷೆ
Robbery case, accused sentenced to prison
