ಶಿವಮೊಗ್ಗ: ಪ್ರಾಮಾಣಿಕತೆ ಮೆರೆದ ಘಟನೆ ಒಂದು ನಗರದಲ್ಲಿ ಗಮನಸೆಳೆದಿದೆ. ಏ.16ರಂದು ಗಾಯತ್ರಿ ಎಂಬ ಗ್ರಾಹಕಿ ದುರ್ಗಿಗುಡಿಯ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ವ್ಯಾನಿಟಿ ಬ್ಯಾಗ್ ಅನ್ನು ಮರೆತು ಬಿಟ್ಟು ಹೋಗಿದ್ದರು.
ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕು. ಸ್ವಾತಿ ಮತ್ತು ಕು. ಸಂಗೀತ ಅವರುಗಳು ಆ ಬ್ಯಾಗ್ ಅನ್ನು ಕಂಡು ಅಂಗಡಿ ಮಾಲೀಕರಾದ ಮಾರ್ತಾಂಡ ಅವರಿಗೆ ಒಪ್ಪಿಸಿದರು. ನಂತರ ಏ.21 ರಂದು ಬ್ಯಾಗ್ ಅನ್ನು ಜಯನಗರ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಲಾಯಿತು.
ಪೊಲೀಸ್ ನಿರೀಕ್ಷಕರ ಸಮಕ್ಷಮದಲ್ಲಿ ಸುಮಾರು 5,00,000 ರೂ. ಮೌಲ್ಯದ ಬಂಗಾರ ಹಾಗೂ ಇತರೆ ವಸ್ತುಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ಅದರ ಮಾಲೀಕೆಯಾದ ಗಾಯತ್ರಿ ಅವರಿಗೆ ಸುರಕ್ಷಿತವಾಗಿ ಮರಳಿ ನೀಡಲಾಯಿತು.
ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ತೋರಿದ ಕು. ಸ್ವಾತಿ, ಕು. ಸಂಗೀತ ಹಾಗೂ ಮಾರ್ತಾಂಡ ಅವರನ್ನು ಜಯನಗರ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
