- ಭದ್ರಾವತಿ: ನ್ಯೂಟನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ಕಳುವಾದ ಬಂಗಾರದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಜನ್ನಾಪುರದ ಎ
ನ್.ಟಿ.ಬಿ ಕಚೇರಿ ಸಮೀಪ ವಾಸವಾಗಿರುವ ನಗರಸಭೆ ನೌಕರರಾದ ಶ್ರೀಮತಿ ಸೌಭಾಗ್ಯ (48) ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು. ನಾ.19-2025
ನ್.ಟಿ.ಬಿ ಕಚೇರಿ ಸಮೀಪ ವಾಸವಾಗಿರುವ ನಗರಸಭೆ ನೌಕರರಾದ ಶ್ರೀಮತಿ ಸೌಭಾಗ್ಯ (48) ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು. ನಾ.19-2025 ರಂದು ಬೆಳಿಗ್ಗೆ 5:30 ರಿಂದ 10:00 ಗಂಟೆ ನಡುವಿನ ಅವಧಿಯಲ್ಲಿ ಅವರ ಮನೆಯ ಡ್ರೆಸ್ಸಿಂಗ್ ಟೇಬಲ್ ಮೇಲೆ ಇಟ್ಟಿದ್ದ ಸುಮಾರು 10 ಗ್ರಾಂ ತೂಕದ, ಸುಮಾರು ₹1,00,000 ಮೌಲ್ಯದ ಬಂಗಾರದ ಸರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 263/2025 ಅಡಿಯಲ್ಲಿ ಬಿ.ಎನ್.ಎಸ್ ಕಾಯ್ದೆ ಕಲಂ 305 ಪ್ರಕಾರ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ ಮತ್ತು ರಮೇಶ್ ಅವರ ನಿರ್ದೇಶನದಲ್ಲಿ, ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಕಾಶ್ ರಾಥೋಡ್ ಹಾಗೂ ನಗರ ವೃತ್ತದ ಸಿ.ಪಿ.ಐ ಕೆ. ನಾಗಮ್ಮ ಅವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಮೇಶ್.ಟಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು.
ತನಿಖೆಯ ವೇಳೆ ಬೆಂಗಳೂರು ನಗರದ ಸಂಜೀವಪುರಂ, ವನ್ನಾರ್ ಪೇಟ್, ವಿವೇಕನಗರ ನಿವಾಸಿಯಾಗಿರುವ ಹಾಗೂ ಝೆಪ್ಟೋ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೂರ್ಯ.ಎಂ (28) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಕಳುವಾದ ಸುಮಾರು 10 ಗ್ರಾಂ ತೂಕದ ಬಂಗಾರದ ಸರ (ಅಂದಾಜು ಮೌಲ್ಯ ₹1,40,000) ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ ಪ್ರಶಂಸಿಸಿದ್ದಾರೆ.
