Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಬೃಹತ್ ಕಾಳಿಂಗ ಸರ್ಪ ಸೆರೆ

May 27, 2026

ಅಕ್ರಮ ಸಂಬಂಧ ಹಿನ್ನೆಲೆ ಪತಿ ಕೊಲೆ : ಪತ್ನಿ ಸೇರಿ ಇಬ್ಬರ ಬಂಧನ

May 26, 2026

ಕಡಸೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾಯ್ತು ಆತಂಕ

May 25, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»“ಕೊನೆಯ ವ್ಯಕ್ತಿಗೂ ತಲುಪಿದಾಗಲೇ ಶಿಕ್ಷಣ ಅರ್ಥಪೂರ್ಣ
ಪ್ರಮುಖ ಸುದ್ದಿ

“ಕೊನೆಯ ವ್ಯಕ್ತಿಗೂ ತಲುಪಿದಾಗಲೇ ಶಿಕ್ಷಣ ಅರ್ಥಪೂರ್ಣ

"Education is meaningful only when it reaches the last person."
Raghu ShettyBy Raghu ShettyMay 6, 2026Updated:May 6, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ: ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.


ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 35 ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಲುಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅವುಗಳಿಂದ ಪಾಠ ಕಲಿದು ಮುಂದಕ್ಕೆ ಸಾಗುವುದು ಯಶಸ್ಸಿನ ಮೂಲವೆಂದು ತಿಳಿಸಿದರು. ಪದವಿ ಕೇವಲ ಜ್ಞಾನದ ಸಂಕೇತವಲ್ಲದೆ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ನಿಮ್ಮ ಸಾಮರ್ಥ್ಯದ ಪ್ರತೀಕವಾಗಿದೆ ಎಂದು ಹೇಳಿದರು. ಈ ಸಾಧನೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಅವರ ಮಾರ್ಗದರ್ಶನವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿನಂದಿಸಿದರು.
ಇಂದಿನ ಜಗತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ವೇಗದ ಬದಲಾವಣೆಯನ್ನು ಅನುಭವಿಸುತ್ತಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಡಿಜಿಟಲ್ ಕ್ರಾಂತಿ ಹೊಸ ಅವಕಾಶಗಳ ಜೊತೆಗೆ ಸವಾಲುಗಳನ್ನೂ ತಂದಿವೆ. ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿ ತಮ್ಮ ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೋದಿಯವರ ‘ವಿಕಸಿತ ಭಾರತ ೨೦೪೭’ ಕನಸನ್ನು ನನಸಾಗಿಸಲು ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕನ್ನಡದ ಮಹಾನ್ ಕವಿ ಕುವೆಂಪು ಅವರ “ವಿಶ್ವಮಾನವ” ತತ್ವವನ್ನು ಸ್ಮರಿಸಿದ ಅವರು, ಮಾನವೀಯತೆ ಮತ್ತು ಸಮಾನತೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಬೇಕು ಮತ್ತು ಸ್ಟಾರ್ಟಪ್ ಸಂಸ್ಕೃತಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.


ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಅಧ್ಯಕ್ಷರಾದ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ ಮಾತನಾಡುತ್ತಾ ಇಂದಿನ “ಗಿUಅಂ” ಜಗತ್ತಿನಲ್ಲಿ ನಿರಂತರ ಕಲಿಕೆಯ ಅಗತ್ಯತೆಯನ್ನು ವಿವರಿಸಿದರು.
ತಂತ್ರಜ್ಞಾನದ ಸದುಪಯೋಗದ ಮೂಲಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮನ್ನು ತಾವು ತೋರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ಪದವೀಧರರು, ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು. ಘಟಿಕೋತ್ಸವವು ವಿದ್ಯಾರ್ಥಿಗಳಿಗೆ ಹೊಸ ಜೀವನದ ಹಾದಿಗೆ ದಾರಿ ತೋರಿಸುವ ಮಹತ್ವದ ಕ್ಷಣವಾಗಿ ಪರಿಣಮಿಸಿತು.
ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಸಹ-ಕುಲಾಧಿಪತಿಗಳಾದ ಡಾ. ಎಂ. ಸಿ. ಸುಧಾಕರ್ ಮಾತನಾಡಿ ೩೫ ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದರೂ ಇನ್ನೂ ಹಲವು ಶೈಕ್ಷಣಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸೂಚಿಸಿದರು.
ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ೧೭% ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿರುವುದು ಆತಂಕಕಾರಿ ಎಂದು ತಿಳಿಸಿ, ಸೀಟುಗಳ ನಿಯಂತ್ರಣ ಹಾಗೂ ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುತ್ತಿದೆ ಎಂದರು. ಬಿಎ ಕೋರ್ಸ್‌ಗಳಿಗೆ ದಾಖಲಾತಿ ಕಡಿಮೆಯಾಗುತ್ತಿರುವುದನ್ನೂ ಅವರು ಉಲ್ಲೇಖಿಸಿದರು.
ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲು ಹೊಸ ಕೋರ್ಸ್‌ಗಳು, ಲ್ಯಾಬ್‌ಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದ್ದು, ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಸಹಯೋಗದಲ್ಲಿ ಯೋಜನೆಗಳು ಜಾರಿಯಲ್ಲಿವೆ ಎಂದರು. ಸ್ಟಾರ್ಟಪ್ ಉತ್ತೇಜನ, ಕ್ಯಾಂಪಸ್-ಟು-ಕೆರಿಯರ್ ಸಮ್ಮೇಳನ ಮತ್ತು ವೃತ್ತಿಪರ ತರಬೇತಿಗಳ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ವರದಿ ವಾಚಿಸಿದರು.
ಕುಲಸಚಿವರಾದ ಹೇಮಂತ್ ಎನ್. ಹಾಗೂ ಕುಲಸಚಿವರು (ಮೌಲ್ಯಮಾಪನ) ಪ್ರೊ. ಆರ್. ತಿಮ್ಮರಾಯಪ್ಪ ಇತರೆ ಅಧಿಕಾರಿಗಳು, , ಗೌರವ ಡಾಕ್ಟರೇಟ್ ಪುರಸ್ಕೃತರು, ಪದವೀಧರರು ಇದ್ದರು.

“ನಾನು ಪ್ರತಿದಿನ ನಿಯಮಿತವಾಗಿ ಓದುತ್ತಿದ್ದೆ. ಸ್ಪರ್ಧೆಗಿಂತ ಸ್ವಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದೇ ಮುಖ್ಯ ಎಂದು ನಂಬಿದ್ದೇನೆ. ಈ ಸಾಧನೆ ನನ್ನ ಕುಟುಂಬಕ್ಕೆ ಸಮರ್ಪಿತ.”
: ಅಭಿಷೇಕ್ ಎಚ್.ಎಂ. (10 ಗೋಲ್ಡ್ ಮೆಡಲ್)

“ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ ಎನ್ನುವುದನ್ನು ತೋರಿಸಲು ಈ ಸಾಧನೆ ಒಂದು ಉದಾಹರಣೆ. ನಿರಂತರ ಪರಿಶ್ರಮವೇ ಯಶಸ್ಸಿನ ಗುಟ್ಟು.”
: ರಕ್ಷಾ (7 ಗೋಲ್ಡ್ ಮೆಡಲ್)

“ಪ್ರತಿ ವಿಷಯವನ್ನು ಅರ್ಥಮಾಡಿಕೊಂಡು ಕಲಿತದ್ದರಿಂದಲೇ ನನಗೆ ಈ ಮಟ್ಟದ ಸಾಧನೆ ಸಾಧ್ಯವಾಯಿತು. ಓದಿನ ಜೊತೆಗೆ ಸಮಯ ನಿರ್ವಹಣೆಯೂ ಮುಖ್ಯ.”
: ಸೃಷ್ಟಿ ಆರ್. (6 ಗೋಲ್ಡ್ ಮೆಡಲ್)

“ನಾನು ಗುರಿ ನಿಗದಿಪಡಿಸಿಕೊಂಡು ಅದಕ್ಕೆ ತಕ್ಕಂತೆ ಯೋಜನೆ ಮಾಡಿಕೊಂಡೆ. ಪ್ರತಿ ದಿನ ಸಣ್ಣ ಪ್ರಗತಿ ಮಾಡಿದರೆ ದೊಡ್ಡ ಫಲಿತಾಂಶ ಸಿಗುತ್ತದೆ.”
: ಸಹನಾ ಗಣೇಶ್ ಶೆಟ್ (5 ಗೋಲ್ಡ್ ಮೆಡಲ್)

“ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತಿ ನನ್ನನ್ನು ಹೆಚ್ಚು ಓದಲು ಪ್ರೇರೇಪಿಸಿತು. ಶಿಕ್ಷಕರ ಮಾರ್ಗದರ್ಶನ ಮಹತ್ವದ್ದಾಗಿದೆ.”
: ಸಜನಾ ಎಸ್. (5 ಗೋಲ್ಡ್ ಮೆಡಲ್)

“ವಿಫಲತೆಗಳು ನನಗೆ ಪಾಠ ಕಲಿಸಿವೆ. ಅವುಗಳನ್ನು ಸ್ವೀಕರಿಸಿ ಮುಂದುವರಿದರೆ ಯಶಸ್ಸು ಖಚಿತ.”
: ಚೈತ್ರ ಪಿ.ಪಾಟೀಲ್ (4 ಗೋಲ್ಡ್ ಮೆಡಲ್)

“ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸವೇ ನನ್ನ ಶಕ್ತಿ. ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವುದು ಮುಖ್ಯ.”
: ಅನು ಆರ್.(3 ಗೋಲ್ಡ್ ಮೆಡಲ್)

Shivamogga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಬೃಹತ್ ಕಾಳಿಂಗ ಸರ್ಪ ಸೆರೆ

May 27, 2026

ಅಕ್ರಮ ಸಂಬಂಧ ಹಿನ್ನೆಲೆ ಪತಿ ಕೊಲೆ : ಪತ್ನಿ ಸೇರಿ ಇಬ್ಬರ ಬಂಧನ

May 26, 2026

ಕಡಸೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾಯ್ತು ಆತಂಕ

May 25, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,306 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025277 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026269 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025212 Views
Don't Miss
Home

ಬೃಹತ್ ಕಾಳಿಂಗ ಸರ್ಪ ಸೆರೆ

By Raghu ShettyMay 27, 20260

ಶಿವಮೊಗ್ಗ : ಮನೆ ಸಮೀಪವೇ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪವನ್ನ ಸೆರೆಹಿಡಿಯುವಲ್ಲಿ ಉರಗ ತಜ್ಞ ಕಿರಣ್ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ…

ಅಕ್ರಮ ಸಂಬಂಧ ಹಿನ್ನೆಲೆ ಪತಿ ಕೊಲೆ : ಪತ್ನಿ ಸೇರಿ ಇಬ್ಬರ ಬಂಧನ

May 26, 2026

ಕಡಸೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಹೆಚ್ಚಾಯ್ತು ಆತಂಕ

May 25, 2026

ಯುವತಿಯ ಸರ ಕಳವು ಪ್ರಕರಣ ಭೇದಿಸಿದ ಗ್ರಾಮಾಂತರ ಪೊಲೀಸರು ; ಆರೋಪಿ ಬಂಧನ : ಕಾರು ಹಾಗೂ 1.50 ಲಕ್ಷ ಮೌಲ್ಯದ ಬಂಗಾರದ ಸರ ವಶ

May 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಭದ್ರಾವತಿಯಲ್ಲಿ ಮನೆ ಕಳ್ಳತನ ಪ್ರಕರಣ ಪತ್ತೆ – 10 ಗ್ರಾಂ ಬಂಗಾರದ ಸರ ವಶ, ಆರೋಪಿಯ ಬಂಧನ

March 12, 20260 Views

ಸೃಜನಶೀಲತೆ ಮತ್ತು ನವೀನ ಚಿಂತನೆಯಿಂದಲೇ ಯಶಸ್ಸು

May 16, 20260 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.