
ಶಿವಮೊಗ್ಗ : ಹಳೇ ದ್ವೇಷದ ಹಿನ್ನೆಲೆ ಅಡಿಕೆ ಮರಗಳನ್ನೇ ದುಷ್ಕರ್ಮಿಗಳು ಕಡಿದು ನಾಶ ಮಾಡಿರುವ ಘಟನೆ ಹೊಸನಗರ ತಾಲೂಕಿನ ಬ್ರಾಹ್ಮಣ ತರುವೆ ಗ್ರಾಮದ ಚಕ್ರೆ ಎಂಬಲ್ಲಿ ನಡೆದಿದೆ. ಚಕ್ರೆಯ ನಾರಾಯಣ ಮೂರ್ತಿ ಎಂಬುವವರಿಗೆ ಸೇರಿದ ಅಡಿಕೆ ತೋಟಕ್ಕೆ ಮಧ್ಯರಾತ್ರಿ ನುಗ್ಗಿದ ದುಷ್ಕರ್ಮಿಗಳು 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪುಂಡಾಟ ಮೆರೆದಿದ್ದಾರೆ. ಅಲ್ಲದೇ ತೋಟದಲ್ಲಿದ್ದ ಜೆಟ್ ಪೈಪ್ ಸೇರಿದಂತೆ ಹಲವು ವಸ್ತುಗಳನ್ನ ನಾಶ ಪಡಿಸಿದ್ದಾರೆ. ತಂತಿ ಬೇಲಿಯನ್ನೂ ಕಟ್ ಮಾಡಿದ್ದಾರೆ. ಏಕಾಏಕಿ ರಾತ್ರಿ ವೇಳೆ ಅಡಿಕೆ ತೋಟಕ್ಕೆ ನುಗ್ಗಿದ ಐದಾರು ಜನರ ತಂಡ ಕೃತ್ಯ ಎಸಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
