Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ವಿಶೇಷ ಸುದ್ದಿ»ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸು : ಡಾ.ಬಾಲಸುಬ್ರಮಣಿ
ವಿಶೇಷ ಸುದ್ದಿ

ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸು : ಡಾ.ಬಾಲಸುಬ್ರಮಣಿ

ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸು
Raghu ShettyBy Raghu ShettyOctober 31, 2025Updated:October 31, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ, : ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಪಾಲಿಟಿ ಹಾಸ್ಪಿಟಲ್‌ನ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆ) ಸಮಸ್ಯೆ ಹೊಂದಿದ್ದ ೬೬ ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು ಎಂದು ಕಾರ್ಡಿಯೊ ಥೊರಾಸಿಕ್ ಸರ್ಜನ್ ಡಾ. ಬಾಲಸುಬ್ರಮಣಿ ಆರ್.ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವುದರಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾಗುತ್ತದೆ. ನಾನು ಮತ್ತು ನನ್ನ ವೈದ್ಯಕೀಯ ತಂಡವು ಸುಮಾರು ಆರು ಗಂಟೆಗಳ ಕಾಲ ಈ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದರು.
ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆದಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್‌ಟೆನ್ನನ್ ಇತಿಹಾಸವೂ ಇತ್ತು. ಆಸ್ಥಿರ ಆಂಜಿನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯ ದಕ್ಷತೆ ಕಡಿಮೆಯಾಗಿದ್ದು, ಡಯಾಸ್ಟೋಲಿಕ್ ಡಿಸ್ ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಾಗಿತ್ತು ಎಂದರು.


ಇಂತಹ ಪ್ರಕರಣಗಗಳು ವೈದ್ಯರಿಗೆ ಸವಾಲು :
ಕೈಪೋಸಿಸ್ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ಭಾರಿ ಶಸ್ತ್ರಚಿಕಿತ್ಸಾ ಪರಿಣತಿ ಬೇಕು. ಕೈಫೋಸಿಸ್‌ನಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯು ಪಕ್ಕೆಲುಬುಗಳು ಮತ್ತು ಎದೆ ಕುಹರದ ಸಹಜ ಸಾಲನ್ನು ಬದಲಾಯಿಸುತ್ತದೆ. ಹೃದಯ ಶಸ್ತ್ರಚಿಕಿತ್ಸೆಗೆ ಸವಾಲೊಡ್ಡುತ್ತದೆ. ಬೆನ್ನುಮೂಳೆಯ ವಕ್ರತೆಯ ಕಾರಣದಿಂದ ಶಸ್ತ್ರಚಿಕಿತ್ಸಾ ಟೇಬಲ್‌ನಲ್ಲಿ ರೋಗಿಯನ್ನು ಸರಿಯಾಗಿ ಇರಿಸುವುದು ಕೂಡ ಕಷ್ಟಕರವಾಗುತ್ತದೆ. ಹೃದಯದ ಮೇಲೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ರೋಗಿಯ ಎದೆ ಮತ್ತು ತಲೆಯನ್ನು ಹೆಚ್ಚುವರಿ ಬೆಂಬಲ ನೀಡಿ ಎತ್ತಿಹಿಡಿಯಬೇಕು. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಬೇಕಿರುತ್ತದೆ ಎಂದರು.
ಕೈಪೋಸಿಸ್ ಸಮಸ್ಯೆಯು ಮನುಷ್ಯನ ಸಾಮಾನ್ಯ ಘೋರಾಸಿಕ್ ರಚನೆಯನ್ನೇ ಬದಲಾಯಿಸುತ್ತದೆ. ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಕಷ್ಟಗೊಳಿಸುತ್ತದೆ. ರೋಗಿಯ ವಿಶಿಷ್ಟ ದೇಹರಚನೆಗೆ ತಕ್ಕಂತೆ ಶಸ್ತ್ರಚಿಕಿತ್ಸಾ ಯೋಜನೆಯನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ವೈದ್ಯರು ಮೂರು ಗ್ರಾಫ್ಟ್‌ಗಳನ್ನು ಬಳಸಿ ಆಫ್- ಪಂಪ್ ಸಿಎಬಿಜಿ (ಒಪಿಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದರು. ಮರುದಿನ ರೋಗಿಗೆ ಎಕ್ಸ್ ಟ್ಯೂಟೇಟ್ (ಟ್ಯೂಬ್ ಅನ್ನು ತೆಗೆಯುವುದು) ಮಾಡಲಾಯಿತು ಮತ್ತು ನಂತರ ರೋಗಿಯು ನಿಧಾನಕ್ಕೆ ಚೇತರಿಸಿಕೊಂಡರು ಎಂದು ತಿಳಿಸಿದರು.
ಕೈಫೋಸಿಸ್ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ ಪ್ರಕ್ರಿಯೆ ಕೂಡ ಕಾರ್ಯವಿಧಾನದಷ್ಟೇ ಸವಾಲಿನದ್ದಾಗಿದೆ. ಎದೆಭಾಗದಲ್ಲಿನ ನೋವಿನ ಕಾರಣಕ್ಕೆ ರೋಗಿಗಳು ಬಾಗಿದ ಭಂಗಿಯನ್ನು ಅನುಸರಿಸಬ ಹುದು. ಅದನ್ನೇ ಅಭ್ಯಾಸವಾಗಿಸಿಕೊಳ್ಳಬಹುದು. ಈಗಾಗಲೇ ಕೈಫೋಸಿಸ್ ಹೊಂದಿರುವವರಿಗೆ ಇದರಿಂದ ಶ್ವಾಸಕೋಶದ ವಿಸ್ತರಣೆ ಕಡಿಮೆಯಾಗಿ ಉಸಿ ರಾಟದ ತೊಂದರೆ ಉಂಟಾಗಬಹುದು, ಶ್ವಾಸಕೋಶ ಕುಗ್ಗುವಿಕೆ (ಆಟೆಲೆಕ್ಟ್ರಾಸಿಸ್), ಕತ್ತನ್ನು ನಿಧಾನವಾಗಿ ತಿರುಗಿಸುವುದು, ಚೇತರಿಕೆ ನಿಧಾನವಾ ಗುವುದು ಮತ್ತು ಫಿಸಿಯೋಥೆರಪಿ ಸಂದರ್ಭದಲ್ಲಿಯೂ ಸವಾಲು ಇರಬಹುದು. ಫಿಸಿಯೋಥೆರಪಿಸ್ಟ್‌ಗಳು ಕೈಫೋಸಿಸ್ ಸಮಸ್ಯೆಯು ಎದೆಗೂಡಿನ ಚಲನೆಯನ್ನು ಮತ್ತಷ್ಟು ಕಷ್ಟಕರಗೊಳಿಸಬಹುದು ಎಂದು ಹೇಳುತ್ತಾರೆ. ಹಾಗಾಗಿ ಚೇತರಿಕೆಯ ಪ್ರಕ್ರಿಯೆಯಗಳಲ್ಲಿ ಉಸಿರಾಟ ವ್ಯಾಯಾಮಗಳು ಬಹಳ ಮುಖ್ಯವಾಗುತ್ತವೆ ಎಂದರು.
ರೋಗಿಗಳಿಗೆ ಶಸ್ತ್ರಚಿಕಿತ್ಸೆಯಾದರೆ ಮಾತ್ರ ಸಾಲದು, ಸೂಕ್ತವಾದ ಹೃದಯ ಆರೈಕೆ ಅಗತ್ಯವಾಗಿರುತ್ತದೆ. ಪರಿಣತರ ಮೇಲ್ವಿಚಾರಣೆಯಲ್ಲಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಅಗತ್ಯವಿದೆ. ಸೂಕ್ತ ಆಹಾರ ಮತ್ತು ಪೌಷ್ಟಿಕತೆ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಒತ್ತಡವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ಬೇಕು’ ಎಂದರು.
ಸಂದರ್ಭದಲ್ಲಿ ಡಾ. ಚಕ್ರವರ್ತಿ ಸಂಡೂರ, ವರ್ಗೀಸ್ ಪಿ.ಜಾನ್, ಶರತ್ ಶ್ರೀಷ್ಮ, ಅಶ್ವತ್, ಬಸಯ್ಯ, ಗಾಣಾಚಾರಿ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಬಾತ್ ರೂಂ ನಲ್ಲಿ ಹೆಬ್ಬಾವು ಪ್ರತ್ಯಕ್ಷ

January 28, 2026

ಸಮಾಜ ಸೇವಕಿ ನಂದಿನಿಗೆ ಹೊಸ ವರ್ಷದ ಪ್ರಶಸ್ತಿ ಪುರಸ್ಕಾರ

January 6, 2026

ಹಕ್ಕುದಾರರಿಲ್ಲದೆ ಬಾಕಿ ಉಳಿದಿದೆ 3,400 ಕೋಟಿ ರೂ.

December 25, 2025
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,293 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026260 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025248 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025206 Views
Don't Miss
ಪ್ರಮುಖ ಸುದ್ದಿ

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

By Raghu ShettyFebruary 28, 20260

ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ…

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.