ಶಿವಮೊಗ್ಗ : ದಸರಾ ಹಬ್ಬವನ್ನ ವಿಶಿಷ್ಟ ಹಾಗೂ ವಿನೂತನವಾಗಿ ಶಿವಮೊಗ್ಗದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ ಕಳೆದ 2 ದಶಕದಿಂದ ಆರಂಭವಾಗಿ ಈ ಬಾರಿ 11 ದಿನ ದಸರಾ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಬಾರಿ ಸೆ.22 ರಿಂದ ಅ.2 ರವರೆಗೆ ದಸರಾ ನಡೆಯಲಿದ್ದು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆಯನ್ನ ಸೆ.22 ರಂದು ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಲಾಗುವುದು.
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮೇಶ್ವರ ರಾಜು ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು. ಅಧ್ಯಕ್ಷರೆಯನ್ನ ಶಾಸಕ ಚೆನ್ನಬಸಪ್ಪ ವಹಿಸಲಿದ್ದಾರೆ ಎಂದರು.
“ಶಾಸಕರಾದ ಚನ್ನಬಸಪ್ಪನವರು ಕಾರ್ಯಕ್ರಮ ವಿವರಣೆ ನೀಡುತ್ತಾ”
ಸೆ.22ರ ಸೋಮವಾರ
ದೇವಸ್ಥಾನ, ಕೋಟೆ ರಸ್ತೆ, ಶಿವಮೊಗ್ಗ,೯ಕ್ಕೆ ಕುವೆಂಪು ರಂಗಮಂದಿರ ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಆದ್ವಿಕಾ ನಾಯರ್, ಹಿತ ಪ್ರವೀಣ್ ಅವರಿಂದ ಚಾಲನೆ ಸಂಜೆ ೬ಕ್ಕೆ ಕುವೆಂಪು ರಂಗಮಂದಿರ iವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ
ಸೆ 23ರ ಮಂಗಳವಾರ
ಬೆಳಗ್ಗೆ 9 ನಗರದ ವಿವಿಧೆಡೆಯಿಂದ ಮಕ್ಕಳ ಜಾಥಾ ಅಂತಾರಾಷ್ಟ್ರೀಯ ನೃತ್ಯಗಾರ್ತಿ, ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ ಸಂಜೆ 5ರಿಂದ ಡಾ. ಅಂಬೇಡ್ಕರ್ ಭವನ ಮಕ್ಕಳ ದಸರಾ ಸಮಾರೋಪ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಅವರಿಂದ ಉದ್ಘಾಟನೆ ಸಂಜೆ 5ರಿಂದ ಕುವೆಂಪು ರಂಗಮಂದಿರ ಸುಗಮ ಸಂಗೀತ ಮತ್ತು ಯಕ್ಷ ಸಂಭ್ರಮ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಪುಟ್ಟಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತಿ ನಡೆಯವುದು.
ಸೆ. 24ರ ಬುದವಾರ
ಬೆಳಿಗ್ಗೆ 7ಕ್ಕೆ ಶಿವಮೊಗ್ಗ ಪಾಲಿಕೆಯಿಂದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನವರೆಗೆ ಪರಿಸರ ದಸರಾದಲ್ಲಿ ಸೈಕಲ್ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಧಾರವಾಡ ಐಐಟಿಯ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ.ಶ್ರೀಪತಿ ಎಲ್.ಕೆ. ಅವರಿಂದ ಚಾಲನೆ ಬೆಳಗ್ಗೆ 9.30ಕ್ಕೆ ಡಾ. ಅಂಬೇಡ್ಕರ್ ಭವನ ಚಲನಚಿತ್ರ ದಸರಾ. ಚಲನಚಿತ್ರ ಪ್ರದರ್ಶನ ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ, ನಟ ಶರಣ್, ನಟಿ ಕಾರುಣ್ಯರಾಮ್ ಉಪಸ್ಥಿತಿ, ಬೆಳಗ್ಗೆ 10.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನ ರಂಗದಸರಾ. ಉಡುಪಿಯ ರಂಗ ನಿರ್ದೇಶಕ ಗಣೇಶ್ ಮಂದಾರ್ಥಿ ಅವರಿಂದ ಉದ್ಘಾಟನೆ, ಬೆಳಗ್ಗೆ 11.30ಕ್ಕೆ ಡಾ. ಅಂಬೇಡ್ಕರ್ ಭವನ ಚಲನಚಿತ್ರ ರಸಗ್ರಹಣ ಕಾರ್ಯಾಗಾರ. ನಿರ್ದೇಶಕ ಸಾಯಿ ಅವರಿಂದ ಚಾಲನೆ. ಸಂಜೆ 4.30 ರಿಂದ ರಾತ್ರಿ 9.30 ಕುವೆಂಪು ರಂಗಮಂದಿರ ನೃತ್ಯ ಕಾರ್ಯಕ್ರಮ, ಬಹುಮಾನ ವಿತರಣೆ. ನಟಿ, ನಿರ್ದೇಶಕಿ ರೂಪ ಅಯ್ಯರ್‌ರವರು ಚಾಲನೆ ನೀಡುವರು.
ಸೆ,25ರ ಗುರುವಾರ
ಬೆಳಗ್ಗೆ 6ಕ್ಕೆ ಸೈನ್ಸ್ ಮೈದಾನ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ. ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಬೆಳಗ್ಗೆ ೧೦ಕ್ಕೆ ಶಿವಪ್ಪನಾಯಕ ಅರಮನೆ ಕಲಾ ದಸರಾ ಛಾಯಾಚಿತ್ರ, ಚಿತ್ರಕಲಾ, ಗೊಂಬೆ ಪ್ರದರ್ಶನ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಉದ್ಘಾಟನೆ. ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್.ಹೆಚ್.ಸಿ ಉಪಸ್ಥಿತಿ ಬೆಳಗ್ಗೆ ೧೧ಕ್ಕೆ ಕುವೆಂಪು ರಂಗಮಂದಿರ ವೇದಿಕೆ ಕಾರ್ಯಕ್ರಮ, ಕೃಷಿ ಬಗ್ಗೆ ಉಪನ್ಯಾಸ. ಪ್ರಗತಿಪರ ರೈತ ಈರಪ್ಪ ನಾಯ್ಕ. ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ ಸಂಜೆ ೪ಕ್ಕೆ ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆ ಕಲಾ ಜಾಥಾ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್.ಟಿ.ವಿ ಅವರಿಂದ ಉದ್ಘಾಟನೆ.ಸಂಜೆ ೬ಕ್ಕೆ ಶಿವಪ್ಪನಾಯಕ ಅರಮನೆ ಕಲಾ ದಸರಾ, ಸುಗಮ ಸಂಗೀತ, ಜಾನಪದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ. ಸಿನಿಮಾ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಂದ ಉದ್ಘಾಟನೆ. ಸಂಜೆ ೬ಕ್ಕೆ ಪೊಲೀಸ್ ಸಮುದಾಯ ಭವನ ರಂಗಗೀತೆ ಗಾಯನ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಂದ ಉದ್ಘಾಟನೆ ನೆರವೇರಿಸುವರು
ಸೆ 26ರ ಶುಕ್ರವಾರ
ಸಂಜೆ 5ಕ್ಕೆ ಸಿಟಿ ಸೆಂಟರ್ ಮಾಲ್ ಟ್ಯಾಲೆಂಟ್ ಹಂಟ್. ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ. ಸಂಜೆ 5ಕ್ಕೆ ಶಿವಪ್ಪನಾಯಕ ಅರಮನೆ ಕಲಾ ದಸರಾ. ನಗೆ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಉದ್ಘಾಟನೆ: ನಟ ಮುಖ್ಯಮಂತ್ರಿ ಚಂದ್ರು, ಸಂಜೆ 5ಕ್ಕೆ ಡಾ. ಅಂಬೇಡ್ಕರ್ ಭವನ ಸುಗಮ ಸಂಗೀತ. ಸಾಹಿತ್ಯ ಸಂಭ್ರಮ. ಉದ್ಘಾಟನೆ ಡಿಎಆರ್ ಡಿವೈಎಸ್‌ಪಿ ಎಸ್.ವಿ.ದಿಲೀಪ್‌ರ ನೆರವೇರಿಸುವರು.
ಸೆ. 27ರ ಶನಿವಾರ
ಬೆಳಗ್ಗೆ 10ಕ್ಕೆ ಡಾ. ಅಂಬೇಡ್ಕರ್ ಭವನ ಪೌರ ಕಾರ್ಮಿಕರ ದಸರಾ. ಉದ್ಘಾಟನೆ: ಪತ್ರಕರ್ತ ಎನ್.ರವಿಕುಮಾರ್ ಸಂಜೆ ೬ಕ್ಕೆ ಫ್ರೀಡಂ ಪಾರ್ಕ್ ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ. ಉದ್ಘಾಟನೆ: ಜಿ.ಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ. ಉಪಸ್ಥಿತಿ: ಜಿ.ಪಂ. ಉಪ ಕಾರ್ಯದರ್ಶಿ ಅನ್ನಪೂರ್ಣಾ ನಾಗಪ್ಪ ಮುದುಕಮ್ಮನವರ, ಲೆಕ್ಕ ಪರಿಶೋಧನಾ ವರ್ತುಲ ಜಂಟಿ ನಿರ್ದೇಶಕಿ ಗೀತಾ ಎನ್.ಯರೇಶೀಮಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕೆ.ಎಸ್.ಶ್ರೀಕಾಂತ್. ಉಪಸ್ಥಿತರಿರುವರು.
ಸೆ. 28 ರ ಭಾನುವಾರ
ಬೆಳಗ್ಗೆ 5.30ಕ್ಕೆ ಕುವೆಂಪು ರಂಗಮಂದಿರ ಆವರಣ ಯೋಗ ದಸರಾ. ಉದ್ಘಾಟನೆ: ಸಚಿವ ಮಧು ಬಂಗಾರಪ್ಪ, ಬೆಳಗ್ಗೆ ೯ ರಿಂದ ರಾತ್ರಿ ೮ರವರೆಗೆ ಕಮಲಾ ನೆಹರು ಕಾಲೇಜು ಗಮಕ ಕಾರ್ಯಕ್ರಮ. ಗಮಕ ರತ್ನಾಕರ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್. ಸಂಜೆ ೫ಕ್ಕೆ ಪತ್ರಿಕಾ ಭವನ ಪತ್ರಕರ್ತರ ದಸರಾ. ಉದ್ಘಾಟನೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ. ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಸಂಘದ ನಿರ್ದೇಶಕ ಎನ್.ರವಿಕುಮಾರ್. ಸಂಜೆ ೫ಕ್ಕೆ ಫ್ರೀಡಂ ಪಾರ್ಕ್ ಮ್ಯೂಸಿಕಲ್ ನೈಟ್ಸ್. ಸಚಿವ ಮಧು ಬಂಗಾರಪ್ಪ, ನಟ ಡಾ.ಶಿವರಾಜ್ ಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ. ಸಂಜೆ ೬ಕ್ಕೆ ಫ್ರೀಡಂ ಪಾರ್ಕ್ ಆಹಾರ ಮೇಳ. ಉದ್ಘಾಟನೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್.ಆರ್ ಉಪಸ್ಥಿತಿಯಲ್ಲಿ ನಡೆಯಲಿದೆ.
ಸೆ 29ರ ಸೋಮವಾರ
ಬೆಳಗ್ಗೆ 10.30 ಕ್ಕೆ ಶಿವಪ್ಪನಾಯಕ ವೃತ್ತ ಸಾರ್ವಜನಿಕರಿಗೆ ಆಹಾರ ತಿನ್ನುವ, ಹಣ್ಣು ತಿನ್ನುವ ಸ್ಪರ್ಧೆ. ಉದ್ಘಾಟನೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ.ಹೆಚ್.ಆರ್ ಸಂಜೆ ೬ಕ್ಕೆ ಫ್ರೀಡಂ ಪಾರ್ಕ್ ಭಾವಗೀತೆ ಹಾಗೂ ವಚನಗಳ ಗೀತ ನೃತ್ಯ ವೈಭವ. ಅವತರಿಸು ಭ ನೃತ್ಯ ರೂಪಕ. ಉದ್ಘಾಟನೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಉಪಸ್ಥಿತಿ: ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್
ಸೆ.30ರ ಮಂಗಳವಾರ
ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಸಮಾರೋಪ ಸಮಾರಂಭ ಅತಿಥಿಗಳಾಗಿ ಹೊನ್ನಾಳಿ ಚಂದ್ರಶೇಖರ್, ಡಾ.ಗಣೇಶ್ ಕೆಂಚನಾಲ, ಉಮೇಶ್ ಹಾಲಾಡಿ, ಸಂಜೆ ೭.೧೫ಕ್ಕೆ ಕುವೆಂಪು ರಂಗಮಂದಿರದಲ್ಲಿ ಕುಟುಂಬ ರಂಗ ಸಂಚಾಲಕರು ಎಚ್.ಹೆಚ್.ಸುರೇಶ್, ಎಸ್.ಪಿ ಶ್ರೀಕಂಠಪ್ರಸಾದ್ ರಂಗಭೂಮಿ ಕಲಾವಿದರ ಉಪಸ್ಥಿತಿಯಲ್ಲಿ ನಡೆಯಲಿದೆ.
ಅ. 1 ರ ಬುಧವಾರ
ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್ ನಾಟ್ಯ ವೈಭವ, ಜಾನಪದ ವೈಭವ. ಉದ್ಘಾಟನೆ ನಟಿ ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಲಿದ್ದಾರೆ.
ಅ 2 ರ ಗುರುವಾರ
ಮಧ್ಯಾಹ್ನ 9.30ಕ್ಕೆ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ, ಅಲ್ಲಮ ಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕೆಕ ಚಾಲನೆ ತಹಶೀಲ್ದಾರ್ ವಿ.ಎಸ್.ರಾಜೀವ್‌ರವರಿಂದ ಸಂಜೆ ೫ಕ್ಕೆ ಫ್ರೀಡಂ ಪಾರ್ಕ್‌ಸುಗಮ ಸಂಗೀತ. ಸುರೇಖಾ ಹೆಗ್ಡೆ ಮತ್ತು ಸಂಗಡಿಗರು ನಡೆಯಲಿದೆ ಎಂದರು
ದೇವಸ್ಥಾನ, ಕೋಟೆ ರಸ್ತೆ, ಶಿವಮೊಗ್ಗ,೯ಕ್ಕೆ ಕುವೆಂಪು ರಂಗಮಂದಿರ ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಆದ್ವಿಕಾ ನಾಯರ್, ಹಿತ ಪ್ರವೀಣ್ ಅವರಿಂದ ಚಾಲನೆ ಸಂಜೆ ೬ಕ್ಕೆ ಕುವೆಂಪು ರಂಗಮಂದಿರ iವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ