ಶಿವಮೊಗ್ಗ, : ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಪಾಲಿಟಿ ಹಾಸ್ಪಿಟಲ್‌ನ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆ) ಸಮಸ್ಯೆ ಹೊಂದಿದ್ದ ೬೬ ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು ಎಂದು ಕಾರ್ಡಿಯೊ ಥೊರಾಸಿಕ್ ಸರ್ಜನ್ ಡಾ. ಬಾಲಸುಬ್ರಮಣಿ ಆರ್.ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವುದರಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾಗುತ್ತದೆ. ನಾನು ಮತ್ತು ನನ್ನ ವೈದ್ಯಕೀಯ ತಂಡವು ಸುಮಾರು ಆರು ಗಂಟೆಗಳ ಕಾಲ ಈ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದರು.
ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆದಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್‌ಟೆನ್ನನ್ ಇತಿಹಾಸವೂ ಇತ್ತು. ಆಸ್ಥಿರ ಆಂಜಿನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯ ದಕ್ಷತೆ ಕಡಿಮೆಯಾಗಿದ್ದು, ಡಯಾಸ್ಟೋಲಿಕ್ ಡಿಸ್ ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಾಗಿತ್ತು ಎಂದರು.
ಇಂತಹ ಪ್ರಕರಣಗಗಳು ವೈದ್ಯರಿಗೆ ಸವಾಲು :
ಕೈಪೋಸಿಸ್ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ಭಾರಿ ಶಸ್ತ್ರಚಿಕಿತ್ಸಾ ಪರಿಣತಿ ಬೇಕು. ಕೈಫೋಸಿಸ್‌ನಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯು ಪಕ್ಕೆಲುಬುಗಳು ಮತ್ತು ಎದೆ ಕುಹರದ ಸಹಜ ಸಾಲನ್ನು ಬದಲಾಯಿಸುತ್ತದೆ. ಹೃದಯ ಶಸ್ತ್ರಚಿಕಿತ್ಸೆಗೆ ಸವಾಲೊಡ್ಡುತ್ತದೆ. ಬೆನ್ನುಮೂಳೆಯ ವಕ್ರತೆಯ ಕಾರಣದಿಂದ ಶಸ್ತ್ರಚಿಕಿತ್ಸಾ ಟೇಬಲ್‌ನಲ್ಲಿ ರೋಗಿಯನ್ನು ಸರಿಯಾಗಿ ಇರಿಸುವುದು ಕೂಡ ಕಷ್ಟಕರವಾಗುತ್ತದೆ. ಹೃದಯದ ಮೇಲೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ರೋಗಿಯ ಎದೆ ಮತ್ತು ತಲೆಯನ್ನು ಹೆಚ್ಚುವರಿ ಬೆಂಬಲ ನೀಡಿ ಎತ್ತಿಹಿಡಿಯಬೇಕು. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಬೇಕಿರುತ್ತದೆ ಎಂದರು.
ಕೈಪೋಸಿಸ್ ಸಮಸ್ಯೆಯು ಮನುಷ್ಯನ ಸಾಮಾನ್ಯ ಘೋರಾಸಿಕ್ ರಚನೆಯನ್ನೇ ಬದಲಾಯಿಸುತ್ತದೆ. ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಕಷ್ಟಗೊಳಿಸುತ್ತದೆ. ರೋಗಿಯ ವಿಶಿಷ್ಟ ದೇಹರಚನೆಗೆ ತಕ್ಕಂತೆ ಶಸ್ತ್ರಚಿಕಿತ್ಸಾ ಯೋಜನೆಯನ್ನು ಹೊಂದಿಸಿಕೊಳ್ಳಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ವೈದ್ಯರು ಮೂರು ಗ್ರಾಫ್ಟ್‌ಗಳನ್ನು ಬಳಸಿ ಆಫ್- ಪಂಪ್ ಸಿಎಬಿಜಿ (ಒಪಿಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದರು. ಮರುದಿನ ರೋಗಿಗೆ ಎಕ್ಸ್ ಟ್ಯೂಟೇಟ್ (ಟ್ಯೂಬ್ ಅನ್ನು ತೆಗೆಯುವುದು) ಮಾಡಲಾಯಿತು ಮತ್ತು ನಂತರ ರೋಗಿಯು ನಿಧಾನಕ್ಕೆ ಚೇತರಿಸಿಕೊಂಡರು ಎಂದು ತಿಳಿಸಿದರು.
ಕೈಫೋಸಿಸ್ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ ಪ್ರಕ್ರಿಯೆ ಕೂಡ ಕಾರ್ಯವಿಧಾನದಷ್ಟೇ ಸವಾಲಿನದ್ದಾಗಿದೆ. ಎದೆಭಾಗದಲ್ಲಿನ ನೋವಿನ ಕಾರಣಕ್ಕೆ ರೋಗಿಗಳು ಬಾಗಿದ ಭಂಗಿಯನ್ನು ಅನುಸರಿಸಬ ಹುದು. ಅದನ್ನೇ ಅಭ್ಯಾಸವಾಗಿಸಿಕೊಳ್ಳಬಹುದು. ಈಗಾಗಲೇ ಕೈಫೋಸಿಸ್ ಹೊಂದಿರುವವರಿಗೆ ಇದರಿಂದ ಶ್ವಾಸಕೋಶದ ವಿಸ್ತರಣೆ ಕಡಿಮೆಯಾಗಿ ಉಸಿ ರಾಟದ ತೊಂದರೆ ಉಂಟಾಗಬಹುದು, ಶ್ವಾಸಕೋಶ ಕುಗ್ಗುವಿಕೆ (ಆಟೆಲೆಕ್ಟ್ರಾಸಿಸ್), ಕತ್ತನ್ನು ನಿಧಾನವಾಗಿ ತಿರುಗಿಸುವುದು, ಚೇತರಿಕೆ ನಿಧಾನವಾ ಗುವುದು ಮತ್ತು ಫಿಸಿಯೋಥೆರಪಿ ಸಂದರ್ಭದಲ್ಲಿಯೂ ಸವಾಲು ಇರಬಹುದು. ಫಿಸಿಯೋಥೆರಪಿಸ್ಟ್‌ಗಳು ಕೈಫೋಸಿಸ್ ಸಮಸ್ಯೆಯು ಎದೆಗೂಡಿನ ಚಲನೆಯನ್ನು ಮತ್ತಷ್ಟು ಕಷ್ಟಕರಗೊಳಿಸಬಹುದು ಎಂದು ಹೇಳುತ್ತಾರೆ. ಹಾಗಾಗಿ ಚೇತರಿಕೆಯ ಪ್ರಕ್ರಿಯೆಯಗಳಲ್ಲಿ ಉಸಿರಾಟ ವ್ಯಾಯಾಮಗಳು ಬಹಳ ಮುಖ್ಯವಾಗುತ್ತವೆ ಎಂದರು.
ರೋಗಿಗಳಿಗೆ ಶಸ್ತ್ರಚಿಕಿತ್ಸೆಯಾದರೆ ಮಾತ್ರ ಸಾಲದು, ಸೂಕ್ತವಾದ ಹೃದಯ ಆರೈಕೆ ಅಗತ್ಯವಾಗಿರುತ್ತದೆ. ಪರಿಣತರ ಮೇಲ್ವಿಚಾರಣೆಯಲ್ಲಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಅಗತ್ಯವಿದೆ. ಸೂಕ್ತ ಆಹಾರ ಮತ್ತು ಪೌಷ್ಟಿಕತೆ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಒತ್ತಡವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ಬೇಕು’ ಎಂದರು.
ಸಂದರ್ಭದಲ್ಲಿ ಡಾ. ಚಕ್ರವರ್ತಿ ಸಂಡೂರ, ವರ್ಗೀಸ್ ಪಿ.ಜಾನ್, ಶರತ್ ಶ್ರೀಷ್ಮ, ಅಶ್ವತ್, ಬಸಯ್ಯ, ಗಾಣಾಚಾರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸು : ಡಾ.ಬಾಲಸುಬ್ರಮಣಿ
ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸು

