Author: Raghu Shetty

ನವರಾತ್ರಿ ಹಬ್ಬಕ್ಕೆ ಇಂದು ಆಯುಧಪೂಜೆ, ಮಹಾನವಮಿ ನಾಳೆ ವಿಜಯದಶಮಿಯೊಂದಿಗೆ ತೆರೆಬೀಳುತ್ತಿದೆ. ಇಂದು ಎಲ್ಲೆಡೆ ನವರಾತ್ರಿ ಆಯುಧ ಪೂಜೆ ಸಂಭ್ರಮ. ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರೋಡ್, ಗೋಪಿ ಸರ್ಕಲ್, ಜೈಲ್ ಸರ್ಕಲ್ ಸೇರಿದಂತೆ ಅನೇಕ ಕಡೆಗಳಲ್ಲಿ, ರಾಜ್ಯದ ಹಲವೆಡೆ ಜನರ ಹೂವು, ಹಣ್ಣು, ತರಕಾರಿ ಖರೀದಿ ಭರಾಟೆ ಜೋರಾಗಿದೆ. ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಜೋರಾಗಿದೆ. ಸಂಚಾರ ದಟ್ಟಣೆಬೆಲೆ ಏರಿಕೆ ಮಧ್ಯೆ ಜನರು ಹೂವು, ಹಣ್ಣು, ತರಕಾರಿ, ಪೂಜಾ ಸಾಮಾಗ್ರಿ ಖರೀದಿಸುತ್ತಿದ್ದಾರೆ. ಗಾಂಧಿ ಬಜಾರ್ ಮತ್ತು ದುರ್ಗಿಗುಡಿ, ನೆಹರು ರಸ್ತೆಯಲ್ಲಿ ಬರುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಸಾರ್ವಜನಿಕರು ವಾಹನ ಪಾರ್ಕ್ ಮಾಡಲು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.ಅಶ್ವಿನಿ ಮಾಸದ ೯ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆಯುಧ ಪೂಜೆ ಮಹತ್ವ ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ…

Read More

ಶಿವಮೊಗ್ಗ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಸುವಿಧಾ ಯೋಜನೆಯಡಿ ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ, ಶಿಶುಪಾಲನ ಭತ್ಯೆ, ಮರಣ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿಕ ದ್ವಿಚಕ್ರವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನ ಸಲಕರಣೆಗಳ ಯೋಜನೆ ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿಚಾಲಿತ ವ್ಹೀಲ್‌ಚೇರ್ ಯೋಜನೆಗಳನ್ನು ಡಿ.ಬಿ.ಟಿ ತಂತ್ರಾಂಶದ ಟಿeತಿs ೨ ಮೂಲಕ ಪಡೆಯಲು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ವಿಕಲಚೇತನರು ಆನ್‌ಲೈನ್ ಮೂಲಕ ಗ್ರಾಮಾ ಒನ್, ಕರ್ನಾಟಕ ಒನ್, ಸೇವಾಸಿಂಧು ಪೋರ್ಟಲ್‌ನಲ್ಲಿ ಅ.೧೫ರೊಳಗಾಗಿ ಅರ್ಜಿ ಸಲ್ಲಿಸಿ ಎಲ್ಲಾ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ದ್ವಿಪ್ರತಿಗಳಲ್ಲಿ ಆಯಾ ತಾಲೂಕು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ಎಂಆರ್. ಡಬ್ಲ್ಯೂ)ಗಳಿಗೆ, ಸ್ಥಳೀಯ…

Read More

ಕೇಂದ್ರ ಸರ್ಕಾರ ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ದಸರಾ ಹಬ್ಬದ ಹೊತ್ತಲಿ ಸರ್ಕಾರಿ ನೌಕರರಿಗೆ ಸರ್ಕಾರಿ ಬಂಪರ್ ಗಿಫ್ಟ್ ನೀಡಿದ್ದು, ಸರ್ಕಾರವು ತನ್ನ ಉದ್ಯೋಗಿಗಳಿಗೆ ಬೋನಸ್ ನೀಡಲಿದೆ. ಆದಾಯ ಇಲಾಖೆ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಉದ್ಯೋಗಿಗಳಿಗೆ ಉತ್ಪಾದಕತೆ-ಸಂಬಂಧಿತ ಬೋನಸ್ ರೂಪದಲ್ಲಿ 30 ದಿನಗಳ ಸಂಬಳಕ್ಕೆ ಸಮಾನವಾದ ಅಡ್-ಹಾಕ್ ಬೋನಸ್ ಅನ್ನು ಘೋಷಿಸಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯನ್ನ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರೊಡಕ್ಟ್ವಿಟಿ ಆಧಾರಿತ ಬೋನಸ್ ಅನ್ನು ಘೋಷಿಸಿದೆ. ಕೇಂದ್ರ ಸರ್ಕಾರಿ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಉದ್ಯೋಗಿಗಳು 2024-25ನೇ ಸಾಲಿಗೆ 30 ದಿನಗಳ ಸಂಬಳಕ್ಕೆ ಸಮಾನವಾದ ಅಡ್-ಹಾಕ್ ಬೋನಸ್ ಅನ್ನು ಪಡೆಯುತ್ತಾರೆ ಎಂದು ಹಣಕಾಸು ಸಚಿವಾಲಯ…

Read More

ಶಿವಮೊಗ್ಗ : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಈಡಿಗ ಎಂದು ನಮೂದಿಸಿ ಎಂದು ಈಡಿಗ ಸಮಾಜದ ಜಿಲ್ಲಾಧ್ಯಕ್ಷರಾದ ಅಜ್ಜಪ್ಪ ಕಾಸರಗೊಪ್ಪ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೆಲವು ಗುಂಪುಗಳು ಸೇರಿಕೊಂಡು ಈಡಿಗ ಸಮುದಾಯವನ್ನು ವಿಂಗಡಿಸುವ ಹುನ್ನಾರ ಮಾಡುತ್ತಿದ್ದಾರೆ. ಅದ್ದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು. ಸಂಘ ನಿರ್ಧಾರ ಒಂದೇ ಜಾತಿ ಕಾಲಂನಲ್ಲಿ ಈಡಿಗ ಎಂದು ನಮೂದಿಸಿ, ಸರ್ಕಾರ ಯೋಜನೆಗಳನ್ನು ಪಡೆಯಲು ಅನುಕೂಲವಾಗಲಿದೆ. ಈಗಾಗಲೇ ನಾವು ಹಲವಾರು ಸರ್ಕಾರದಿಂದ ಪ್ರಯೋಜನಗಳನ್ನು ಈಡಿಗ ಎಂದೇ ಪಡೆದುಕೊಂಡಿದ್ದೇವೆ. ಅದರಲ್ಲಿ ಉದಾಹರಣೆ ಸಮುದಾಯ ಭವನಗಳು, ಈಡಿಗರ ಸಮುದಾಯ ಭವನವೆಂದು ಸರ್ಕಾರದಿಂದ ಸಹಾಯ ಧನ ಪಡೆದಿದ್ದೇವೆ ಎಂದರು.೪೦ ವರ್ಷದಿಂದ ಈಡಿಗ ಎಂದು ನಮ್ಮ ದಾಖಲಾತಿ ಗಳಲ್ಲಿ ಬರೆಯಿಸಿಕೊಂಡು ಬಂದಿದ್ದೇವೆ. ಈಗ ಈಡಿಗ ಬೇಡ ದೀವರು ಬರೆಯಿಸಿ ಎಂದು ಕರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ದೀವರು ಎಂದು ಬರೆಯಿಸಲು ಕರೆಕೊಟ್ಟಿರುವುದು ಒಂದು ಗುಂಪು ಬಿಟ್ಟರೆ ಈಡಿಗ ಸಮಾಜ…

Read More

ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ *ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ಅನ್ವಯವಾಗುವಂತೆ 3 ವರ್ಷಗಳ ಸಡಿಲಿಕೆ* ಬೆಂಗಳೂರು, : ರಾಜ್ಯ ಸರ್ಕಾರದ ಎಲ್ಲಾ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಲವಾರು ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅನುಮೋದನೆಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇಂದು ಆದೇಶ ಪ್ರಕಟಿಸಿದೆ. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು. ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ…

Read More

ಶಿವಮೊಗ್ಗ: ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ತಮ್ಮ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜಿ.ಪಂ ಸಿಇಓ ಹೇಮಂತ್.ಎನ್ ಸಲಹೆ ನೀಡಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ನಜೀರ್‌ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ-ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಲೀಡ್ ಬ್ಯಾಂಕ್‌ಗಳು ಆ ಭಾಗದಲ್ಲಿ ತಮ್ಮ ಬ್ರಾಂಚ್‌ಗಳನ್ನು ಸ್ಥಾಪಿಸಿಕೊಳ್ಳಬೇಕು. ಭದ್ರಾವತಿಯ ಗ್ರಾಮೀಣ ಹಾಗೂ ಹೋಬಳಿಗಳಲ್ಲಿ ಈಗಾಗಲೇ ಐಡಿಬಿಐ ಬ್ಯಾಂಕ್ ತನ್ನ ಬ್ರಾಂಚ್ ತೆರೆದಿದೆ. ಸೊರಬ, ಮುಡುಬ, ದೊಡಮಘಟ್ಟ ಭಾಗಗಳಲ್ಲಿ ಬ್ಯಾಂಕ್‌ಗಳ ಅವಶ್ಯಕತೆ ಇದೆ. ಹಾಗೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೂ ಕೂಡ ಇದ್ದಾರೆ. ಹಾಗಾಗಿ ಈ ಭಾಗಗಳಲ್ಲಿ ಶಾಖೆಯನ್ನು ತೆರೆದರೆ ರೈತರಿಗೆ, ಸ್ವ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ಸರ್ಕಾರದಿಂದ ಆರ್ಥಿಕ…

Read More

ಶಿವಮೊಗ್ಗ : ಸ್ವಾತಂತ್ರ್ಯ ಹೋರಾಟದ ಧೃವತಾರೆಯಾಗಿದ್ದ ಭಗತ್ ಸಿಂಗ್ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಾಸಕರಾದ ಚನ್ನಬಸಪ್ಪ ಹೇಳಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್‌ನ ಉಪ್ಪಾರ ಕೇರಿಯಲ್ಲಿ, ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ ೧೧೮ ಜನುಮ ದಿನಾಚರಣೆ ಕಾರ್ಯಕ್ರಮಕ್ಕೆ ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರ ಅದರಲ್ಲೂ ಯುವಕರ ಮನದಲ್ಲಿ ಮೂಡಬೇಕು. ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವ ಜನರು ಸ್ಫೂರ್ತಿಯಾಗಿ ತಗೆದುಕೊಳ್ಳಬೇಕು ಎಂದರು. ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು. ದೇಶದ ವಿರುದ್ಧವಾಗಿ ಯಾರೆ ಬಂದರೂ ಅವರನ್ನು ಸದೆಬಡಿಯುವಂತೆ ಅಂದಿನ ಕಾಲದಲ್ಲೇ ಕರೆ ನೀಡಿದರು.ಭಗತ್ ಸಿಂಗ್ ಎಂದರೆ ರೋಮಾಂಚನಗೊಳ್ಳುವ ಒಂದು ದೊಡ್ಡ ಶಕ್ತಿ. ಭಾರತದ ಸ್ವಾತಂತ್ರ್ಯ ಚಳವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ…

Read More

ಶಿವಮೊಗ್ಗ : ಹಿಂದೂ ಸಮಾಜ ಛಿದ್ರ ಮಾಡುವ ಹುನ್ನಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಸಮೀಕ್ಷೆಯಿಂದ ಸಾಧುಸಂತರು ನಡುವೆ ಗೊಂದಲ ಸೃಷ್ಟಿ ಮಾಡಿ ಬಿರುಕು ಉಂಟು ಮಾಡುತ್ತಿದೆ ಇದರ ಶಾಪ ಸಿದ್ದರಾಮಯ್ಯನವರು ಅನುಭವಿಸಬೇಕಾಗುತ್ತದೆ ಎಂದರು. ಈ ಸಮೀಕ್ಷೆ ಲಿಂಗಾಯತ ಸಮಾಜದಲ್ಲಿ ಬಿರುಕು ಉಂಟು ಮಾಡುತ್ತಿದೆ, ಕೆಲವು ಸ್ವಾಮೀಜಿ ಹಿಂದೂ ಎಂದು ಬರೆಯಿರಿ ಎಂದ್ರೆ ಕೆಲವು ವೀರಶೈವ ಮುಖಂಡರು ವೀರಶೈವ ಎಂದು ಧರ್ಮ ಕಾಲಂನಲ್ಲಿ ನಮೂದಿಸಿ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು. ಈಶ್ವರ ಖಂಡ್ರೆ ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಹಿಂದೂ ಎಂದು ನಮೂದಿಸಿ ಎನ್ನುತ್ತಾರೆ. ಮಹಾ ಸಭಾ ಲೆಟರ್‌ಹೆಡ್‌ನಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಎಂದು ನಮೂದಿಸಿ ಎಂದು ಹೇಳಿ ಸಹಿ ಮಾಡಿದ್ದಾರೆ ಇವರ ಈ ಗೊಂದಲ ನೀತಿ ಇವರನ್ನು ಸರ್ವನಾಶಕಕ್ಕೆ ತಲ್ಲುತ್ತದೆ ಎಂದರು. ಸಮೀಕ್ಷೆ ವರದಿ ಬಿಡುಗಡೆಯಾದರೇ ರಾಜ್ಯ ಗಲಾಟೆ ಅಗುವಂತು…

Read More

Necessary action for development ಶಿವಮೊಗ್ಗ : ರಾಜ್ಯದ ಕಿವುಡ, ಮೂಕರು ಸೇರಿದಂತೆ ವಿಕಲಚೇತನರ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾ ಗಿರುವ ಎಲ್ಲಾ ರೀತಿಯ ಕ್ರಮಗಳನ್ನು ಮಾನವೀಯ ನೆಲೆಯಲ್ಲಿ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು ಅವರು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಮೂಕರು ಮತ್ತು ಶ್ರವಣ ಮಾಂದ್ಯರ ಸಂಘ ಇವರುಗಳ ಸಂಯುಕ್ತಾಕ್ಷರದಲ್ಲಿ ಏರ್ಪಡಿಸಲಾಗಿದ್ದ ಕಿವುಡರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು ಈ ಸಂಬಂಧ ರಾಜ್ಯದ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ ಅವರು ಅಕ್ಟೋಬರ್ ೦೩ರಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು ವಿಕಲಚೇತನರಿಗೆ ಅಗತ್ಯವಾಗಿರುವ ನೆರವು ಆರ್ಥಿಕ ಸಹಕಾರ ನೀಡಲಾಗುವುದು ಎಂದ ಅವರು ರಾಜ್ಯದಾದ್ಯಂತ ಈಗಾಗಲೇ ೪೪ ವಿಶೇಷ ಶಾಲೆಗಳು ಖಾಸಗಿ ಮತ್ತು ಸರ್ಕಾರಿ…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೂತನವಾಗಿ ಆರಂಭಿಸಿರುವ ಜಾಲತಾಣದಲ್ಲಿ ಜಿಲ್ಲೆಯ ವಿಶೇಷವಾದ, ಅತ್ಯದ್ಭುತವಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು, ಮತ್ತಿತರ ಮಾಹಿತಿಯನ್ನು ಅಳವಡಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಜಾಲತಾಣದಲ್ಲಿ ಜಿಲ್ಲೆಯ ೬೧ಕ್ಕೂ ಹೆಚ್ಚಿನ ಜಿಲ್ಲೆಯ ಪ್ರವಾಸಿ ತಾಣಗಳು, ಸ್ಥಳ ಐತಿಹ್ಯ, ವ್ಯಕ್ತಿಚಿತ್ರ, ವಿಶ್ವ ಪ್ರಸಿದ್ಧ ಜೋಗದ ಜಲಪಾತ, ನಗರಕೋಟೆ, ಕೊಡಚಾದ್ರಿ ತಪ್ಪಲು, ವನ್ಯ ಮೃಗಗಳು, ಸಸ್ಯ ಸಂಪತ್ತು ಸೇರಿದಂತೆ ಸಹಸ್ರಾರು ವಿವಿಧ ಮಾಹಿತಿಯನ್ನು ಒದಗಿಸಿರುವುದು ಜಗತ್ತಿನ ಹಲವು ಭಾಗಗಳಲ್ಲಿ ವಾಸಿಸುವವರನ್ನು ಆಕರ್ಷಸುವಂತೆ ಮಾಡಿರುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದವರು…

Read More