Subscribe to Updates
Get the latest creative news from FooBar about art, design and business.
Author: Raghu Shetty
ಶಿವಮೊಗ್ಗ : ಬಹು ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನಾದಿ ಕಾಲದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡುವುದು, ತೊಂದರೆ ಕೊಟ್ಟು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬಾರದು. ಹಾಗೂ ರೈತರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ವಯ ನಡೆದುಕೊಳ್ಳಬೇಕೆಂದು ಸಂಬAಧಿಸಿದ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಹೊಸದಾಗಿ ಒತ್ತುವರಿಗೆ ಅವಕಾಶ ಮಾಡಬಾರದು. ಹಾಗೂ 27-04-1978 ರ ಪೂರ್ವದ ಅರಣ್ಯ ಒತ್ತುವರಿವನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ…
:ಏಕತೆ ಮತ್ತು ನಂಬಿಕೆಯು ಜಾಗತಿಕ ಮಟ್ಟದಲ್ಲಿ ಭಾರತದ ಸುಸ್ಥಿರ ಭವಿಷ್ಯವನ್ನು ಪ್ರೇರೇಪಿಸುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು ರಾಜಸ್ತಾನದ ಬ್ರಹ್ಮ ಕುಮಾರಿಯರ ಶಾಂತಿವನದ ಡೈಮಂಡ್ ಹಾಲ್ ನಲ್ಲಿ ಶುಕ್ರವಾರ ಸಂಜೆ ನಡೆದ ಒಗ್ಗಟ್ಟು ಮತ್ತು ನಂಬಿಕೆ ಕುರಿತ ಜಾಗತಿಕ ಸಮಾವೇಶದಲ್ಲಿ ಆರ್ಥಿಕ ಮತ್ತು ಪರಿಸರ ಹಿತಾಸಕ್ತಿಗಳ ಸಮತೋಲನ ಕುರಿತು ಮಾತನಾಡಿದ ಅವರು, ದೇಶದ ಪ್ರಗತಿಗೆ ಆರ್ಥಿಕತೆ ಎಂಬುದು ಇಂಜಿನ್ ಇದ್ದಂತೆ. ಬಹಳ ಸಮಯದಿಂದ ಆರ್ಥಿಕತೆ ಮತ್ತು ಪರಿಸರವನ್ನು ಒಂದೇ ವಲಯದಲ್ಲಿವೆ. ಇವೆರಡು ಪ್ರತಿಸ್ಪರ್ಧಿಗಳಲ್ಲ. ವಾಸ್ತವವಾಗಿ ಪಾಲುದಾರರಾಗಿದ್ದಾರೆ. ಹಾಗಾಗಿ ಎರಡನ್ನೂ ಸಮಾನವಾಗಿ ಪರಿಗಣಿಸಬೇಕಿದೆ ಎಂದರು. ಅನಸೂಯಾ ದೀದಿ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಈ ಸಾಧನೆ ಮಾಡಿದೆ ಈ ಆಗಸ್ಟ್ ವೇದಿಕೆಯಲ್ಲಿ ನಾನು ಇಂದು ಇಲ್ಲಿ ನಿಲ್ಲಲು ಸಾಧ್ಯ. ಪರಿಶುದ್ಧತೆ ಮತ್ತು ಶಕ್ತಿಯ ಮೂಲಕ ಜಗತ್ತನ್ನು ಪರಿವರ್ತಿಸುತ್ತಿರುವ ಸಾವಿರಾರು ಬ್ರಹ್ಮಕುಮಾರಿ ಸಹೋದರಿಯರಿಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ ಅವರ ದಣಿವರಿಯದ ಸೇವೆಯು ನಮ್ಮ ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಸಾಮರಸ್ಯದ ಮೌಲ್ಯಗಳನ್ನು…
ಭೂಮಿ ಹುಣ್ಣಿಮೆಯ ವೈಶಿಷ್ಟ್ಯತೆ….! ★ ಭೂಮಿಹುಣ್ಣಿಮೆಯ ಬುಟ್ಟಿ ಹಸೆ ಮಲೆನಾಡಿನ ಶಿವಮೊಗ್ಗ ಮತ್ತು ಉತ್ತರ ಕನ್ನ ಜಿಲ್ಲೆಯಲ್ಲಿ ಕಂಡುಬರುವ ಆಚರಣೆಯ ಮೂಲದ ಈ ಕರಕುಶಲ ಕಲೆ ದೇಸೀ ಕಲಾಪ್ರಕಾರದ್ದು. ಬಿದಿರಿನ ಬುಟ್ಟಿಗಳ ಮೇಲೆ ಆದಿಮ ರೇಖೆಗಳ ವಿನ್ಯಾಸದ ಚಿತ್ತಾರ ಬರೆಯಲಾಗುವುದು. ಕೃಷಿ, ಪಲವಂತಿಕೆ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರ ಮೂಡಿಸಲಾಗುತ್ತದೆ. ಆಶ್ವಿಜ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಭೂಮಿ ಹುಣ್ಣಿಮೆ ಪ್ರತಿವರ್ಷ ದೀಪಾವಳಿಗೆ 15 ದಿನ ಮೊದಲು ಬರುತ್ತದೆ. ಅಂದು ಪೂಜೆಗೆ ಈ ಬುಟ್ಟಿ ಚಿತ್ತಾರ ಬಳಸುತ್ತಾರೆ. ಕಂಡುಬರುವ ಪ್ರದೇಶಗಳು:- ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಸಾಗರ, ಸೊರಬ, ತೀರ್ಥಹಳ್ಳಿ, ಸಿದ್ದಾಪುರ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಕಂಡು ಬರುವ ಆಚರಣೆ ಮೂಲದ ವಿಶಿಷ್ಟ ಜಾನಪದ ಕರಕುಶಲ ಕಲೆ. ಇದು ಹಸೆ ಗೋಡೆ ಚಿತ್ತಾರ ಕಲೆಯೇ ಆಗಿದ್ದು ಬುಟ್ಟಿಗಳಲ್ಲಿ ಚಿತ್ರ್ರಿಸಲಾಗುತ್ತದೆ. ಹೆಚ್ಚು ರೇಖೆಗಳಲ್ಲಿ ಚಿತ್ರಿಸುವ ಹಲವು ಜ್ಯಾ ಮಿತಿಯ ಅಂಶಗಳನ್ನು ಒಳಗೊಂಡ ರೇಖಾ ಚಿತ್ತಾರವಾಗಿದೆ. ಭೂಮಿ ಹುಣ್ಣಿಮೆ ಹಬ್ಬಕ್ಕೆ ಈ ಬುಟ್ಟಿ ಚಿತ್ತಾರವನ್ನು ಕಡ್ಡಾಯವಾಗಿ…
: ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ. ಪ್ರಕೃತಿಯು ಚೇತನ ವಾದದ್ದು ಅದರಲ್ಲಿ ಜೀವನವಿದೆ.ಸೌಂದರ್ಯ ಸಮೃದ್ಧತೆ ಇದೆ.ಫಲವಿದೆ ಹೀಗಾಗಿ ಪ್ರಕೃತಿಯ ಸೌಂದರ್ಯವನ್ನು ಹೆಣ್ಣಿಗೆ ಹೋಲಿಸಲಾಗುತ್ತದೆ. ಹೆಣ್ಣು ಗರ್ಭಧರಿಸಿ, ಹೆತ್ತು, ಹೊತ್ತು,ಮಗುವಿನ ಪಾಲನೆ-ಪೋಷಣೆ ಮಾಡಿದರೆ,ಭೂಮಿ ತಾಯಿ ತನ್ನಲ್ಲಿ ಬೆಳೆಬೆಳೆದು, ರೈತನಿಗೆ ನೀಡಿ ಜನತೆಯ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಹೆಣ್ಣು ಮತ್ತು ಭೂಮಿ ಎರಡರಲ್ಲಿಯೂ ಹೋರುವ – ಹೇರುವ ಸಮೃದ್ಧತೆಯ ಗುಣಗಳನ್ನು, ಪಾಲನೆ ಮಮಕಾರ ಗುಣಗಳನ್ನು ಕಂಡಿರುವ ಒಳ್ಳೆಯ ಮಕ್ಕಳು ಒಂದರೊಂದಿಗೆ ಇನ್ನೊಂದನ್ನು ನವೀಕರಿಸಲು ಯತ್ನಿಸುತ್ತಾರೆ. ಹೆಣ್ಣಿನಂತೆ ಭೂಮಿಯ ಜೀವನ ಕ್ರಿಯೆಯಲ್ಲಿಯೂ ಆಚರಣೆಗಳನ್ನು ಮಾಡಲು ಹಂಬಲಿಸುತ್ತಾರೆ. ಸೀಗೆ ಹುಣ್ಣಿಮೆಯ ಹೊತ್ತಿಗೆ ಭೂಮಿ ಮುಂಗಾರು ಫಸಲಿನಿಂದಲೂ ಎಳ್ಳಮವಾಸ್ಯೆಯ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತವೆ.ಗರ್ಭಿಣಿ ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಮುಂದೆ ಮಗುವನ್ನು ಹೇರುವ,ಮನೆ ತುಂಬುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂಮಿ ಬೆಳೆಗಳನ್ನು ಹೊತ್ತು ಮಕ್ಕಳಿಗೆ ಫಸಲು ಕೊಟ್ಟು ಅವನ ಕಣಜ ತುಂಬುವ ಕಾತರದಲ್ಲಿರುತ್ತಾಳೆ.ಹೀಗಾಗಿ ಗರ್ಭಿಣಿ ಹೆಂಗಸನ್ನು,ಭೂತಾಯಿಯನ್ನು ಒಂದೇ ದೃಷ್ಟಿಕೋನದಿಂದ ನೋಡ ಬಯಸುವ ಮಣ್ಣಿನ ಮಕ್ಕಳು…
ಶಿವಮೊಗ್ಗ : ಬಿ.ಎಸ್.ಯಡಿಯೂರಪ್ಪ ಜಾತಿ ರಾಜಕಾರಣ ಎನ್ನುವುದು ಮತ್ತು ವಿಜಯೇಂದ್ರ ಬಚ್ಚಾ ಎಂದು ತೆಗಳುವುದಕ್ಕೆ ಸಚಿವರಿಗೆ ಯಾವುದೇ ಯೋಗ್ಯತೆಯಿಲ್ಲ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿಎಸ್‌ವೈ ಸಿಎಂ ಆಗದಿದ್ದರೆ ಮಠಮಾನ್ಯಗಳು ಬೀದಿಗೆ ಬರುತ್ತಿತ್ತು ಎಂದು ಮಾದರ ಚೆನ್ನಯ್ಯ ಹೇಳಿದ್ದಾರೆ. ಚೌಡಯ್ಯ ಅಭಿವೃದ್ದಿ ನಿಗಮ, ಕನಕದಾಸರ ಹುಟ್ಟೂರು ಬಾಡಾ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ತೆರೆದವರು ಬಿಎಸ್‌ವೈ ಸಿಎಂ ಕಾಲದಲ್ಲಿ. ಜಾತ್ಯಾತೀತ ಎನ್ನುವುದಕ್ಕೆ ಅವರ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಅವರ ಬಗ್ಗೆ ಮಾತನಾಡಲು ಸಚಿವರಿಗೆ ಅರ್ಹತೆಯಿಲ್ಲ ಎಂದರು. ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಚಿವ ಈಶ್ವರಪ್ಪನವರ ಸಲಹೆಯನ್ನ ತೆಗೆದುಕೊಳ್ಳಲು ಸಿದ್ದ ಎಂದು ಸಂಸದರು ಘೋಷಿಸಿದ್ದಾರೆ. ಆದರೆ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಎಂದರು. ಅಭಿವೃದ್ಧಿ ವಿಚಾರದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಸಚಿವ ಮತ್ತು ಸಂಸದರು ಒಂದಾಗಿ ಎಂದಿದ್ದರು. ಅಭಿವೃದ್ಧಿ ವಿಚಾರದಲ್ಲಿ ನಾವು ರೆಡಿ ಇದ್ದೇವೆ. ಆದರೆ ಸಚಿವರು ಹಗೂ ರವಾಗಿ ಮಾತನಾಡುವುದನ್ನ ಬಿಡಬೇಕು ಎಂದು ಸಲಹೆ ನೀಡಿದರು.ಆದರೆ ಮಾಜಿ ಡಿಸಿಎಂ ಈಶ್ವರಪ್ಪ…
ಶಿವಮೊಗ್ಗ : ನಾಡ ಹಬ್ಬ ದಸರಾ ಸಂಭ್ರಮ ಸಡಗರದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯ ಮೂರು ಕಡೆಯೆಂದರೇ ತೀರ್ಥಹಳ್ಳಿ ಸೊರಬ, ಶಿವಮೊಗ್ಗದಲ್ಲಿ ದಸರಾ ಸಂಭ್ರಮದಲ್ಲಿ ಖುದ್ದಾಗಿ ಪಾಲ್ಗೊಂಡಿರುವುದು ನನ್ನ ಸಂಭ್ರಮ ಹೆಚ್ಚಿಸಿದೆ ಹಾಗೇ ಎಲ್ಲರಿಗೂ ಚಾಮುಂಡೇಶ್ವರಿ ತಾಯಿ ಒಳ್ಳೆದು ಮಾಡಲಿ ಎಂದರು. ಪ್ರಜಾಪ್ರಭುತ್ವ ಎತ್ತು ಹಿಡಿಯುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ತುಂಬಾ ಚನ್ನಾಗಿ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು, ನಮ್ಮ ಸಂವಿಧಾನ ಎತ್ತು ಹಿಡಿಯಬೇಕು ಎಂಬುವುದೇ ಕಾಂಗ್ರೆಸ್ ಸರ್ಕಾರ ಉದ್ದೇಶವಾಗಿದೆ. ಆ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದೇವೆ. ಉತ್ತಮ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇಕಡಾ ೫೬ ರಷ್ಟು ಯಶಸ್ವಿಯಾಗಿದೆ ಎಂದರು. ಅ.೭ರೊಳಗೆ ಸಂಪೂರ್ಣವಾಗಿ ಸಮೀಕ್ಷೆ ಮುಗಿಯಲಿದೆ. ಶೇಕಡಾವಾರು ೯೫% ಯಶಸ್ವಿಯಾಗಲಿದೆ ಎಂದರು. ಇದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಲಿದ ಎಂದರು. ಜೋಷಿ ಇಲ್ಲಿ ಮಾತನಾಡದನ್ನು ಮೋದಿಗೆ ಎದುರಿಗೆ…
ಶಿವಮೊಗ್ಗ: ಮಲೆನಾಡು ನಗರ ಶಿವಮೊಗ್ಗದಲ್ಲಿ ಗುರುವಾರ ವಿಜಯದಶಮಿಯ ಅಂಗವಾಗಿ ಜಂಬೂ ಸವಾರಿ ನಡೆಯಿತು. ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಉತ್ಸವಗಳು ಪ್ರಾರಂಭವಾದವು. ಶಿವಪ್ಪ ನಾಯಕ ಅರಮನೆಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು ವೇದ ಮಂತ್ರಗಳನ್ನು ಪಠಿಸುವುದರೊಂದಿಗೆ ಮೆರವಣಿಗೆ ಪ್ರಾರಂಭವಾಯಿತು. ಜಿಲ್ಲಾ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಸಕ್ರೆಬೈಲು ಆನೆ ಶಿಬಿರದ ಮೂರು ಆನೆಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊಂದಿರುವ ೬೫೦ ಕೆಜಿ ಬೆಳ್ಳಿ ಅಂಬಾರಿಯನ್ನು ಸಾಗರ್ ಹೊತ್ತೊಯ್ದರು. ಬಾಲಣ್ಣ ಮತ್ತು ಬಹದ್ದೂರು ಸಾಗರ್ ಜೊತೆ ಅಲ್ಲಮ ಪ್ರಭು ಮೈದಾನದಲ್ಲಿ ಅಂಬು ಕಡಿಯುವುದರ ಮೂಲಕ ಅದ್ಧೂರಿಯಾಗಿ ತೆರೆಕಂಡಿತು. ಮೆರವಣಿಗೆಯಲ್ಲಿ ಜಾನಪದ ಕಲಾವಿದರು ಡೊಳ್ಳು ಕುಣಿತ, ಕೀಲು ಕುದುರೆ ಮತ್ತು ಇತರ ಸಾಂಪ್ರದಾಯಿಕ ನೃತ್ಯಗಳು ಸೇರಿದಂತೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು.
ತೀರ್ಥಹಳ್ಳಿ : ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತರಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳಬೇಕು. ದೇಶದ ಪ್ರತಿ ನಾಗರಿಕನಿಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ ವಿದ್ಯಾರ್ಥಿಗಳು ಅದನ್ನು ಅರಿತು ರಾಷ್ಟ್ರ ಪ್ರಜ್ಞೆಯನ್ನು ಬೆಳೆಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು ಎಂದು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ತಿಳಿಸಿದರು. ಅವರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ ಹಾಗೂ ಇತರೆ ವೇದಿಕೆಗಳನ್ನು ಒಳಗೊಂಡಂತೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡುತ್ತಿದ್ದರು. ಪಶು ವೈದ್ಯರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಮುರುಳಿಧರ್ ಕಿರಣ ಕೆರೆ ಮಾತನಾಡಿ ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು ನಿಮ್ಮೆಲ್ಲರಲ್ಲೂ ಅದಮ್ಯವಾದ ಚೈತನ್ಯ ಶಕ್ತಿ ಅಡಗಿದೆ ನೀವು ಇದನ್ನ ಅರಿತು ನಿಮ್ಮ ಕಾಲೇಜು ದಿನಗಳಲ್ಲಿ ಪಠ್ಯದ ಜೊತೆಗೆ ಪಠ್ಯಪೂರಕವಾದ ಎನ್‌ಎಸ್‌ಎಸ್, ರೋವರ್ಸ್ ರೇಂಜರ್ಸ್, ರೆಡ್ ಕ್ರಾಸ್, ರೆಡ್…
ಶಿವಮೊಗ್ಗ:ಹಸಿರು ಜೀವನಕ್ಕೆ ಅತಿ ಅವಶ್ಯಕ. ಪರಿಸರ ಇದ್ದರೆ ಮನುಕುಲದ ಉಳಿವು. ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಹಸಿರು ನೆರವಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಠ ಏಳು ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ, ಅದಕ್ಕಿಂತ ಉತ್ತಮ ಕಾರ್ಯ ಬೇರೊಂದಿಲ್ಲ ಎಂದು ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಮಧ್ಯಪ್ರದೇಶದ ಇಂದೋರ್ ನ ನಿವಾಸಿ, ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ ಹೇಳಿದರು. ಶಿವಮೊಗ್ಗದ ಪ್ರೆಸ್ ಕಾಲೋನಿಯ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಒಂದು ಲಕ್ಷ ರೂ.ಗೌರವ ಸ್ವೀಕರಿಸಿ ಮಾತನಾಡಿದರು ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತು ಅವಶ್ಯಕ. ಪರಿಸರ ಇದ್ದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ಮರಗಳು ಸಹಸ್ರಾರು ವರ್ಷಗಳ ಕಾಲ ನಮಗೆ ಆಮ್ಲಜನಕವನ್ನು ನೀಡಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ವಾಯು ಮಾಲಿನ್ಯವನ್ನು ತಡೆಗಟ್ಟುತ್ತದೆ ಎಂದು ತಿಳಿಸಿದರು. ಸರ್ಕಾರಿ ಹುದ್ದೆಯಿಂದ ನಿವೃತ್ತಿಯಾದ ನಂತರ 22 ಎಕರೆ ಬಂಜರು ಭೂಮಿಯಲ್ಲಿ ಸುಮಾರು…
ಶಿವಮೊಗ್ಗ : ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ನುಡಿದಂತೆ ನಡೆದ ಲಾಲ್ ಬಹದ್ದೂರು ಶಾಸ್ತ್ರೀಜಿಯವರ ಅಪ್ರತಿಮ ದೇಶಪ್ರೇಮ, ನಿಷ್ಠೆ ಮತ್ತು ಪ್ರಾಮಾಣಿಕತೆ ಈ ದೇಶದ ಭವ್ಯ ಪರಂಪರೆಯ ಜೀವ- ಜೀವಾಳವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರು ಸಹಯೋಗದೊಂದಿಗೆ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 156ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಜಗತ್ತು ಕಂಡ ಶ್ರೇಷ್ಠ ಪುರುಷ. ಜಗತ್ತಿನ ಎಲ್ಲಾ ದೇಶಗಳಿಗೆ ಮಾದರಿ ಎನಿಸಿದ ಮಹಾನ್ ವ್ಯಕ್ತಿ ಮಹಾತ್ಮಗಾಂಧಿ. ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ನಂತರ ಜಗತ್ತೇ ಮೆಚ್ಚುವಂತಹ ನಾಯಕನಾಗಿ ಬೆಳೆದರು ಎಂದವರು ನುಡಿದರು. ಮಹಾತ್ಮ ಗಾಂಧಿ ಬದುಕಿನದ್ದಕ್ಕೂ ಸತ್ಯ, ಧರ್ಮವನ್ನು ಸಾರುತ್ತಾ ಬಂದಿದ್ದಲ್ಲದೆ ರಾಮರಾಜ್ಯದ ಸುಂದರ ಕನಸನ್ನು ಕಂಡವರು. ಗಾಂಧಿ ನನ್ನ ದೇಶ ಯಾವಾಗಲು ಏಕತೆಯಿಂದ, ಸಮಗ್ರತೆಯಿಂದ ಒಗ್ಗಟ್ಟಿನಿಂದ ಕೂಡಿರಬೇಕೆಂದು ಆಶಿಸಿದವರು. ಸತ್ಯ ಮೇವ ಜಯತೆಯ…