Author: Raghu Shetty

                            ಶಿವಮೊಗ್ಗ : ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷ್ಷೆಗೆ ರಾಜ್ಯಾದ್ಯಾಂತ ಎಲ್ಲಾ ರೀತಿ ತಯಾರಿ ನಡೆಸಲಾ ಗಿದ್ದು, ಈ ಸಮೀಕ್ಷೆಗಾಗಿ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಯಿಂದ ಒಟ್ಟು ೧.೬೦ ಲಕ್ಷ ಶಿಕ್ಷಕರನ್ನು ನೇಮಿ ಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಮಧುಬಂಗಾರಪ್ಪ ತಿಳಿಸಿ ದರು. ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರ ಣದಲ್ಲಿ ಸಾಮಾಜಿ, ಆರ್ಥಿಕ ಹಾಗೂ ಶೈಕ್ಷಣಿಕ ಗಣತಿಯ ಸಮೀಕ್ಷೆ ನಡೆಸುವ ಶಿಕ್ಷಕರಿಗೆ ಗಣತಿ ಕಾರ್ಯ ಕಿಟ್ ಅನ್ನು ವಿತರಿಸಿ ಅವರು ಮಾತನಾ ಡಿದರು. ಕಾಂಗ್ರೆಸ್ ಸರ್ಕಾರ ನುಡಿ ದಂತೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆ ನೀಡಿದ ಭರವಸೆಯಂತೆ ಒಳ ಮೀಸಲಾತಿ ಜಾರಿಗೆ ತಂದೆವು. ಈಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ…

Read More

ಶಿವಮೊಗ್ಗ : ಸೇನೆ ಹಿಂದೆ ದೇಶ ಇರುತ್ತದೆ ಅಲ್ಲಿ ಜಯ ಸಿಗಲಿದೆ. ಆಪರೇಷನ್ ಸಿಂಧೂ ರ ಯಶಸ್ವಿಯಾಗಿದ್ದೆ ಅದಕ್ಕೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮ ಶೇಖರ್ ರಾಜು ತಿಳಿಸಿದರು. ಅವರು ದಸರಾ ಕಾರ್ಯ ಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡುತ್ತಾ ೩೯ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮೊದಲ ಸೇವೆ ಲಡಾಕ್ ನಲ್ಲಿ ಆಗಿತ್ತು. ಅಲ್ಲಿ -೩೦ ಡಿಗ್ರಿ ಸೆಂಟಿ ಗ್ರೇಡ್ ನಲ್ಲಿ ಕೆಲಸ ಮಾಡಿರುವೆ. ಅದೇ ತರ +೫೦ ಡಿಗ್ರಿ ಸೆಂಟಿ ಗ್ರೇಡ್ ವಾತಾವರಣ ವನ್ನೂ ನಾನು ನೋಡಿದ್ದೇನೆ. ಇಂತಹ ಸಂಭ್ರಮದಲ್ಲಿಯೂ ಸೇನೆ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸುತ್ತದೆ ಎಂದರು. ದಸರಾ ಎಂದರೆ ಧರ್ಮದ ಜಯ, ಮಹಿಷಾಸುರ ಮರ್ದ ನಿ, ರಾಮ ರಾವಣರ ಕಥೆ ಈ ದಸರಾ ವೇಳೆ ಪ್ರಸ್ತುತಗೊಳ್ಳಲಿದೆ. ಈ ಕಥೆಗಳ ಅರ್ಥ ಇಷ್ಟೆ, ಅನ್ಯಾ ಯ ಎಷ್ಟೇ ಬಲಿಷ್ಠವಾ ದರೂ ಸತ್ಯದ ಮುಂದೆ ಸೋಲಲೇಬೇಕು ಎಂದರು. ಹಬ್ಬ…

Read More

ಶಿವಮೊಗ್ಗ : ದಸರಾ ಹಬ್ಬವನ್ನ ವಿಶಿಷ್ಟ ಹಾಗೂ ವಿನೂತನವಾಗಿ ಶಿವಮೊಗ್ಗದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ ಕಳೆದ 2 ದಶಕದಿಂದ ಆರಂಭವಾಗಿ ಈ ಬಾರಿ 11 ದಿನ ದಸರಾ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಬಾರಿ ಸೆ.22 ರಿಂದ ಅ.2 ರವರೆಗೆ ದಸರಾ ನಡೆಯಲಿದ್ದು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆಯನ್ನ ಸೆ.22 ರಂದು ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಲಾಗುವುದು.ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮೇಶ್ವರ ರಾಜು ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು. ಅಧ್ಯಕ್ಷರೆಯನ್ನ ಶಾಸಕ ಚೆನ್ನಬಸಪ್ಪ ವಹಿಸಲಿದ್ದಾರೆ ಎಂದರು.”ಶಾಸಕರಾದ ಚನ್ನಬಸಪ್ಪನವರು ಕಾರ್ಯಕ್ರಮ ವಿವರಣೆ ನೀಡುತ್ತಾ”ಸೆ.22ರ ಸೋಮವಾರ ದೇವಸ್ಥಾನ, ಕೋಟೆ ರಸ್ತೆ, ಶಿವಮೊಗ್ಗ,೯ಕ್ಕೆ ಕುವೆಂಪು ರಂಗಮಂದಿರ ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಆದ್ವಿಕಾ ನಾಯರ್, ಹಿತ ಪ್ರವೀಣ್ ಅವರಿಂದ ಚಾಲನೆ ಸಂಜೆ ೬ಕ್ಕೆ ಕುವೆಂಪು ರಂಗಮಂದಿರ iವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ ಸೆ 23ರ ಮಂಗಳವಾರಬೆಳಗ್ಗೆ 9 ನಗರದ…

Read More

ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮನೆ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಕೆತ್ತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. ವಿಜಯನಗರದ ಕೊಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ನಡೆದ ಅಪರೂಪದ ಘಟನೆ, ಇದೀಗ ಈ ಫೋಟೋ ಸಾಕಷ್ಟು ವೈರಲ್ ಆಗಿದೆ. ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ ಎಂ ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಗೃಹಲಕ್ಷ್ಮೀ ಯೋಜನೆಯ ಮೂಲಕ ಬರುವ ಹಣವನ್ನು ಜಮಾ ಮಾಡಿ, ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಕೆ ಎಂ ತಿಪ್ಪೇಸ್ವಾಮಿ ಅವರು ಕಳೆದ ಎರಡು ವರ್ಷಗಳ ಹಿಂದೆಯೇ ಮನೆಯೊಂದನ್ನು ಕಟ್ಟಿಸಿದ್ದರು. ಆದರೆ, ಹಣಕಾಸಿನ ಸಮಸ್ಯೆಯಿಂದ ಅವರು ಬಾಗಿಲನ್ನು ಮಾಡಿಸಿರಲಿಲ್ಲ. ಇದೀಗ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರಿಗೆ ಕಳೆದ ೧೫ ತಿಂಗಳಿಂದ ಬಂದಿದ್ದ ಹಣದಿಂದ ಮನೆಗೆ ಮುಂಬಾಗಿಲನ್ನು ಮಾಡಿಸಿದ್ದಾರೆ. ಕೇವಲ ಅವರು ಬಾಗಿಲನ್ನು ಮಾಡಿಸಿಲ್ಲ, ಅದರ ಮೇಲೆ ಸಿಎ ಸಿದ್ದರಾಮಯ್ಯ ಅವರ ಭಾವಚಿತ್ರನ್ನು ಕೆತ್ತಿಸಿದ್ದಾರೆ. ಮತ್ತು ಬಾಗಿಲಿನ ಮೇಲೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಎಂದು ಬರೆಸಿದ್ದಾರೆ.…

Read More

                ಶಿವಮೊಗ್ಗದಲ್ಲಿ : ಮೊದಲ ಕ್ರೇನಿಯೊಸಿ ನೋಸ್ಟೊಸಿಸ್ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿ ಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರ ವಾದ ಶಸ್ತ್ರಚಿಕಿತ್ಸೆ, ಈ ಸರ್ಜರಿ ಗೆ ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಮಕ್ಕಳ ಅರವಳಿಕೆ ತಜ್ಞ ವೈದ್ಯರಿರಬೇಕು, ಮಕ್ಕಳ ಐ.ಸಿ.ಯು ವ್ಯವಸ್ಥೆ ಇರಬೇಕು ಹಾಗಾಗಿ ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞ ವೈದ್ಯರ ತಂಡ ಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಸರ್ಜಿ ಆಸ್ಪತ್ರೆಯಲ್ಲಿ ಯಶಸ್ವಿ ಯಾಗಿ ನಡೆಸಲಾಯಿತು ಎಂದು ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ.ಹರೀಶ್ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕ್ರೇನಿಯೊಸಿನೋಸ್ಟೊಸಿಸ್ ಎಂಬ ಅಪರೂಪದ ಖಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ ೯ ತಿಂಗಳ ಮಗುವಿನ ತಲೆ ಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರಿಪಡಿಸಿದ್ದಾರೆ. ತಲೆಬುರುಡೆಯ ಮೂಳೆಗಳ ಮಧ್ಯೆ ಸೂಚರ್ಸ್ (ಬಿರುಕುಗಳು) ಇರುತ್ತದೆ, ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಆ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ…

Read More

ಮೋದಿಯ ೭೫ ವರ್ಷದ ಹುಟ್ಟುಹಬ್ವದ ಪ್ರಯುಕ್ತ ರಾಜ್ಯದಲ್ಲಿ ಎರಡು ಕಡೆ ಮ್ಯಾರಥಾನ್ಶಿವಮೊಗ್ಗ : ನರೇಂದ್ರ ಮೋದಿಯ ೭೫ ವರ್ಷದ ಹುಟ್ಟುಹಬ್ವದ ಪ್ರಯುಕ್ತ ರಾಜ್ಯದಲ್ಲಿ ಎರಡು ಕಡೆ ಮ್ಯಾರಥಾನ್ ಹಮ್ಮಿಕೊಳ್ಳಲಿದೆ. ನಮೋ ಯುವ ರನ್ ಎಂಬ ಹೆಸರಿನಲ್ಲಿ ಈ ಮ್ಯಾರಥಾನ್ ನಡೆಸಯಲಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕುಕ್ಕೆ ಪ್ರಶಾಂತ್ ತಿಳಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡುತ್ತಾ ಸೆ. ೨೧ ರಂದು ಬೆಳಿಗ್ಗೆ ಶಿವಮೂರ್ತಿ ಸರ್ಕಲ್ ನಿಂದ ೩.೫ ಕಿಮಿ ಮ್ಯಾರಥಾನ್ ಆರಂಭಿಸಿ ಶಿವಮೂರ್ತಿ ವೃತ್ತ, ಮಹಾವೀರ, ಡಿವಿಎಸ್, ಬಿಹೆಚ್ ರಸ್ತೆ, ಸಾವರ್ಕರ್ ವೃತ್ತ, ಗೋಪಿವೃತ್ತ, ಜೈಲ್ ವೃತ್ತ, ಕುವೆಂಪು ರಸ್ತೆ ಮೂಲಕ ಶಿವಮೂರ್ತಿ ವೃತ್ತಕ್ಕೆ ತಲುಪಲಿದೆ ಎಂದರು.ಇದಕ್ಕೆ ಆನ್‌ಲೈನ್ ೪೭೦೦ ಜನ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಬಂದು ಭಾಗಿವಹಿಸಿಬಹುದು. ದೇಶದಲ್ಲಿ ೧೦೦ ನಗರದಲ್ಲಿ ನಮೋ ಯುವ ರನ್ ನಡೆಯಲಿದೆ. ಆರು ವಿಭಾಗದಲ್ಲಿ ಮ್ಯಾರಥಾನ್ ನಡೆಯಲಿದೆ ಪ್ರತಿಯೊಂದು ಹಂತದಲ್ಲಿ ಮಹಿಳೆ ಮತ್ತು ಪುರಷರ ವಿಭಾಗವಿದ್ದು. ಪ್ರತಿ ವಿಭಾಗಕ್ಕೂ ಮೊದಲ ಬಹುಮಾನ ೫೦೦೦ ದ್ವಿತೀಯ…

Read More

ಶಿವಮೊಗ್ಗ: ಸೆ.೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರದಂತೆ ಒಟ್ಟು ೧,೪೬,೪೬೪ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ತಿಳಿಸಿದ್ದಾರೆ. ಪ್ರಕರಣಗಳನ್ನು ರಾಜಿ ಮಾಡಿಸಲು ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳ ನ್ಯಾಯಾಲಗಳನ್ನು ಒಳಗೊಂಡಂತೆ ಒಟ್ಟು ೩೮ ಲೋಕ್ ಅದಾಲತ್ ಪೀಠಗಳನ್ನು ರಚನೆ ಮಾಡಲಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ರವರ ಮಾರ್ಗದರ್ಶನದಲ್ಲಿ ವಿವಿಧ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು ಎಂದು ತಿಳಿಸಿದ್ದಾರೆ. ವಿವಿಧ ಸ್ವರೂಪದ ೧೪,೫೫೦ ಹಾಗೂ ವ್ಯಾಜ್ಯ ಪೂರ್ವ ೧,೧೩,೯೧೪ ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಗಿದ್ದು, ಇವುಗಳ ಪೈಕಿ ೧೬ ದಂಪತಿಗಳು ತಮ್ಮ ಪ್ರಕರಣವನ್ನು ಹಿಂಪಡೆದು ಒಟ್ಟಾಗಿ ಜೀವನ ನಡೆಸುವಂತೆ ರಾಜಿ ಮಾಡಿಕೊಂಡಿದ್ದು ವಿಶೇಷವಾಗಿದೆ.…

Read More

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ರಂಗದಸರಾ -೨೦೨೫ ರಡಿಯಲ್ಲಿ ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.ಪಾಲಿಕೆ ವ್ಯಾಪ್ತಿಯ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದ ಮನೆಯವರು ಕನಿಷ್ಠ ೫ ರಿಂದ ೧೨ ಜನ ಸೇರಿ ಅರ್ಧ ಗಂಟೆಯ ಕಿರು ನಾಟಕವನ್ನು ತಮ್ಮ ಮನೆಯಲ್ಲೇ ಅಥವಾ ಹತ್ತಿರದ ಅನುಕೂಲಕರ ಸ್ಥಳದಲ್ಲಿ ಅಭಿನಯಿಸಬೇಕು. ಇದರಲ್ಲಿ ಮೆಚ್ಚುಗೆ ಪಡೆದ ನಾಲ್ಕು ತಂಡಗಳನ್ನು ಆಯ್ಕೆ ಮಾಡಿ ನಗರದ ಕುವೆಂಪು ರಂಗಮಂದಿರದಲ್ಲಿ ಸೆ. ೩೦ ರಂದು ಪ್ರದರ್ಶಿಸಲಾಗುವುದು. ನಾಟಕದ ವಿಷಯ ವಿವಾದಾತ್ಮಕ ಹಾಗೂ ಸಮಾಜದ ಶಾಂತಿಗೆ ಭಂಗ ತರುವ ವಿಚಾರವಾಗಿರಬಾರದು. ಆಸಕ್ತರು ಸೆ. ೨೨ ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ರಂಗ ದಸರಾ ಸಮಿತಿ, ಮಹಾನಗರಪಾಲಿಕೆ, ಶಿವಮೊಗ್ಗ ಇವರ ಕಚೇರಿಯಲ್ಲಿ ಹೆಸರು ಅಥವಾ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವುದು. ನೊಂದಣಿ ಮಾಡಿದ ಮೊದಲ ೧೫ ಸಾರ್ವಜನಿಕ ಕುಟುಂಬಗಳಿಗೆ ಪ್ರೋತ್ಸಾಹಧನವಾಗಿ ರೂ. ೧೦೦೦/-ಗಳಂತೆ ರಂಗ ದಸರಾ ಸಮಿತಿಯಿಂದ ಕಾರ್ಯಕ್ರಮ ಮುಗಿದ ನಂತರ ನೀಡಲಾಗುವುದು ಎಂದು ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ…

Read More

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. ೨೨ ಮತ್ತು ೨೩ ರಂದು ಕುವೆಂಪು ರಂಗಮಂದಿರ, ಎನ್.ಇ.ಎಸ್. ಮೈದಾನ ಹಾಗೂ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸೆ. ೨೨ ರಂದು ಬೆಳಗ್ಗೆ ೯.೦೦ಕ್ಕೆ ಕುವೆಂಪು ರಂಗಮಂದಿರ ಹಾಗೂ ಎನ್.ಇ.ಎಸ್. ಮೈದಾ ನದಲ್ಲಿ ೫ ರಿಂದ ೭ನೇ ತರಗತಿ ವಿಧ್ಯಾರ್ಥಿಗಳಿಗೆ ಮತ್ತು ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ, ಶಿವಮೊಗ್ಗ ದಸರಾ ವೈವಿದ್ಯತೆ ಬಗ್ಗೆ ಪ್ರಬಂಧ ಸ್ಪರ್ಧೆ, ಛದ್ಮವೇಷ, ೧ ನಿಮಿಷದಲ್ಲಿ ಪ್ಲಾಸ್ಟಿಕ್ ಬಾಟಲಿಗೆ ಬೊಗಸೆಯಿಂದ ನೀರು ತುಂಬಿಸುವುದು, ದೇಶಭಕ್ತಿ ಗೀತೆ ಸ್ಪರ್ದೆ, ಶಾಟ್‌ಪುಟ್ ಸ್ಪರ್ದೆ ಹಾಗೂ ೧೦೦&೨೦೦ ಮೀ. ಸೆ. ೨೩ ರಂದು ಬೆಳಗ್ಗೆ ೯.೦೦ಕ್ಕೆ ಮಕ್ಕಳ ಜಾಥಾ ಹಮ್ಮಿಕೊಂಡಿದ್ದು ಡಿ.ವಿ.ಎಸ್. ಶಾಲೆಯಿಂದ ಶಿವಮೂತಿ ಸರ್ಕಲ್ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಕೃಷಿ ಇಲಾಖೆಯಿಂದ ಓ.ಟಿ.ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಮಿಳಘಟ್ಟ ಕಡೆಯಿಂದ ಅಶೋಕವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ…

Read More

ಶಿವಮೊಗ್ಗ : ರಾಷ್ಟ್ರೀಯ ಆರೋಗ್ಯ ಅಭಿ ಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆರ್ಹ ರಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ. ಎನ್‌ಪಿಎನ್‌ಸಿಸಿ ಕಾರ್ಯಕ್ರಮದಡಿ ಎಂಬಿಬಿಎಸ್ ವೈದ್ಯರ ೧೦ ಹುದ್ದೆಗಳಿಗೆ ೩ ವರ್ಷ ಕೆಲಸ ಮಾಡಿದ ಅನುಭವವಿರುವ ಎಂಬಿಬಿಎಸ್ ವಿದ್ಯಾರ್ಹತೆಯಿರಬೇಕು. ಶುಶ್ರೂಷಾಧಿಕಾರಿಯ ೧ ಹುದ್ದೆಗೆ ಜಿಎನ್‌ಎಂ ವಿದ್ಯಾರ್ಹತೆ ಮತ್ತು ೨ ವರ್ಷ ಕೆಲಸ ಮಾಡಿದ ಅನುಭವವಿರಬೇಕು. ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ತಜ್ಞವೈದ್ಯರ (ಎಂ.ಡಿ. ಇಂಟರ್ನಲ್ ಮೆಡಿಸಿನ್/ಜನರಲ್ ಮೆಡಿಸಿನ್) ೧ ಹುದ್ದೆಗೆ ಎಂಬಿ ಬಿಎಸ್-ಎಚಿಡಿ(ಇಂಟರ್ನಲ್ ಮೆಡಿಸಿನ್/ಜಿಎಂ) ವಿದ್ಯಾರ್ಹತೆ ಹಾಗೂ ೩ ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರಬೇಕು. ಆಸಕ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ ಇಲ್ಲಿ ಸೆ. ೨೨ ರಂದು ನಡೆಯುವ ನೇರ ಸಂದರ್ಶನಕ್ಕೆ ಬೆಳಗ್ಗೆ ೧೧.೦೦ಕ್ಕೆ ದಾಖಲೆಗಳ ಮೂಲ ಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ…

Read More