Author: Raghu Shetty

ಭದ್ರಾವತಿ ಉಜ್ಜನಿಪುರ ಗ್ರಾಮದ ವಾಸಿ ಪರಿಶಿಷ್ಟ ಜಾತಿಗೆ ಸೇರಿದ 33 ವರ್ಷ ವಯಸ್ಸಿನ ಮಹಿಳೆಯು ಬೇರೆ ಜಾತಿಯ ವ್ಯಕ್ತಿಯೊಂದಿಗೆ ಪ್ರೇಮ ವಿವಾಹವಾಗಿದ್ದು, ದಿನಾಂಕ: 06-02-2020 ರಂದು ಗುರೋಜಿ ರಾವ್ ಮತ್ತು ಆಶಾ ರವರು ಸದರಿ ಮಹಿಳೆಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿ, ಕೈಯಿಂದ ಮುಖಕ್ಕೆ ಹೊಡೆದು, ಬ್ಲೇಡಿನಿಂದ ಗೀರಿ ಹಲ್ಲೆ ಮಾಡಿದ್ದು, ಆಕೆಯ ಪತಿಗೆ ಮರದ ರಿಪೀಸ್ ನಿಂದ ಹಣೆಗೆ ಹೊಡೆದು ಹಲ್ಲೆ ಮಾಡಿ ಗಾಯ ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ ಗುನ್ನೆ ನಂ: 017/2020 ಕಲಂ 323, 324, 504 ಸಹಿತ 34 ಐಪಿಸಿ ಮತ್ತು ಎಸ್.ಸಿ ಮತ್ತು ಎಸ್.ಟಿ ಪಿ.ಎ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಸುಧಾಕರ್ ನಾಯ್ಕ್ ಡಿ.ವೈ.ಎಸ್.ಪಿ ಭದ್ರಾವತಿ ಉಪ ವಿಭಾಗ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.…

Read More

ಶಿವಮೊಗ್ಗ : ಪ್ರೀತ್ಸೆ ಅಂತ ಹೇಳಿ.. ಚಾನೆಲ್‌ಗೆ ತಳ್ಳಿ ಬಿಟ್ಟೆನಾ…! ಹೌದು ಅಂತಹ ಒಂದು ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ. ಪ್ರೀತ್ಸೆ… ಪ್ರೀತ್ಸೆ ಅಂತ ದಿನ ನಿತ್ಯ ಜೀವ ತಿನ್ನುತ್ತಿದ್ದ, ಮದುವೆ ಅಗು ಅಂತ ಇದ್ದ, ಆದರೆ ಹುಡುಗಿ ಇಷ್ಟವಿಲ್ಲದಿದ್ದರೂ ನಿನ್ನ ಕೆಲವು ಪೋಟೋಗಳು ನನ್ನ ಬಳಿಯಿದೆ ಎಂದು ಹೆದರಿಸುತ್ತಿದ್ದ ಅದನ್ನೇ ಬಂಡಾಳ ಮಾಡಿಕೊಂಡು ಕೊಲೆ ಮಾಡಿಬಿಟ್ಟ ಎಂದು ತಾಯಿ ಭದ್ರಾವತಿ ಠಾಣೆ ದೂರು ದಾಖಲಿಸಿದ್ದಾರೆ. ಚಾನಲ್‌ನಲ್ಲಿ ನಾಪತ್ತೆಯಾಗಿದ್ದ ಯುವತಿ ಮಂಗಳವಾರ ರಾತ್ರಿ ಶವವಾಗಿ ಪತ್ತೆಯಾದ ಬೆನ್ನಲ್ಲೇ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವಕ ಹಾಗು ಯುವಕನ ತಂದೆಯ ವಿರುದ್ಧ ದೂರು ದಾಖಲಾಗಿದ್ದು ಯುವಕನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಬಂಧಿಸಲಾಗಿದೆ. ಪ್ರೀತಿ ಪ್ರೇಮ ಎಂದು ಈ ಹಿಂದೆ ಸ್ಥಳೀಯ ಮಾಹಿತಿಯಿಂದ ಸುದ್ದಿ ಮಾಡಲಾಗಿತ್ತು ಆದರೆ ಎಫ್‌ಐಆರ್ ನಲ್ಲಿ ಯುವತಿ ಮಹಾಲಕ್ಷ್ಮಿ ಯಾನೆ ಸ್ವಾತಿಯನ್ನ ಪ್ರೀತಿಸುವಂತೆ ಯುವಕ ಸೂರ್ಯ ಬೆನ್ನುಬಿದ್ದು ಕಿರುಕುಳ ನೀಡಿದ್ದರ ಪರಿಣಮದಿಂದಾಗಿ ಯುವತಿಯ ಜೀವ ಹಾರಿ ಹೋಗಿದೆ.…

Read More

ಸೆ.೨೫ ರಂದು ರೈತ ದಸರಾ ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾ ೨೦೨೫ ರ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಸೆ.೨೫ ರಂದು ನಗರದ ಕುವೆಂಪು ರಂಗಮಂದಿರ ರೈತ ದಸರಾ ಕಾರ್ಯಕ್ರಮವನ್ನು ಆಯೇಜಿಸಲಾಗಿದೆ.ಬೆಳಿಗ್ಗೆ ೯ ಗಂಟೆಗೆ ಬಿ.ಹೆಚ್ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಜಾಥ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಶ್ರೀಮತಿ ಕಮಲಮ್ಮ ಹಾಗೂ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಈರಪ್ಪ ನಾಯ್ಕ ಉದ್ಘಾಟನೆ ನೆರವೇರಿಸುವರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಗೌರವ ಉಪಸ್ಥಿತಿರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವರು. ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಪ್ರಾಣಿಗಳ ವಿನಿಮಯ ಕಾರ್ಯಕ್ರಮ ಶಿವಮೊಗ್ಗ :…

Read More

ಶಿವಮೊಗ್ಗ : ಪದವೀಧರರಾಗಿದ್ದು, ಬ್ಯಾಂಕಿಂಗ್ ಅಥವಾ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆ ಪಡೆಯಲು ಬಯಸುವವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು KSOU ನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 30 ದಿನಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ತರಬೇತಿಯು ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಾದ ಎಲ್ಲಾ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ. ಯಾವುದೇ ಪದವಿ ಪೂರ್ಣಗೊಳಿಸಿದ ಆಸಕ್ತ ಅಭ್ಯರ್ಥಿಗಳು ಈ ತರಬೇತಿಗೆ ಸೆ. 30 ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 821-2515944/9964760090 ನ ನ್ನು ಸಂಪರ್ಕಿಸುವುದು.

Read More

ಶಿವಮೊಗ್ಗ : ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ತಗುಲಿದೆ. ಇಂತಹ ಕಳಂಕಗಳಿಗೆ ಚಿತ್ರರಂಗ ಹೊರಬಂದು ಮನೋರಂಜನೆಯ ಜೊತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಹೇಳಿದರು. ಅವರು ಶಿವಮೊಗ್ಗ ಮಹಾ ನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರ ಸಮಾಜ ಇವರುಗಳ ಸಂಯು ಕ್ತಾಶ್ರಯದಲ್ಲಿ ನಗರದ ಡಾ|| ಬಿ.ಆರ್.ಅಂಬೇಡ್ಕರ್ಭವನದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಚಿತ್ರರಂಗದಲ್ಲಿ ಇಂದು ಸಾಕಷ್ಟು ಸಮಸ್ಯೆ-ಸವಾಲುಗಳ ನಡುವೆಯೂ ಹಲವು ತಜ್ಞರ, ಪರಿಣಿತರು ಸಕ್ರಿಯವಾಗಿ ಕಾರ್ಯ ನಿರ್ವಹಿ ಸುತ್ತಿ ರುವುದರ ಕಾರಣದಿಂದಾಗಿ ರಾಜ್ಯದಲ್ಲಿ ಚಿತ್ರರಂಗ, ಚಿತ್ರಮಂದಿರಗಳು ಜೀವಂತವಾಗಿವೆ. ಇಲ್ಲದಿದ್ದಲ್ಲಿ ಪಳಿಯುಳಿಕೆಗಳಾಗಿ ನೋಡಬೇ ಕಾಗಿತ್ತು. ಇಂತಹ ಅನೇಕ ಕಾರಣಗಳಿಂದಾಗಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಚಿತ್ರರಂಗಕ್ಕೆ ಸಂಬಂಧಿಸಿದ ಯಂತ್ರೋ ಪಕರಣಗಳು ರಾಜ್ಯದಲ್ಲಿಯೇ ನೋಡುವಂತಾಗಿದೆ. ಇದಕ್ಕೂ ಮುನ್ನ ರಾಜ್ಯದ ಚಲನಚಿತ್ರದ…

Read More

ಶಿವಮೊಗ್ಗ : ಶಿವಮೊಗ್ಗ ದಸರಾ -೨೦೨೫ರ ಚಲನಚಿತ್ರ ದಸರಾವನ್ನು ಸೆ. ೨೪ ರಂದು ಬೆಳಗ್ಗೆ ೯.೩೦ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಶರಣ್ ಹಾಗೂ ನಟಿ ಕು. ಕಾರಣ್ಯರಾಮ್ ಪಾಲ್ಗೊಳ್ಳಲಿದ್ದಾರೆ. ಹಾಗೂ ಬೆ. ೧೧.೩೦ಕ್ಕೆ ಚಲನಚಿತ್ರ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರ ರಸಗ್ರಹಣ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಸಾಹಿತಿ ಸಾಯಿ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ : ಮಹಾನಗರ ಪಾಲಿಕೆ ವತಿಯಿಂದ ಸೆ.೨೪ ಬುಧವಾರದಂದು ಪರಿಸರ ದಸರಾವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲಿಕೆ ಯೊಂದಿಗೆ ಶಿವಮೊಗ್ಗ ನಗರದ ಪರಿಸರಾಸಕ್ತ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಲಿದ್ದಾರೆ. ಸೈಕಲ್ ಜಾಥಾ ಹಾಗೂ ಹಸಿರೀಕಣ ಕಾರ್ಯದ ಮೂಲಕ ಪರಿಸರ ದಸರಾ-೨೦೨೫ನ್ನು ಮಾದರಿ ಹಾಗೂ ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವ ಪಾಲಿಕೆಯ ನಿರ್ಧಾರವನ್ನು ನಗರದ ವಿವಿಧ ಸಂಘ…

Read More

ಶಿವಮೊಗ್ಗ : ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನ ವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇ ಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಅವರು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ವಿದ್ಯಾಲಯದ ೧೩ ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾ ಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿ ಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕ ವಾಗುತ್ತದೆ ಎಂದು ಹೇಳಿದರು. ರೈತರು ಪ್ರಗತಿಯಾದಾಗ ಮಾತ್ರ ಈ…

Read More

ಶಿವಮೊಗ್ಗ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷಯನ್ನು ಸೆ.೨೨ ರಿಂದ ಅ.೭ ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಮನೆ-ಮನೆಗೆ ಬೇಟಿ ಸಮೀಕ್ಷಯನ್ನು ಹಮ್ಮಿಕೊಂಡಿ ರುವುದು ಸಂತಸ ವಿಚಾರ ಹಾಗೂ ಈ ಸಮೀಕ್ಷೆ ಅದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮ ಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದನೆಗಳು ಎಂದು ಉಪ್ಪಾ ಸಮಾಜದ ಜಿಲ್ಲಾಧ್ಯ ಕ್ಷರಾ ಎಸ್.ಟಿ.ಹಾಲಪ್ಪ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಸಮೀಕ್ಷೆಯಿಂದ ಹಿಂದೂಳಿದ ಜಾತಿಗಳಿಗೆ ಸಿಗಬೇ ಕಾದ ಸರ್ಕಾರವ ಸೌವಲತ್ತುಗಳು ಸರಿಯಾಗಿ ದೊರಕಲು ಸಹಕಾರಿ ಯಾಗಿಲಿದೆ, ಶೈಕ್ಷಣಿಕ, ಆರ್ಥಿಕ ಔಧ್ಯೋಗಿಕ, ರಾಜಕೀಯ ಬೆಳವಣಿಗೆ ಇದು ಸಹಕಾರಿಯಾಗಿಲಿದೆ ಎಂದರು. ನಮ್ಮ ಉಪ್ಪಾರ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಉಪ್ಪಾರ, ಉಪಜಾತಿ ಕಾಲಂನಲ್ಲಿ ಉಪ್ಪಾರ, ಕೋಡ್ ಸಂಖ್ಯೆ ಎ-೧೪೬೫ ಎಂದು ನಮೂದಿಸಿ ಎಂದು ಮನವಿ ಮಾಡಿದರು. ಇದರಿಂದ ನಮ್ಮ ಜಾತಿಗೆ ಸಿಗಬೇಕಾದ ಮಾನ್ಯತೆಗಳು ಹಾಗೂ ಸೌವಲತ್ತು ಸರಿಯಾಗಿ ಸಿಗಲು ಸಹಕಾರಿಯಾಗಲಿದೆ ಎಂದರು. ನಮ್ಮ ಸಮುದಾಯ ಶೈಕ್ಷಣಿಕ…

Read More

ಶಿವಮೊಗ್ಗ : ಈ ಬಾರಿ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿ ರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟ-ವಿಭಿನ್ನ, ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಂಗದಸರಾ ಕಾರ್ಯಕ್ರಮದಲ್ಲಿ ಒಟ್ಟು ೩೦ ನಾಟಕ ತಂಡಗಳು ೪೧ ಪ್ರದರ್ಶನಗಳನ್ನು ಆಯೋಜಿಸಿವೆ. ಜೊತೆಗೆ ರಂಗಗೀ ತೆ ಹಾಗೂ ಉಪನ್ಯಾಸ ಸೇರಿ ೫೨ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು ೩೦೦ ಕಲಾವಿದರು ಈ ನಾಟಕ ಗಳಲ್ಲಿ ಅಭಿನಯಿಸಲಿದ್ದಾರೆ ಎಂದರು. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳು ಇದರಲ್ಲಿ ಭಾಗವಹಿಸುತ್ತಿವೆ. ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವ ರಿಸಲಾಗಿ ದೆ. ೧೫ ಕುಟುಂಬಗಳ ಮನೆಗಳ ಬಳಿಯೇ ನಾಟಕ ಪ್ರದರ್ಶನವಿ ರುತ್ತದೆ. ಇವುಗಳಲ್ಲಿ ಆಯ್ಕೆಮಾಡಿದ ನಾಲ್ಕು ನಾಟಕಗಳನ್ನು ಕುಟುಂಬ ರಂಗಮಂದಿರದಲ್ಲಿ ಪ್ರದರ್ಶಿಸಲಾ ಗುವುದು. ಶಾಲಾ ಶಿಕ್ಷಕರಿಗೆ ಪ್ರಸಾದನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಕರ್ತವ್ಯರಂಗ ಎಂಬ ನೂತನ ಕಾರ್ಯಕ್ರಮವನ್ನು ಈ ಬಾರಿ ಸೇರಿಸಲಾಗಿದೆ. ವಾಹನ ಮಾರುಕಟ್ಟೆ, ರಿಪೇರಿ…

Read More

ಮಲೆನಾಡಿನ ಜನರ ಆರಾಧ್ಯ ದೈವ ಶ್ರೀ ಸಿಗಂದೂರೇಶ್ವರಿ ಅಮ್ಮನವರ ಕೃಪೆಯಿಂದ ನಾಡಿನೆಲ್ಲೆಡೆ ಸಕಾಲದಲ್ಲಿ ಮಳೆಯಾಗಿದ್ದು, ಕೆರೆ ಕಟ್ಟೆ ಕಾಲುವೆಗಳು ಭರ್ತಿಯಾಗಿವೆ ಮಾತ್ರವಲ್ಲ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ. ಇದರಿಂದಾಗಿ ಸಹಜವಾಗಿ ಸಂತಸ ಮೂಡಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಅವರು ಹೇಳಿದರು. ಅವರು ಇಂದು ಸಾಗರ ತಾಲೂಕಿನ ಸಿಗಂದೂರಿನ ಶ್ರೀ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಸಿಗಂದೂರು ದಸರಾ ಸಂಭ್ರಮ 25 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶ್ರೀಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ನೆರವು ಮತ್ತು ಸಹಕಾರವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿವೆ. ಎಂದಿನಂತೆ ಮುಂದೆಯೂ ಶ್ರೀ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ನೆರವು ನೀಡಲಾಗುವುದು ಎಂದರು. ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಹಿತ ಕಾಯಲು ಸರ್ಕಾರ ಹಿಂದೆ ಹೇಳಿದ…

Read More