Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026

ಗಾಳಿ-ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಗೆ ರವಾನೆ

July 25, 2026

ಕೃಷಿ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ

July 24, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಉದ್ಯೋಗ ಮಾಹಿತಿ»ಕೃಷಿ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ
ಉದ್ಯೋಗ ಮಾಹಿತಿ

ಕೃಷಿ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ

Raghu ShettyBy Raghu ShettyJuly 24, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
ಶಿವಮೊಗ್ಗ,  : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್ ನಲ್ಲಿ ಖಾಲಿ ಉಳಿದಿರುವ 31 ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಪ್ಲೊಮಾ (ಕೃಷಿ) ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುವುದು. ಪ್ರವೇಶ ಅರ್ಹತೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್ ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಠ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).ದಿನಾಂಕ: 06-08-2026 ರಂದು ಅಭ್ಯರ್ಥಿಗಳ ವಯಸ್ಸು 19 ವರ್ಷಗಳನ್ನು ಮೀರಿರಬಾರದು. ರೈತರ ಹಾಗೂ ಕೃಷಿಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ. ಅಧಿಸೂಚನೆ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವೆಬ್ಸೈಟ್: www.uahs.edu.in  ನಲ್ಲಿ ದಿನಾಂಕ: 06-08-2026 ರೊಳಗೆ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಗಳನ್ನು ಮತ್ತು ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ, ದಿನಾಂಕ: 06-08-2026 ರೊಳಗೆ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ಕಳುಹಿಸಿಕೊಡಬೇಕು. ದಿನಾಂಕ: 06-08-2026 ರ ನಂತರ ಡಿ.ಡಿ. ಯನ್ನು ಪಡೆದು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ರೂ. 500/-, ಪ.ಜಾ./ಪ.ಪಂ./ಪ್ರವರ್ಗ-1ರವರಿಗೆ ರೂ. 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳ (Nationalized Bank) ಡಿ.ಡಿ. ಯನ್ನು Comptroller, KSNUAHS, Shivamogga –577 412 ಇವರ ಹೆಸರಿನಲ್ಲಿ ಪಡೆದು ಎಲ್ಲಾ ಅಗತ್ಯ ಅಡಕಗಳೊಂದಿಗೆ ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ದಿನಾಂಕ: 06-08-2026 ರೊಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. ದಿನಾಂಕ: 06-08-2026 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರವೇಶ ಮತ್ತು ಆಯ್ಕೆ ವಿಧಾನ: ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್‌ಸೈಟ್ ಮುಖಾಂತರ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ

July 2, 2026

ಜೂನ್ 16: ಉದ್ಯೋಗ ನೇರ ಸಂದರ್ಶನ

June 12, 2026

ಸಿಸಿಟಿವಿ ಅಳವಡಿಕೆ ಮತ್ತು ಸರ್ವಿಸಿಂಗ್ ತರಬೇತಿ : ಅರ್ಜಿ ಆಹ್ವಾನ

November 24, 2025
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,324 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,271 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026417 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026385 Views
Don't Miss
ನಮ್ಮ ಶಿವಮೊಗ್ಗ

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

By Raghu ShettyJuly 27, 20260

“ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ಲಾಠಿಚಾರ್ಜ್‌ಗೆ ಅಮಿತ್ ಶಾ ಹೊಣೆ,…

ಗಾಳಿ-ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಗೆ ರವಾನೆ

July 25, 2026

ಕೃಷಿ ಡಿಪ್ಲೊಮಾ ಕೋರ್ಸ್ : ಅರ್ಜಿ ಆಹ್ವಾನ

July 24, 2026

ಪಂಪ್‌ಸೆಟ್ ಕೇಬಲ್ ಕಳ್ಳತನದಿಂದ ರೈತರು ಕಂಗಾಲು; ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸುವಂತೆ ಆಗ್ರಹ

July 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views

ರಂಗದಸರಾ; ಕುಟುಂಬ ರಂಗ ಕಾರ್ಯಕ್ರಮ

September 18, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.