Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»Home»ಸರ್ಕಾರದ ಖಾಸಗೀಕರಣ ನೀತಿಗೆ ರೈತರ ಆಕ್ರೋಶ
Home

ಸರ್ಕಾರದ ಖಾಸಗೀಕರಣ ನೀತಿಗೆ ರೈತರ ಆಕ್ರೋಶ

outrage-over-governments-priva
Raghu ShettyBy Raghu ShettyJune 6, 2026Updated:June 6, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿಕಾರಿಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರಂತರವಾಗಿ ರೈತರ ವಿರುದ್ದ ಗದಾಪ್ರಹಾರದಲ್ಲಿ ನಿರತವಾಗಿದ್ದು, ವಿದ್ಯುತ್‌ ಖಾಸಗೀಕರಣ,ಸೀಮಿತ ಗೊಬ್ಬರ ವಿತರಣೆ,ಸಾಗುವಳಿದಾರರ ಒಕ್ಕಲೆಬ್ಬಿಸುವಿಕೆ ಮೂಲಕ ರೈತ ನೆಮ್ಮದಿಯಿಂದ ಬದುಕಲು ಸಾದ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾ.ರೈತ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅತಿವೃಷ್ಠಿ ಅನಾವೃಷ್ಟಿ ಜತೆಗೆ ರೈತರ ಉತ್ಪನ್ನಗಳ ಬೆಲೆ ಕುಸಿತದಿಂದ ಪ್ರತಿ ವರ್ಷ ರೈತರ ಬದುಕು ತೀವ್ರ ಸಂಕಷ್ಟದಲ್ಲಿದ್ದು ಇದರೊಂದಿಗೆ ಪದೇಪದೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ನೀತಿಯಿಂದ ರೈತರು ಕಂಗೆಟ್ಟಿದ್ದಾರೆ ಎಂದು ತಿಳಿಸಿದ ಅವರು ಇದೀಗ ವಿದ್ಯುತ್ ಖಾಸಗೀಕರಣದ ಸಂಚು ರೂಪಿಸಿರುವ ರಾಜ್ಯ ಸರ್ಕಾರ  ರೈತರಿಗೆ ದ್ರೋಹ ಬಗೆಯುವ ಸಿದ್ದತೆಯಲ್ಲಿದೆ.ಪ್ರತಿ ಬೋರ್ವೆಲ್‌ ಗೆ ಮೀಟರ್ ಅಳವಡಿಸುವ ಕುತಂತ್ರ ಸರ್ಕಾರದಿಂದ ನಡೆಯುತ್ತಿದೆ ಸರ್ಕಾರದ ನೀತಿಯನ್ನು ರೈತರು ಒಗ್ಗಟ್ಟಿನಿಂದ ಖಂಡಿಸಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ನೂತನ ಎಫ್ ಐಡಿ ನೀತಿಯು ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ತಂತ್ರದ ಭಾಗವಾಗಿದೆ ಇದರಿಂದಾಗಿ ಎಕರೆಗೆ ಒಂದು ಗೊಬ್ಬರ ಚೀಲದಿಂದ ಹೆಚ್ಚಿರುವ ಸಾಗುವಳಿದಾರ ರೈತರು ಬಿತ್ತನೆ ಸಂದರ್ಭದಲ್ಲಿ  ಆತ್ಮಹತ್ಯೆಯ ದಾರಿಯನ್ನ ಹಿಡಿಯಬೇಕಾಗುತ್ತದೆ ಎಂದು ದೂರಿದ ಅವರು ಈ ಕೂಡಲೇ ಎಫ್‌ ಐ ಡಿ ನೀತಿ ವಾಪಾಸ್‌ ಪಡೆದು ಎಲ್ಲ ರೈತರಿಗೂ ಅಗತ್ಯ ಗೊಬ್ಬರ ವಿತರಿಸುವ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಮತ್ತು ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳ  ದೌರ್ಜನ್ಯ ವಿಪರೀತವಾಗಿದ್ದು,ಸಾಗುವಳಿಗೆ ಅವಕಾಶ ನೀಡದೆ ಸತಾಯಿಸುತ್ತಿದ್ದಾರೆ ಎಂದ ಅವರು ಡೀಮ್ಡ್ ಫಾರೆಸ್ಟ್ ನೀತಿಯನ್ನು ಕೈಬಿಟ್ಟು ಕೂಡಲೇ ಸಾಗುವಳಿದಾರರಿಗೆ ಹಕ್ಕು ಪತ್ರವನ್ನು ವಿತರಿಸುವಂತೆ ಒತ್ತಾಯಿಸಿದರು.ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚಾಗಿದ್ದು ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಜೀವನವನ್ನು ಸಮರ್ಪಣೆ ಮಾಡಿದ್ದಾರೆ.ಸಂತ್ರಸ್ಥರಿಗೆ ಇದುವರೆಗೂ ಹಕ್ಕು ಪತ್ರ ವಿತರಿಸದೆ ಭೂಮಿಯನ್ನು ತೋರಿಸದೆ ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದು,ರಾಜಕಾರಣಿಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಸ್ಥಳೀಯ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಸಬ್ಸಿಡಿ ದರದಲ್ಲಿ ವಿತರಿಸುವ ಕೃಷಿ ಪರಿಕರ ಸಮರ್ಪಕವಾಗಿ ಅರ್ಹ ರೈತರಿಗೆ ನೀಡದೆ ತಾರತಮ್ಯ ಎಸಗಲಾಗುತ್ತಿದೆ.ದೂರದ ರೈತರಿಗೆ ಸಬ್ಸಿಡಿ ಬಗ್ಗೆ ವಿಚಾರ ವಿಷಯ ತಲುಪುವ ಮುಂಚೆ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಖಾಲಿಯಾಗಿದೆ ಎಂಬ ನಾಮಫಲಕ ಅಳವಡಿಸಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಕೈಬಿಟ್ಟು ಕೂಡಲೇ ರೈತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ ಅವರು ತಪ್ಪಿದಲ್ಲಿ ರೈತರು ಸಂಘಟಿತರಾಗಿ ಬೀದಿಗಿಳಿದು ಹೋರಾಟ ಹಮ್ಮಿಕೊಳ್ಳುವುದು ನಿಶ್ಟಿತ ಎಂದು ತಿಳಿಸಿದರು.

ಆರಂಭದಲ್ಲಿ ಶಿವಮೊಗ್ಗ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಹಾಕಲಾಯಿತು.ನಂತರದಲ್ಲಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಬದಲ್ಲಿ ರೈತ ಸಂಘದ ತಾ.ಅಧ್ಯಕ್ಷ ಪ್ರಮೋದ್‌ ಕುಮಾರ್,ರಾಜು,ಉಪಾಧ್ಯಕ್ಷ ಸಂತೋಷ್‌ ಈಸೂರು,ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಪುಟ್ಟಣ್ಣಗೌಡ,ಬೇಗೂರು ಶಿವಪ್ಪ,ಚಂದ್ರಶೇಖರಪ್ಪ,ಗುರುಮೂರ್ತ್ಯಪ್ಪ,ಶಿವಮೂರ್ತ್ಯಪ್ಪ, ಹನುಮಂತಪ್ಪ,ಸುಬಾಷಚಂದ್ರ ಮತ್ತಿತರರು ಹಾಜರಿದ್ದರು.

Shivamogga
Share. Facebook Twitter Pinterest LinkedIn Tumblr Email
Raghu Shetty
  • Website
  • Facebook
  • Instagram

Related Posts

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,324 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,274 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026417 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026385 Views
Don't Miss
Home

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

By Raghu ShettyJuly 28, 20260

ಶಿವಮೊಗ್ಗ, : ವಿದ್ಯಾರ್ಥಿಗಳ ಬದುಕನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದಂತಹ ಸಾಮಾಜಿಕ ಪಿಡುಗನ್ನು ತಡೆಯಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಪರಿಣಾಮಕಾರಿ…

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026

ಗಾಳಿ-ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಗೆ ರವಾನೆ

July 25, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views

ರಂಗದಸರಾ; ಕುಟುಂಬ ರಂಗ ಕಾರ್ಯಕ್ರಮ

September 18, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.