ಶಿವಮೊಗ್ಗ : ಕಲಿಕೆ, ನವೀನತೆ ಮತ್ತು ಸೃಜನಶೀಲ ಚಿಂತನೆಯೇ ಯಶಸ್ವಿ ಇಂಜಿನಿಯರ್‌ನ ನಿಜವಾದ ಗುರುತು ಎಂದು ಎಸ್.ಎನ್. ನಾಗರಾಜ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜುದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಿಸ್ಟಿರಿಯೊ ೬.೦’ ರಾಜ್ಯಮಟ್ಟದ ತಾಂತ್ರಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಎಂದರೆ ಕೇವಲ ಸರ್ಕ್ಯೂಟ್‌ಗಳು, ಮೈಕ್ರೊಪ್ರೊಸೆಸರ್‌ಗಳು ಅಥವಾ ಯಂತ್ರಗಳ ಅಧ್ಯಯ ನವಲ್ಲ. ಅದು ಕಾಣದ ಬುದ್ಧಿವಂತಿಕೆಯನ್ನು ಅರಿಯುವ ಪ್ರಯಾಣವಾಗಿದೆ. ಒಂದು ಸಣ್ಣ ಮೈಕ್ರೋಪ್ರೊಸೆಸರ್ ಕ್ಷಣಾರ್ಧದಲ್ಲಿ ಕೋಟ್ಯಾಂತರ ಕಾರ್ಯಗಳನ್ನು ನಿರ್ವಹಿ ಸುತ್ತದೆ. ಕಣ್ಣಿಗೆ ಕಾಣದ ಆ ಎಲೆಕ್ಟ್ರಾನಿಕ್ ವ್ಯವಸ್ಥೆಯೇ ಇಂದಿನ ಜಗತ್ತನ್ನು ಚಲಾಯಿಸುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಾಗ ಕೇವಲ ಯಂತ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲದೆ, ಅದರ ಹಿಂದೆ ಅಡಗಿರುವ ವಿಜ್ಞಾನ ಮತ್ತು ತಾಂತ್ರಿಕತೆಯನ್ನು ಅರ್ಥೈಸಿಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾರ್ಕ್ ಕೋಡಿಂಗ್‌ನಂತಹ ಸವಾಲುಗಳು ಮನಸ್ಸಿನ ಸ್ಪಷ್ಟತೆ, ತಾರ್ಕಿಕ ಚಿಂತನೆ ಹಾಗೂ ಕೋಡಿಂಗ್ ಭಾಷೆಯ ಮೇಲಿನ ಹಿಡಿತದ ಮೇಲೆ ಅವಲಂಬಿತ ವಾಗಿರುತ್ತವೆ. ಒಂದು ಸೆಮಿಕೋಲನ್ ತಪ್ಪಿದರೂ ಸಂಪೂರ್ಣ ವ್ಯವಸ್ಥೆಯೇ ಸ್ಥಗಿತಗೊಳ್ಳಬಹುದು. ಅಷ್ಟು ಸೂಕ್ಷ್ಮವಾದ ಕ್ಷೇತ್ರ ಇದಾಗಿದ್ದು, ಇದೇ ನಿಜವಾದ ತಾಂತ್ರಿಕ ಸಾಮರ್ಥ್ಯದ ಪರೀಕ್ಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಡಾ. ಪ್ರೇಮಾ ಕೆ.ಎನ್., ರೂಪಾ ಬಿ.ಎಸ್., ಸ್ಮೀತಾ ಎಸ್.ಎಂ., ವಿದ್ಯಾರ್ಥಿ ಸಂಯೋಜಕರಾದ ಅನಿರುದ್, ಪ್ರಾರ್ಥನ, ಸ್ಪೂರ್ತಿ, ವಿಕಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ೧೬ ಇಂಜಿನಿಯರಿಂಗ್ ಕಾಲೇಜುಗಳ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು. ಹಾಬಿ ಪ್ರಾಜೆಕ್ಟ್, ರಿಕ್ರೂಟ್ ಎಕ್ಸ್, ಬಗ್ ಬೌಂಟಿ, ಇಂಡಸ್ಟ್ರಿ ೪.೦, ಪೇಪರ್ ಪ್ರೆಸೆಂಟೇಶನ್, ಹ್ಯಾಕ್-ಎಕ್ಸ್ ಹಾಗೂ ಎಂಜಿನಿಯರಿಂಗ್ ಎ ವೇ ಔಟ್ ಮೊದಲಾದ ಸ್ಪರ್ಧೆಗಳು ಗಮನ ಸೆಳೆದವು.ಇಂದಿನ ಉದ್ಯೋಗ ನೀಡುವ ಸಂಸ್ಥೆಗಳು ಕೇವಲ ಅಂಕಪಟ್ಟಿಯನ್ನು ನೋಡುವುದಿಲ್ಲ. ಹೊಸ ಪರಿಹಾರಗಳನ್ನು ಆವಿಷ್ಕರಿಸುವ ಮನೋಭಾವ, ನವೀನ ಆಲೋಚನೆ ರೂಪಿಸುವ ಪ್ರತಿಭೆ ಹಾಗೂ ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವ ದೃಷ್ಟಿಕೋನವನ್ನು ಗಮನಿಸುತ್ತವೆ.
: ಸುನಿಲ್ ಕುಮಾರ್ ಕೆ.ಎಸ್. ಎಲ್ಫಾನ್ಜ್ ಟೆಕ್ನಾಲಜಿ ಆಡಳಿತ ಮುಖ್ಯಸ್ಥ.ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕೌಶಲ್ಯ ಮತ್ತು ನವೀನತೆಯತ್ತ ಚಿತ್ತ ಹರಿಸುತ್ತಿದೆ. ಕಾಲೇಜುಗಳು ಕೇವಲ ತರಗತಿ ಕೊಠಡಿಗಳಾಗದೆ, ಭವಿಷ್ಯದ ಆವಿಷ್ಕಾರಗಳನ್ನು ರೂಪಿಸುವ ಕೇಂದ್ರಗಳಾಗಬೇಕು
: ವೈ. ವಿಜಯಕುಮಾರ್, ಪ್ರಾಂಶುಪಾಲ
ಮೊಬೈಲ್ ಆಪ್ ಮೂಲಕ ದೀಪ ಬೆಳಗಿಸಿದ ಅತಿಥಿಗಳು :
ಕಾರ್ಯಕ್ರಮ ಉದ್ಘಾಟನೆ ವೇಳೆ ಎಲೆಕ್ಟ್ರಾನಿಕ್ಸ್ ಸರ್ಕ್ಯೂಟ್ ಆಧಾರಿತವಾಗಿ ವಿನ್ಯಾಸಗೊಳಿಸಿದ್ದ ದೀಪಸ್ತಂಭವನ್ನು ಅತಿಥಿಗಳು ಮೊಬೈಲ್ ಆಪ್ ಮೂಲಕ ಬಟನ್ ಒತ್ತಿ ಬೆಳಗಿಸಿದರು. ಕರ್ಪೂರ ಮತ್ತು ಬತ್ತಿಯ ಸಂಯೋಜನೆಯೊಂದಿಗೆ ತಂತ್ರಜ್ಞಾನದ ಮೂಲಕ ಪ್ರಜ್ವಲಿಸಿದ ದೀಪ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಯಿತು.
Subscribe to Updates
Get the latest creative news from FooBar about art, design and business.
ಸೃಜನಶೀಲತೆ ಮತ್ತು ನವೀನ ಚಿಂತನೆಯಿಂದಲೇ ಯಶಸ್ಸು
success-comes-from-creativity-and-innovative-thinking
