Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»ಆಗುಂಬೆ ಘಾಟ್ : ಡಿಪಿಆರ್ ಹಾಗೂ ಸುರಂಗ ಮಾರ್ಗ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಟೆಂಡರ್
ಪ್ರಮುಖ ಸುದ್ದಿ

ಆಗುಂಬೆ ಘಾಟ್ : ಡಿಪಿಆರ್ ಹಾಗೂ ಸುರಂಗ ಮಾರ್ಗ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಟೆಂಡರ್

Tender for DPR and tunnel feasibility study
Raghu ShettyBy Raghu ShettyFebruary 10, 2026No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನವದೆಹಲಿ, :ಪರಿಸರ ಸೂಕ್ಷ್ಮ ಹಾಗೂ ಅಪಘಾತಗಳಿಗೆ ಹೆಸರಾದ ಆಗುಂಬೆ ಘಾಟ್ ರಸ್ತೆಯ ಮೇಲ್ದರ್ಜೆಗೇರಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-169ಎ ವ್ಯಾಪ್ತಿಯ ಆಗುಂಬೆ ಘಾಟ್ ರಸ್ತೆ (ಕಿ.ಮೀ. 30.75 ರಿಂದ 51.60) ಅಭಿವೃದ್ಧಿಗಾಗಿ ಕಾರ್ಯಸಾಧ್ಯತಾ ಅಧ್ಯಯನ, ಸಮೀಕ್ಷೆ, ಭೂ ಯೋಜನೆ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೆಂಡರ್ ಆಹ್ವಾನಿಸಿದೆ.

ಈ ಯೋಜನೆಯಡಿ ರಸ್ತೆನ್ನು ಎರಡು ಲೇನ್‌ಗಳಿಗೆ ವಿಸ್ತರಿಸುವುದರ ಜೊತೆಗೆ ಎರಡೂ ಬದಿ ಪಾದಚಾರಿ ಮಾರ್ಗ ಕಲ್ಪಿಸುವ ಉದ್ದೇಶವಿದೆ. ಗಮನಾರ್ಹವಾಗಿ, ಡಿಪಿಆರ್ ವ್ಯಾಪ್ತಿಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಅಂಶವೂ ಸೇರಿದ್ದು, ಸುರಂಗ ವಿನ್ಯಾಸ ತಜ್ಞರು ಹಾಗೂ ಹಿರಿಯ ಭೂ-ಭೌತಶಾಸ್ತ್ರಜ್ಞರ ಸೇವೆ ಪಡೆಯಲು ಹಾಗೂ ಭೂ-ತಾಂತ್ರಿಕ ತನಿಖೆ ನಡೆಸಲು ಪ್ರತ್ಯೇಕ ಬಜೆಟ್ ವ್ಯವಸ್ಥೆ ಮಾಡಲಾಗಿದೆ. ಈ ಡಿಪಿಆರ್ ಅನ್ನು ಆರು ತಿಂಗಳೊಳಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 2.33 ಕೋಟಿ ರೂ. ಮೀಸಲಿಡಲಾಗಿದೆ.

ಸಂಸದ ಬಿ.ವೈ. ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡುತ್ತಾ ದಶಕಗಳಿಂದ ಬಾಕಿ ಉಳಿದಿದ್ದ ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸುವ ಜನರ ಬೇಡಿಕೆಗೆ ಇದು ಸ್ಪಷ್ಟ ಮತ್ತು ನಿರ್ಣಾಯಕ ಮೊದಲ ಆಡಳಿತಾತ್ಮಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಪರಿಸರ ಸಂವೇದನಾಶೀಲ ಪಶ್ಚಿಮ ಘಟ್ಟ ಪ್ರದೇಶದ ಪ್ರಕೃತಿ ಸಮತೋಲನಕ್ಕೆ ಗೌರವ ನೀಡುತ್ತಲೇ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಕೈಗೊಳ್ಳುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ.

“ಡಿಪಿಆರ್ ಪ್ರಕ್ರಿಯೆ ಆರಂಭವಾಗಿರುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದಕ್ಕೆ ಸಾಕ್ಷಿ. ಈ ರಸ್ತೆ ಅಭಿವೃದ್ಧಿಯಿಂದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಣೆಯಾಗಲಿದ್ದು, ಸ್ಥಳೀಯ ಜನತೆ, ರೈತರು, ಪ್ರವಾಸೋದ್ಯಮ ಮತ್ತು ತುರ್ತು ಸೇವೆಗಳಿಗೆ ಮಹತ್ವದ ಲಾಭವಾಗಲಿದೆ” ಎಂದು ತಿಳಿಸಿದರು.

ಈ ನಿರ್ಧಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದು, ಮುಂದಿನ ಹಂತಗಳಲ್ಲಿ ಯೋಜನೆ ಸುಗಮವಾಗಿ ಸಾಗಲು ಕೇಂದ್ರದೊಂದಿಗೆ ನಿರಂತರ ಸಂಯೋಜನೆ ನಡೆಸಲಾಗುವುದು ಎಂದಿದ್ದಾರೆ. ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Shivamogga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026

ಕಾರಿನ ಮೇಲೆ ಹಾರಿದ ಕಾಡುಕೋಣ…

February 10, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,291 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026260 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025248 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025206 Views
Don't Miss
ಪ್ರಮುಖ ಸುದ್ದಿ

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

By Raghu ShettyFebruary 28, 20260

ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ…

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.