Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»ಭಿಕ್ಷೆ ಬೇಡಿ 5 ಕೋಟಿ ಕೊಡ್ತೀವಿ. ಕಾರ್ಮಿಕರ ಕೆಲಸ ಗ್ಯಾರಂಟಿಯಾಗಲಿ…
ಪ್ರಮುಖ ಸುದ್ದಿ

ಭಿಕ್ಷೆ ಬೇಡಿ 5 ಕೋಟಿ ಕೊಡ್ತೀವಿ. ಕಾರ್ಮಿಕರ ಕೆಲಸ ಗ್ಯಾರಂಟಿಯಾಗಲಿ…

Raghu ShettyBy Raghu ShettyJanuary 25, 2026No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಭದ್ರಾವತಿ: ತರಳಬಾಳು ಹುಣ್ಣಿಮೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪೂಜ್ಯರು ನಗರದ ಉಂಬ್ಳೆಬೈಲು ರಸ್ತೆಯ ಬೊಮ್ಮನಕಟ್ಟೆ ವಿಐಎಸ್‌ಎಲ್ ಹೆಲಿಪ್ಯಾಡ್ ಬಳಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದ ಭರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಮಹಾಮಂಟಪ, ರಾಷ್ಟ್ರಕವಿ ಕುವೆಂಪು ಮಹಾವೇದಿಕೆಯಲ್ಲಿ ನಡೆದ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಯಡಿಯೂರಪ್ಪ ನವರು ಸಿಎಂ ಆಗಿದ್ದ ಸಂಧರ್ಭದಲ್ಲಿ ಶ್ರೀ ಮಠಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದು ಕೊಂಡಿದ್ದೇನೆ ಏನು ಕೊಡಲಿ ಎಂದು ಹೇಳಿದಾಗ ಶ್ರೀ ಮಠಕ್ಕೆ ಕೊಡುಗೆ ಕೊಟ್ಟರೆ ನೀವು ಕೆಟ್ಟ ಹೆಸರು ಪಡೆಯುತ್ತೀರಾ, ಹಾಗಾಗಿ ಮಠಕ್ಕೆ ಕೊಡುಗೆ ನೀಡುವ ಬದಲಿಗೆ ಮಠದವತಿಯಿಂದ ಹಮ್ಮಿಕೊಂಡಿರುವ ನೀರಾವರಿ ಯೊಜನೆಗಳಿಗೆ ಅನುದಾನ ನೀಡಿ ಎಂದಾಗ ೨೫ ಕೋಟಿ ರೂಗಳನ್ನ ಮಂಜೂರು ಮಾಡುವ ಮೂಲಕ ಜಗಳೂರು, ಭರಮಸಾಗರ, ಹಳೇಬೀಡುಗಳಲ್ಲಿ ಏತ ನೀರಾವರಿ ಯೋಜನೆಗಳು ಅನುಷ್ಟಾನಗೊಳ್ಳಲು ಕಾರಣೀಭೂತರಾದರು ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.

ರಾಜಪ್ರಭುತ್ವದ ಕಾಲದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಪ್ರಾರಂಭ ಆಗಿ ವೈಭವದ ದಿನಗಳನ್ನು ಕಂಡರೆ ಪ್ರಜಾಪಭುತ್ವದ ಕಾಲದಲ್ಲಿ ಹಾಳು ಹಂಪೆಯಂತಾಗಿರುವುದು ನೋವಿನ ಸಂಗತಿ. ಈ ಕಾರ್ಯಕ್ರಮ ನಡೆಯುತ್ತಿರುವ ಸುಮಾರು ೨೫೦ ಎಕರೆ ಜಾಗ ಕಾರ್ಖಾನೆಗೆ ಸೇರಿದ್ದು, ಇದು ಸರಿಯಾದ ನಿರ್ವಹಣೆ ಇಲ್ಲದೆ ಗಿಡ ಗಂಟೆಗಳು ಬೆಳೆದು ಹಾಳಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ಸಂಪೂರ್ಣ ಈ ಜಾಗವನ್ನು ಸ್ವಚ್ಚ ಮಾಡಲಾಗಿದೆ. ಇದನ್ನು ಹಾಗೆ ನಿರ್ವಹಣೆ ಮಾಡಬೇಕು. ಅದಕ್ಕೆ ಈ ಜಾಗದ ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ ರವರಿಗೆ ಸೂಚಿಸಿದರು.

ಜನರಿಂದ ದೇಣಿಗೆ ಸಂಗ್ರಹಿಸಿ ಈ ಮಹೋತ್ಸವ ಕಾರ್ಯಕ್ರಮ ನಡೆಸಿದ್ದು, ಉಳಿಕೆ ಹಣದ ಜೊತೆಗೆ ಶ್ರೀ ಮಠದ ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಅಭಿವೃಧ್ಧಿಗೆ ಐದು ಕೋಟಿ ರೂಗಳನ್ನು ನೀಡಲಾಗುವುದು ಎಂದು ಪ್ರಕಟಿಸಿ ಅಚ್ಚರಿ ಮೂಡಿಸಿದರು. ಈ ಮೂಲಕ ಜನರಿಗೆ ದುಡಿಮೆಯ ಗ್ಯಾರಂಟಿ ನೀಡಿ ಪರೋಕ್ಷವಾಗಿ ಸೂಕ್ಷ್ಮವಾಗಿ ತಿಳಿಸಿದರು. ಇದಕ್ಕಾಗಿ ಮುಂಬರುವ ಕೇಂದ್ರ ಸರ್ಕಾರದ ಆರ್ಥಿಕ ಪತ್ರದ ಬಜೆಟ್‌ನಲ್ಲಿ ಕಾರ್ಖಾನೆ ಅಭಿವೃಧ್ಧಿಗೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಿಸಿ ಎಂದು ತಿಳಿಸಿದರು.

ಕೇಂದ್ರ ಉಕ್ಕು ಹಾಗು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಇದ್ದ ಬೃಹತ್ ಕೈಗಾರಿಕಗೆಗಳಾದ ಟಾಟ, ಪಶ್ಚಿಮ ಬಂಗಾಳದಲ್ಲಿರುವ ಉಕ್ಕು ಕಾರ್ಖಾನೆಯ ಜೊತೆಗೆ ಭದ್ರಾವತಿ ಉಕ್ಕು ಕಾರ್ಖಾನೆ ಸಹ ಪ್ರಖ್ಯಾತಿಯನ್ನು ಗಳಿಸಿತ್ತು. ಆ ಸಮಯದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರದ ಸಹಾಯ ಇತ್ತು. ಆದರೆ ಪ್ರಸ್ತುತ ದಿನಮಾನಗಳಲ್ಲಿ ಇವುಗಳು ನಷ್ಟದ ಕಾರಣ ಮುಚ್ಚಲಾಗಿದೆ. ಇದರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಹ ಒಂದಾಗಿದೆ. ಇದನ್ನು ಸರ್ಕಾರದವತಿಯಿಂದ ನಡೆಸಲು ಸಾಧ್ಯವಿಲ್ಲ ಎಂದು ೨೦೧೬-೧೭ ನೇ ಸಾಲಿನಲ್ಲಿ ಖಾಸಗೀಕರಣಕ್ಕೆ ಮಂತ್ರಿ ಮಂಡಲದಲ್ಲಿ ತೀರ್ಮಾನ ಮಾಡಲಾಗಿತ್ತು.

ಆದರೆ ಈಗ ಪ್ರಭಾವ ಬೀರಿ ಈ ಸಾಲಿನ ಬಜೆಟ್ ನಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಐದು ಸಾವಿರ ಕೋಟಿ ರೂಗಳನ್ನು ಕೋಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಆದರೆ ಇದಕ್ಕೆ ಸರ್ಕಾರದ ಆರ್ಥಿಕ ಇಲಾಖೆಯಿಂದ ಅನುಮತಿ ಬೇಕು. ಇದಕ್ಕಾಗಿ ಹಣಕಾಸು ಸಚಿವರಿಂದ ಒಪ್ಪಿಗೆ ಕೊಡಿಸಿ ಎಂದು ಶ್ರೀಗಳವರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು. ಆದರೆ ಇದು ಕೇಂದ್ರ ಸರ್ಕಾರಕ್ಕೆ ಹೊರೆ ಆಗುವುದಿಲ್ಲ ಎಂದರು.

ಈ ಕಾರ್ಖಾನೆಯಿಂದ ವಿದೇಶಿ ಕಂಪನಿಗಳ ಗುಣಮಟ್ಟದ ಉಕ್ಕನ್ನು ತಯಾರಿಸಬಹುದು. ಇದಕ್ಕೆ ಪ್ರಧಾನಿ ಮೋದಿಯವರು ಸಮ್ಮತಿಸಲಿದ್ದಾರೆ. ಕಾರಣ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲ್ಲಿರುವ ಉಕ್ಕು ಕಾರ್ಖಾನೆಗೆ ೩೨ ಸಾವಿರ ಕೋಟಿ ಸಾಲದಹೊರೆ ಹೊತ್ತಿದ್ದರೂ ಅದಕ್ಕೆ ಹಣಕಾಸಿನ ಪುನಶ್ಚೇತನ ನಿಡುವ ಮೂಲಕ ಈಗ ಕಾರ್ಖಾನೆ ೨೧ ಮೆಟನ್ ಉಕ್ಕನ್ನು ಉತ್ಫಾಧನೆ ಮಾಡುತ್ತಿದೆ. ಅದೇ ರೀತಿಯಲ್ಲಿ ಮುಂದಿನ ಕೆಲ ತಿಂಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆಗೂ ಸಹ ದೊಡ್ಡ ಮಟ್ಟದಲ್ಲಿ ಕಾಯಕಲ್ಪ ನೀಡಲಾಗುತ್ತದೆ ಎಂದು ಗ್ಯಾರಂಟಿ ನೀಡಿದರು.

ದೇಶದ ಆರ್ಥಿಕತೆ ಬಹಳಷ್ಟು ಭಲಾಢ್ಯವಾಗಿ ವೇಗವಾಗಿ ಬೆಳೆಯುತ್ತಿದೆ. ಇದರ ಫಲವಾಗಿ ಮೂರನೆ ಸ್ಥಾನದಲ್ಲಿರುವುದ ದೇಶದ ಪ್ರತಿಯೊಬ್ಬರೂ ಹೆಮ್ಮೆಪಡಬೇಕು ಎಂಧರು.

ಪ್ರಸ್ತುತ ಸಮಾಜದಲ್ಲಿರುವ ಪರಸ್ಪರರಲ್ಲಿ ಉತ್ತಮವಾದ ಭಾಂಧವ್ಯ ನಶಿಸುತ್ತಿದೆ. ಹಿರಿಯು ಕಷ್ಟಪಟ್ಟು ಬೆಳೆದ ಬಗೆಯನ್ನು ಕಿರೊಯರು ಸ್ಮರಿಸುತ್ತಿಲ್ಲ. ಅದರ ಅರಿವು ಆಗುತ್ತಿಲ್ಲ. ಕಷ್ಟಪಡಬೇಕು ಎಂಬ ಮನಸ್ಸಿಲ್ಲ. ಹೀಗಾದಲ್ಲಿ ಕುಟುಂಬದಲ್ಲಿ ಶಾಂತಿನೆಮ್ಮದಿ ಹೇಗೆ ಕಾಣಲು ಸಾಧ್ಯವಿಲ್ಲ. ಇದನ್ನು ಸರಿಪಡಿಸಲು ತಿದ್ದಲು ಕೇವಲ ಮಠ ಮಂದಿರಗಳಿಂದ ಮಾತ್ರ ಸಾಧ್ಯ. ಸಮಾಜದ ವೈಪಲ್ಯಗಳನ್ನು ಸರಿಪಡಿಸುವ ಕಾಯಕದಲ್ಲಿ ಮಠದಗಳ ಕೊಡುಗೆ ಮಹತ್ತರವಾದದು ಎಂದರು.

ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ ಶ್ರೀಗಳವರು ಕೇವಲ ಮಠ.ಮಂದಿರ, ಧಾರ್ಮಿಕ ಆದ್ಯಾತ್ಮಿಕ ಆಚರಣೆಗಳನ್ನು ಮಾತ್ರ ಮಾಡದೆ, ೧೨ ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ರಚಿಸಿ ಸುಮಾರು ೨೨ ಸಾವಿರ ವಚನಗಳನ್ನು ಇಂದಿನ ಆಧುನಿಕ ತಂತ್ರಾಂಶದ ಮೂಲಕ ಶಾಶ್ವತವಾಗಿ ಸಂಗ್ರಹಿಸಿ ರಕ್ಷಣೆ ಮಾಡಿರುವುದುಗುರುಗಳ ದೂರದೃಷ್ಟಿಯ ಫಲ ಎಂದು ಶ್ಲಾಘಿಸಿದರು.

ಉಡುಪಿ ಶ್ರೀ ಮನ್ಮಧ್ವಾಚಾರ್ಯಮೂಲಸಂಸ್ಥಾನ ಶ್ರೀಮದುಪೇಂದ್ರತೀರ್ಥ ಪೀಠ ಪುತ್ತಿಗೆ ಮಠದ ಶ್ರೀ ಡಾ.ಸುಗುಣೇಂದ್ರ ತೀರ್ಥಶ್ರೀಪಾದರು ಮಾತನಾಡಿ ಉಡುಪಿಯಲ್ಲಿ ಎರಡು ವರ್ಷಗಳಿಗೊಮ್ಮೆ ಪರ್ಯಾಯ ನಡೆಯುವಂತೆ ಪ್ರತಿ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿರುವುದು, ಆ ಮೂಲಕ ಧಾರ್ಮಿಕ ಆಧ್ಯಾತ್ಮಿಕ, ಸಾಮಾಜಿಕ, ಸಂಗತಿಗಳನ್ನು ಪುನಶ್ಚೇತನಗೊಳಿಸುತ್ತಿರುವುದು ಸಂತಸದ ಸಂಗತಿ ಎಂದರು.

ಭೌಧ್ಧಿಕವಾಗಿ ಪಾರಮಾರ್ಥಿಕವಾಗಿ ಹಿಂದೆ ಬೀಳುತ್ತಿದ್ದೇವೆ. ಧಾರ್ಮಿಕ ಸಾಂಸ್ಕ್ರತಿಕ ಮೌಲ್ಯಗಳು ಕಡಿಮೆ ಆಗುತ್ತಿದೆ. ಆದ್ಯಾತ್ಮಿಕ ಸಾಂಸ್ಕ್ರತಿಕ ಜ್ಞಾನದ ಅಭಿವೃಧ್ಧಿ ಆದರೆ ಮಾತ್ರ ಸಮಾಜ ಪುನಶ್ಚೇತನಗೊಂಡು ಉತ್ತಮ ರೀತಿಯಲ್ಲಿ ಮುಂದುವರೆಯುತ್ತದೆ. ಆದ್ದರಿಂದ ಈ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆ ಆಗದೆ ಭೌಧ್ಧಿಕ ಮತ್ತು ಸಾಂಸ್ಕ್ರತಿಕ ಚಿಂತನೆಗೆ ವೇದಿಕೆಯಾಗಿದೆ. ದೇಶ ಸೇವೆ ಈಶ ಸೇವೆ ಯನ್ನು ಒಟ್ಟಾಗಿ ನಡೆಸುವ ಉತ್ತಮ ಸಂದೇಶವನ್ನು ಸಾರುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗೀತೆಯ ಸಂದೇಶದಂತೆ ಆತ್ಮೋಧ್ದಾರ ಮಾಡಿಕೊಳ್ಳುವ ಸಲುವಾಗಿ ಪರಿಪೂರ್ಣ ಹೆಜ್ಜೆಯನ್ನು ಹಾಕಬೇಕು. ಆತ್ಮನಿರ್ಭರ ಹೆಸರು ಭಗವದ್ಗೀತೆಯ ಸಂದೇಶದ ಸಾಲಾಗಿದೆ. ಸ್ವಾವಲಂಬನೆ ಗೀತೆಯ ಸಾರದ ಹಿನ್ನಲೆಯದಲ್ಲಿ ಜೀವನವನ್ನು ಸಾರ್ಥಕಗೊಳಸಿಕೊಳ್ಳಬೇಕು.ವಚನ, ಸಂತರ ಸಾರದಿಂದ ಅಹಂಕಾರ ಶ್ರಿಮಂತಿಕೆಯ ಹಿಮದೆ ಹೋಗಿ ಆಶಾಂತಿ ಹಾದಿ ತುಳಿಯುತ್ತಿದ್ದೇವೆ. ದೇವರು ದೈವ ಧರ್ಮದ ನೆಲೆಗಳಲ್ಲಿ ದುಷ್ಟ ಶಕ್ತಿಗಳು ಸಂಘರ್ಷಗಳು ಆಶಾಂತಿ ಉಂಟಾಗುವುದಿಲ್ಲ ಎಂದರು .

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ,ವೈ.ರಾಘವೇಂದ್ರ ಸಭೆಯನ್ನು ಉದ್ದೇಶಿ ಸಿ ಮಾತನಾಡಿದರು. ಇಳಕಲ್‌ನ ಜಾನಪದ ವಿದ್ವಾಂಸ ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಶಂಭು ಬಳಿಗಾರ್,ಚಲನಚಿತ್ರ ನಟ ರಂಗಭೂಮಿ ಕಲಾವಿದ ಅರುಣ ಸಾಗರ್ ಉಪನ್ಯಾಸ ನೀಡಿದರು.

ಶಾಸಕರುಗಳಾದ ಬಿ.ಕೆ.ಸಂಗಮೇಶ್ವರ, ಬಸವರಾಜ್‌ಶಿವಗಂಗ, ಬಿ.ಪಿ.ಹರೀಶ್, ಎಸ್.ಎಲ್.ಭೋಜೆಗೌಡ, ಶಾರದಾ ಪೂರ‍್ಯಾನಾಯ್ಕ್, ಮಾಜಿ ಶಾಸಕ ಸಾ.ರಾ.ಮಹೇಶ್, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಶಾರದಾ ಅಪ್ಪಾಜಿ. ಹೆಷ್.ಆರ್.ಬಸವರಾಜಪ್ಪ, ಸೇರಿದಂತೆ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯಗುಳು ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿರಿಗೆರೆ ತರಳಬಾಳು ಸಿಬಿಎಸ್‌ಇ ಶಾಲೆ ವಿಧ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಿರಿಗೆರೆ ಕಲಾ ಸಂಘದ ವತಿಯಿಂದ ಮಲ್ಲಿಹಗ್ಗ ಪ್ರದರ್ಶನ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕೆ.ಹೆಚ್.ತೀರ್ಥಯ್ಯ ಸ್ವಾಗತಿಸಿದರು. ರಾಜಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯ ಕಾರ್ಯಕ್ರಮಕ್ಕೂ ಮೊದಲು ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಾದ್ವಾರದಿಂದ ಶ್ರೀಗಳವರನ್ನು ೧೦೮ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಸಭಾ ಮಂಟಪಕ್ಕೆ ಕರೆತಂದರು.

Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಆಗುಂಬೆ ಘಾಟ್ : ಡಿಪಿಆರ್ ಹಾಗೂ ಸುರಂಗ ಮಾರ್ಗ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಟೆಂಡರ್

February 10, 2026

ಅಮ್ಮನವರ ದರ್ಶನಕ್ಕೆ ಹರಿದು ಬಂದ ಜನಸಾಗರ

February 3, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,293 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026260 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025248 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025206 Views
Don't Miss
ಪ್ರಮುಖ ಸುದ್ದಿ

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

By Raghu ShettyFebruary 28, 20260

ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ…

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.