ಶಿವಮೊಗ್ಗ : ನಗರ ಪ್ರದೇಶಗಳು ಬೆಳೆದಂತೆ, ಪ್ರತಿಯೊಂದು ವಸ್ತುಗಳಿಗೂ ಬೆಲೆ ಬಂದಿ ಬಿಡುತ್ತದೆ. ಉಚಿತ ಸಿಗುವ ವಸ್ತುಗಳು ಕೂಡ ಒಮ್ಮೆಮ್ಮೆ ಚಿನ್ನದ ಬೆಲೆ ಬಂದು ಜನರಿಗೆ ಅಕ್ರಮ ದಾರಿ ತೋರಿಸಿಕೊಡುತ್ತದೆ. ಆದರೆ. ಅದಕ್ಕೆಲ್ಲ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ನಿಷ್ಠೆ ತೋರಿದಾಗ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ.
ಆದರೆ, ಏನೂ ಗೊತ್ತಿಲ್ಲ ನಮ್ಮ ತೆರಿಗೆ ಹಣದಿಂದ ಲಕ್ಷಾಂತರ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ಮಾತ್ರ ಯಾವುದೇ ಅಕ್ರಮಗಳಿಗೆ ನಮಗೂ ಸಂಬಂಧಿವಿಲ್ಲದಂತೆ ಹಾರಿಕೆ ಉತ್ತರ ಹೇಳುತ್ತ ಜಾರಿಕೊಳ್ಳುತ್ತ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಟಿಸುವುದು ಕರಗತ ಮಾಡಿಕೊಂಡು ಬಿಟ್ಟುತ್ತಾರೆ. ಲೋಕಲ್ ಭಾಷೆಯಲ್ಲಿ ಹೇಳ ಬೇಕೆಂದರೇ, ಮೈಗೆ ಎಣ್ಣೇ ಹಚ್ಚಿಕೊಂಡು ಇರುತ್ತಾರೆ. ಎಂದರೇ ಸಾರ್ವಜನಿಕರ ದಾರಿ ತಪ್ಪಿಸಿ, ಅಕ್ರಮ ದಂಧೆ ಕೋರರ ಪರವಾಗಿ ಇವರ ಕೆಲವು ಮೌಖಿಕ ಕಾನೂನುಗಳನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಆ ಮಟ್ಟಿಗೆ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ.
ಅದರಲ್ಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಂತಹ ಅವರು ಸಂಬಳಕ್ಕೆ ಕೆಲಸ ಮಾಡುತ್ತಾರೆ. ಅಥವಾ ಗಿಂಬಳಕ್ಕೇ ಕಾರ್ಯನಿರ್ವಹಿಸುತ್ತಾರೋ ಗೊತ್ತಿಲ್ಲ. ಆ ಮಟ್ಟಿಗೆ ಅಕ್ರಮದಲ್ಲಿ ಭಾಗಿಯಾಗಿ, ಭೂ ಸಂಪತ್ತನ್ನೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಂದರೇ ತಪ್ಪಗಲಾರದು.
ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿರುವ ಕೊಮ್ಮನಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಬನ್ನಿಕೆರೆ ಗ್ರಾಮದಲ್ಲಿ ಪ್ರಕಾಶ್(ಗಿಲ್ಲಿ ಪ್ರಕಾಶ್) ಎಂಬ ವ್ಯಕ್ತಿ ಭೂಗರ್ಭವನ್ನು ಭಗಿದು ತಿನ್ನುತ್ತಿದ್ದಾನೆ. ಅದು ಕೂಡ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ, ಯಾವುದೇ ಅಧಿಕಾರಿಗಳ ಪರವಾನಗಿ ಇಲ್ಲದೆ, ಕನಿಷ್ಠ ಸ್ಥಳೀಯ ಗ್ರಾಮಪಂಚಾಯಿತಿ ಪರವಾನಗಿ ಇಲ್ಲದೆ ದಿನನಿತ್ಯ ೩೦ ರಿಂದ ೩೫ ಲಾರಿ ಲೋಡ್ ಮಣ್ಣನ್ನು ಅಕ್ರಮವಾಗಿ ನಗರದ ಪ್ರದೇಶ ಲೇಔಟ್‌ಗಳಿಗೆ ಸಾಗಿಸುತ್ತಿದ್ದೇನೆಂದರೆ. ಅರ್ಥ ಮಾಡಿಕೊಳ್ಳಿ ಅದು ಯಾವುದೇ ಭಯವಿಲ್ಲದೇ ರಾಜರೋಷವಾಗಿ ಮುಖ್ಯ ರಸ್ತೆಯಲ್ಲಿ ಲಾರಿಗಳು ಓಡಾಡುತ್ತಿದೆ. ಅದರಲ್ಲಿ ಕೊಮ್ಮುನಾಳು ಗ್ರಾಮಪಂಚಾಯಿತಿ ಕಛೇರಿ ಮುಂಭಾಗವೇ ಈ ಲಾರಿಗಳು ಒಂದರಂತೆ ಒಂದು ಓಡಾಡುತ್ತವೆ. ಆದರೂ ಕೂಡ ಅಲ್ಲಿ ಪಿಡಿಓ ಅದರ ಬಗ್ಗೆ ಗಮನ ಹರಿಸಿಲ್ಲ. ಕನಿಷ್ಠ ಪಕ್ಷದ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿ. ಈ ರೀತಿ ಅಕ್ರಮ ನಡೆಯುತ್ತಿದೆ. ಏನಾದರೂ ಕ್ರಮ ತೆಗೆದುಕೊಳ್ಳಿ ಎನ್ನಬಹುದು. ಅದೂ ಕೂಡ ಈ ಪಿಡಿಓಗೆ ಸಾಧ್ಯವಿಲ್ಲ ಎಂದರೇ ಅರ್ಥ ಮಾಡಿಕೊಳ್ಳಬೇಕು, ಈತನ ಪಾತ್ರವೇನು ಇಲ್ಲಿ ಎಂದು.
ಅಕ್ರಮ ಮಣ್ಣು ದಂಧೆಯಾ ಕಿಂಗಫಿನ್ ಪ್ರಕಾಶ್(ಗಿಲ್ಲಿ ಪ್ರಕಾಶ್)
ಈತನು ಕೆಲವು ಗ್ರಾಮಗಳಲ್ಲಿ ಹೋಗಿ, ಕೆಲವು ಮುಗ್ದ ರೈತರಿಗೆ ಹಣದಾಸೆ ತೋರಿಸಿ ನಿಮ್ಮ ಜಮೀನ ಪಕ್ಕದಲ್ಲಿ ಮಣ್ಣೂ ತೆಗೆಯ ಅವಕಾಶ ಕೊಡಿ ಅಂತ ಹೇಳಿ, ಅವರಿಗೆ ದಿನಕ್ಕೆ ೩೦೦-೪೦೦ ರೂ ಕೊಟ್ಟು, ಈತನ ಮಾತ್ರ ದಿನಕ್ಕೆ ೩೫೦೦೦-೪೦೦೦೦ ಹಣ್ಣ ದೋಷಿ ಭೂ ತಾಯಿಯನ್ನು ಬೆತ್ತಲೇ ಮಾಡಿ ನಿಲ್ಲುಸುತ್ತಿದ್ದಾನೆ. ಈತನಿಗೆ ಯಾವುದೇ ಪರವಾನಗೇ ಬೇಡವಂತೆ ಈತನ ಹೇಳಿದಂತೆ ಅಧಿಕಾರಿ-ಪೊಲೀಸರ ಕೇಳ್ತಾರಂತೆ…?

ಎಲ್ಲಾರಿಗೂ ಮಾಮೂಲಿ ಕೋಡ್ತಾರಂತೆ…? ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳೇ ಅರ್ಥಮಾಡಿಕೊಳ್ಳಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೋಗ್ತಿರ, ಅದಕ್ಕೆ ಸ್ವಲ್ಪನಾದರು ನಿಉತ್ತಿನಿಂದ ಕಾರ್ಯನಿರ್ವಹಿಸಿ, ಈತನ ವಿರುದ್ದ ದೂರು ದಾಖಲಿಸಿ, ಜೈಲಿಗಟ್ಟಿದರೇ ಭೂ ಮಾತೆಯ ಮಡಿಲ ಮತ್ತೇ ಹಸಿರಾಗುವುದು. ಇಲ್ಲವೆಂದರೇ ಇವನೊಂದಿಗೆ ನಿಮ್ಮ ಮಡಿಲು ಕೂಡ ಬರಿದಾದತ್ತು ಜೋಪಾನ….
ಅದರಲ್ಲಿ ಮತ್ತೊಂದು ಅರಣ್ಯ ಇಲಾಖೆ, ಯಾರೋ ಬಡಪಾಯಿ ಹೋಗಿ ಕಾಡಿನಿಂದ ಒಂದು ಸೌದೆ ತಂದರೇ ಸಾಕು, ಅದನ್ನು ನೂರಾರು ಪ್ರಶ್ನಿ ಮಾಡಿ, ಆತ ಕಾಡಿನತ್ತ ಸುಳಿ ಬಾರದು ಆ ಮಟ್ಟಿಗೆ ಚಿತ್ರ ಹಿಂಸೆ ನೀಡುವ ಅರಣ್ಯ ಇಲಾಖೆ ಸಿಬ್ಬಂದಿಗಳು. ಅರಣ್ಯ ಪ್ರದೇಶದಲ್ಲಿ ಭೂ ಮಾತೆಯ ಮಡಿಳನ್ನು ಬರಿದು ಮಾಡುತ್ತಿದ್ದರು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ಏಕೇ ಅವರಿಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರೇ ನೋಡ್ತಿನೀ, ಹೋಗ್ತಿನೀ ಅಂಥ ಸಬೂಬು ಹೇಳ್ತಾರೆ. ಅಕ್ರಮ ದಂಧೆ ಕೋರ ಪ್ರಕಾಶ್ ಬಳಿ ಕೇಳಿದರೇ ಎಲ್ಲಾ ಇಲಾಖೆಗೂ ನಾನು ಪ್ರತಿ ತಿಂಗಲು ಮಾಮೂಲಿ ಕೊಡ್ತೀನಿ ಹಾಗಾಗಿ ಅವರು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳ್ತಾನೆ. ಅಧಿಕಾರಿಗಳಿ ಇಂತಹ ಕೆಳಮಟ್ಟಕ್ಕೆ ಇಳಿದರೇ ಎಂಬುವುದೇ ನಮಗೆ ನಾಚಿಗೇಡಿನ ಸಂಗತಿಯಾಗಿದೆ.
ಮತ್ತೊಂದು ಅಕ್ರಮದಲ್ಲಿ ಅಕ್ರಮ ಎಂದರೇ ತಪ್ಪಗಲಾರದು ಅಂತಹ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಈ ಇಲಾಖೆಗೆ ಈ ಹೆಸರಿನ ಬದಲು ಸಂಪತ್ತು ಲೂಟಿ ಮಾಡಿ, ನಮಗೂ ಸ್ವಲ್ಪ ಕೊಡಿ ಎಂದು ಮರುನಾಮಕರಣ ಮಾಡಿದ್ದರೇ ಅನುಕೂಲವಾಗುತ್ತೇ ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಇಲಾಖೆ ಅಧಿಕಾರಿ ಗಬ್ಬೇದ್ದು ಹೋಗಿದ್ದಾರೆ.
