Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ನೀರು ಸಮಸ್ಯೆಯಿದ್ದರೆ ಅಭಿಯಂತರರನ್ನು ಸಂಪರ್ಕಿಸಿ

April 18, 2026

ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆ ಮುಂದುವರಿಕೆ ಅಗತ್ಯ: ಸಂಸದ ರಾಘವೇಂದ್ರ ಮನವಿ

April 12, 2026

ಗ್ಯಾಸ್ ಸಮಸ್ಯೆ: ಹೋಟೆಲ್, ಆಟೋ, ಪುಟ್‌ಪಾತ್ ವ್ಯಾಪಾರಿಗಳಿಗೆ ಸಂಕಷ್ಟ

April 12, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ನಮ್ಮ ಶಿವಮೊಗ್ಗ»ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮಟ್ಟದಲ್ಲಿ ಹೊಸ ಶಾಖೆಗಳನ್ನು ತೆರೆಯಬೇಕು: ಎನ್.ಹೇಮಂತ್
ನಮ್ಮ ಶಿವಮೊಗ್ಗ

ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮಟ್ಟದಲ್ಲಿ ಹೊಸ ಶಾಖೆಗಳನ್ನು ತೆರೆಯಬೇಕು: ಎನ್.ಹೇಮಂತ್

Raghu ShettyBy Raghu ShettySeptember 29, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ: ಲೀಡ್ ಬ್ಯಾಂಕ್‌ಗಳು ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ತಮ್ಮ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜಿ.ಪಂ ಸಿಇಓ ಹೇಮಂತ್.ಎನ್ ಸಲಹೆ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ ಇವರ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯತ್ ನಜೀರ್‌ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ-ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಲೀಡ್ ಬ್ಯಾಂಕ್‌ಗಳು ಆ ಭಾಗದಲ್ಲಿ ತಮ್ಮ ಬ್ರಾಂಚ್‌ಗಳನ್ನು ಸ್ಥಾಪಿಸಿಕೊಳ್ಳಬೇಕು. ಭದ್ರಾವತಿಯ ಗ್ರಾಮೀಣ ಹಾಗೂ ಹೋಬಳಿಗಳಲ್ಲಿ ಈಗಾಗಲೇ ಐಡಿಬಿಐ ಬ್ಯಾಂಕ್ ತನ್ನ ಬ್ರಾಂಚ್ ತೆರೆದಿದೆ. ಸೊರಬ, ಮುಡುಬ, ದೊಡಮಘಟ್ಟ ಭಾಗಗಳಲ್ಲಿ ಬ್ಯಾಂಕ್‌ಗಳ ಅವಶ್ಯಕತೆ ಇದೆ. ಹಾಗೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೂ ಕೂಡ ಇದ್ದಾರೆ. ಹಾಗಾಗಿ ಈ ಭಾಗಗಳಲ್ಲಿ ಶಾಖೆಯನ್ನು ತೆರೆದರೆ ರೈತರಿಗೆ, ಸ್ವ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಸರ್ಕಾರದಿಂದ ಆರ್ಥಿಕ ಸೇರ್ಪಡೆ ಜಾಗೃತಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಕಾರ್ಯಕ್ರಮದ ಕುರಿತಾಗಿ ಬ್ಯಾಂಕ್‌ಗಳು ನಗರ, ಗ್ರಾಮೀಣ ಹಾಗೂ ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸಬೇಕು. ಆಯಾ ಭಾಗದ ಬ್ಯಾಂಕ್‌ಗಳು ಕ್ಯಾಂಪ್ ಮಾಡಿ ಫಲಾನುಭವಿಗಳಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೂ ಅದರಿಂದಾಗುವ ಅನುಕೂಲವನ್ನು ಹೇಳಬೇಕು.

ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಜೂನ್ 2024 ರಿಂದ ಅರಂಭ ಮಾಡಲಾಗಿದೆ. 2025-26 ರವರೆಗೆ ಜಿಲ್ಲೆಯಲ್ಲಿ ಒಟ್ಟು 1000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ ಜೂನ್ 2025 ರವರೆಗೆ 250 ಅಭ್ಯರ್ಥಿಗಳನ್ನು ಆಯ್ಕೆಯಾಗಿದ್ದು, 261 ಅಭ್ಯರ್ಥಿಗಳು ತರಬೇತಿಯಲ್ಲಿ ಉತ್ತೀರ್ಣರಾಗಿದ್ದಾರೆ.
2025-26 ರವರೆಗೆ ಒಟ್ಟು 800 ಪ್ರಶಿಕ್ಷಣಾರ್ಥಿಗಳು ಒಳಗೊಂಡಿದ್ದಾರೆ. ಅದರಲ್ಲಿ ಜೂನ್ 2025 ರವೆರೆಗೆ 200 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 261 ಅಭ್ಯರ್ಥಿಗಳು ತರಬೇತಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ಸೇರಿದಂತೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳು ಬಾಕಿ ಉಳಿದಿದ್ದು, ಕೂಡಲೇ ಆಯೋಜಿಸಬೇಕು. ಹಾಗೂ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಬೇಕು ಎಂದರು.
ಪಶುಪಾಲನೆಗಾಗಿ ಸಾಲ ಕೊಡುವ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿ ಕಾರ್ಯಕ್ರಮವಾಗಿದ್ದು, ಇದನ್ನು ರೈತರಿಗೆ ಸರಿಯಾಗಿ ತಲುಪಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕು. ಈಗಾಗಲೇ ಕೆಲವು ಬ್ಯಾಂಕ್ ತಮ್ಮ ಟಾರ್ಗೆಟ್ ತಲುಪುವಲ್ಲಿ ಹಿಂದೆ ಉಳಿದಿದ್ದು, ಈ ಸಂಬಂಧ ಲೀಡ್ ಬ್ಯಾಂಕ್ ಹಾಗೂ ಪಶುಪಾಲನೆ ಇಲಾಖೆ ಸಭೆ ನಡೆಸಿ ಈ ಯೋಜನೆಯನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು. ಮುಂದಿನ ಸಭೆಯಲ್ಲಿ ಬ್ಯಾಂಕ್‌ಗಳು ತಮ್ಮ ಟಾರ್ಗೆಟ್ ಸಂಖ್ಯೆಯನ್ನು ನಿರೀಕ್ಷಿತ ಮಟ್ಟಕ್ಕೆ ತಲುಪಿಸಬೇಕು. ಹಾಗೂ ಕೃಷಿ ಸಾಲದಂತೆ ಮೀನುಗಾರಿಕೆ ಸಾಲವೂ ಹೆಚ್ಚಿನ ಮಹತ್ವ ಪಡೆದಿದ್ದು, ಮೀನುಗಾರಿಕೆ ಸಾಲದ ಬಗ್ಗೆ ಬ್ಯಾಂಕ್ ಹಾಗೂ ಇಲಾಖೆಗಳು ಹೆಚ್ಚು ಪ್ರಚಾರ ನೀಡಿ ಅದರಿಂದ ಮೀನುಗಾರರಿಗೆ ಇರುವ ಅನುಕೂಲವನ್ನು ತಿಳಿಸಬೇಕು ಎಂದರು.
ಓಪನಿಂಗ್ ಅಂಡ್ ಕ್ರೆಡಿಟ್ ಲಿಂಕೇಜ್ ಪೊಸಿಷನ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಜೂನ್ 2025 ರಲ್ಲಿ 400 ಖಾತೆಗಳಿಗೆ ಕ್ರೆಡಿಟ್ ಲಿಂಕ್ ಮಾಡಿದೆ. ಇದರಲ್ಲಿ ಎಸ್‌ಬಿಐ 112 ಖಾತೆಗಳನ್ನು ಲಿಂಕ್ ಮಾಡಿದರೆ ಖಾಸಗಿ ಬ್ಯಾಂಕ್‌A ಹೆಚ್‌ಡಿಎಫ್‌ಸಿ ಬ್ಯಾಂಕ್ 125 ಖಾತೆಗಳನ್ನು ಕ್ರೆಡಿಟ್ ಲಿಂಕ್ ಮಾಡಿದೆ. ರಾಷ್ಟಿçÃಯ ಬ್ಯಾಂಕ್ ಆದ ಎಸ್‌ಬಿಐ ಮುಂದಿನ ಬಾರಿ ಖಾಸಗಿ ಬ್ಯಾಂಕ್‌ಗಳಿಗಿAತ ಉತ್ತಮ ಫಲಿತಾಂಶ ನೀಡಬೇಕು. ಹಾಗೂ ಕಾರ್ಯ ಕ್ರೆಡಿಟ್ ಲಿಂಕ್ ಮಾಡುವ ಪ್ರಕ್ರಿಯೆಗೆ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದರು.
ಪಿಎಂಎವೈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 2809 ಅರ್ಜಿಗಳನ್ನು ಪಡೆದಿದ್ದು, ಅದರಲ್ಲಿ 1335 ಅರ್ಜಿಗಳು ಮಂಜೂರಾಗಿ 220 ಅರ್ಜಿಗಳಿಗೆ ಮನೆಯನ್ನು ವಿತರಿಸಲಾಗಿದೆ. ಇನ್ನೂ 1273 ಅರ್ಜಿಗಳು ಬಾಕಿ ಉಳಿದಿದೆ. ಇದಕ್ಕೆ ಸಂಬಂಧಪಟ್ಟಂತೆ ಬಾಕಿ ಇರುವ ಅರ್ಜಿದಾರರಿಗೆ ಕೂಡಲೇ ಪರಿಶೀಲಿಸಿ ಮನೆಯನ್ನು ಒದಗಿಸುವ ಕಾರ್ಯ ಮಾಡಬೇಕು. ಇದಕ್ಕೆ ಬೇಕಾದ ಇ-ಸ್ವತ್ತು ವ್ಯವಸ್ಥೆಯನ್ನು ಮಾಡಲು ಪಿಡಿಓ ಬಳಿ ಚರ್ಚಿಸುತ್ತೇನೆ ಎಂದರು.
ಸಭೆಯಲ್ಲಿ ಕೆನರಾ ಬ್ಯಾಂಕ್ ಉಪ ವ್ಯವಸ್ಥಾಪಕರಾದ ಆರ್.ದೇವರಾಜ್, ಲೀಡ್ ಜಿಲ್ಲಾ ಅಧಿಕಾರಿ ಬುಬುಲ್ ಬೋರ್ಡೊಲೊಯ್, ನಬಾರ್ಡ್ ನ ಶರತ್ ಗೌಡ.ಪಿ, ವಿವಿಧ ಬ್ಯಾಂಕ್‌ಗಳು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

shivamoga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ನೀರು ಸಮಸ್ಯೆಯಿದ್ದರೆ ಅಭಿಯಂತರರನ್ನು ಸಂಪರ್ಕಿಸಿ

April 18, 2026

ಹೊತ್ತಿ ಉರಿದ ಡಸ್ಟರ್ ಕಾರು, ಚಾಲಕ ಪ್ರಾಣಾಪಾಯದಿಂದ ಪಾರು

April 6, 2026

ನೀರಾನೆ ದಾಳಿ ಪ್ರಕರಣ: ತನಿಖೆ ವರದಿ ಸಚಿವರಿಗೆ ಸಲ್ಲಿಕೆ 

March 28, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,303 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026263 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025263 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025210 Views
Don't Miss
ನಮ್ಮ ಶಿವಮೊಗ್ಗ

ನೀರು ಸಮಸ್ಯೆಯಿದ್ದರೆ ಅಭಿಯಂತರರನ್ನು ಸಂಪರ್ಕಿಸಿ

By Raghu ShettyApril 18, 20260

ಶಿವಮೊಗ್ಗ; ಏಪ್ರಿಲ್-18 ; (ಕರ್ನಾಟಕ ವಾರ್ತೆ): ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಶಿವಮೊಗ್ಗ ನಗರದ ದೈನಂದಿನ…

ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆ ಮುಂದುವರಿಕೆ ಅಗತ್ಯ: ಸಂಸದ ರಾಘವೇಂದ್ರ ಮನವಿ

April 12, 2026

ಗ್ಯಾಸ್ ಸಮಸ್ಯೆ: ಹೋಟೆಲ್, ಆಟೋ, ಪುಟ್‌ಪಾತ್ ವ್ಯಾಪಾರಿಗಳಿಗೆ ಸಂಕಷ್ಟ

April 12, 2026

ಹುಲಿಕಲ್ ಘಾಟ್ ರಸ್ತೆ ತಾತ್ಕಾಲಿಕ ಬಂದ್ – ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚನೆ

April 11, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಭದ್ರಾವತಿಯಲ್ಲಿ ಮನೆ ಕಳ್ಳತನ ಪ್ರಕರಣ ಪತ್ತೆ – 10 ಗ್ರಾಂ ಬಂಗಾರದ ಸರ ವಶ, ಆರೋಪಿಯ ಬಂಧನ

March 12, 20260 Views

ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್ ಲಾರಿ: ಯುವತಿ ದುರ್ಮರಣ

March 12, 20260 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.