
ಶಿವಮೊಗ್ಗದಲ್ಲಿ : ಮೊದಲ ಕ್ರೇನಿಯೊಸಿ ನೋಸ್ಟೊಸಿಸ್ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿ ಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರ ವಾದ ಶಸ್ತ್ರಚಿಕಿತ್ಸೆ, ಈ ಸರ್ಜರಿ ಗೆ ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಮಕ್ಕಳ ಅರವಳಿಕೆ ತಜ್ಞ ವೈದ್ಯರಿರಬೇಕು, ಮಕ್ಕಳ ಐ.ಸಿ.ಯು ವ್ಯವಸ್ಥೆ ಇರಬೇಕು ಹಾಗಾಗಿ ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞ ವೈದ್ಯರ ತಂಡ ಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಸರ್ಜಿ ಆಸ್ಪತ್ರೆಯಲ್ಲಿ ಯಶಸ್ವಿ ಯಾಗಿ ನಡೆಸಲಾಯಿತು ಎಂದು ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ.ಹರೀಶ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕ್ರೇನಿಯೊಸಿನೋಸ್ಟೊಸಿಸ್ ಎಂಬ ಅಪರೂಪದ ಖಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ ೯ ತಿಂಗಳ ಮಗುವಿನ ತಲೆ ಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರಿಪಡಿಸಿದ್ದಾರೆ. ತಲೆಬುರುಡೆಯ ಮೂಳೆಗಳ ಮಧ್ಯೆ ಸೂಚರ್ಸ್ (ಬಿರುಕುಗಳು) ಇರುತ್ತದೆ, ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಆ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ ಸರಿಯಾಗಿ ಬೆಳವಣಿಗೆ ಆಗುವುದಿಲ್ಲ ಇದನ್ನೇ ಕ್ರೇನಿಯೊಸಿನೋಸ್ಟೊಸಿಸ್ ಎಂದು ಕರೆಯಲಾಗುತ್ತದೆ.
ಕ್ರೇನಿಯೊಸಿನೋಸ್ಟೊಸಿಸ್ ನಿಂದ ಮಗುವಿನ ತಲೆಬುರುಡೆ ವಿರೂಪವಾಗಿ ರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿ ಹೋಗಬಹುದು, ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಅಥವಾ ಜೀವಕ್ಕೂ ಅಪಾಯವಾಗಬಹುದು ಹಾಗಾಗಿ ಈ ಶಸ್ತ್ರಚಿಕಿತ್ಸೆಯಲ್ಲಿ ಮೆದುಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮೆದುಳಿನ ಚಿಪ್ಪನ್ನು ಬೇರ್ಪಡಿಸಿ ಕೊಟ್ಟಿದ್ದಾರೆ. ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ಚೇತನ್ ಕುಮಾರ್ ನವಿಲೆಹಾಳ್ ಅವರು ಆ ತಲೆ ಬುರು ಡೆಯ ಚಿಪ್ಪಿನ ಆಕಾರವನ್ನು ಬದಲಾಯಿಸಿ ಸರಿಯಾದ ಆಕಾರಕ್ಕೆ ಬರುವಂತೆ ಸರಿಪಡಿಸಿ ಅಳವಡಿಸಿದ್ದಾರೆ. ಮಕ್ಕಳ ಅರವಳಿಕೆ ತಜ್ಞ ವೈದ್ಯರಾ ದ ಡಾ.ಅರ್ಜುನ್ ಭಾಗವತ್ ಮಗುವಿಗೆ ಅನೆಸ್ತೇಶಿಯಾ ನೀಡಿ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದರು.
ಮಗುವಿಗೆ ೮ ತಿಂಗಳು ಇರಬೇಕಾದರೆ ಪೋಷಕರು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಮಕ್ಕಳ ತಜ್ಞ ವೈದ್ಯರಾದ ಡಾ.ಕಾವ್ಯ ಅವರ ಬಳಿ ತೋರಿಸಿದ್ದಾರೆ, ಈ ಸಂದರ್ಭದಲ್ಲಿ ಸಿ.ಟಿ ಸ್ಕ್ಯಾನ್ ಮಾಡಿಸಲಾಗಿರು ತ್ತದೆ, ಈ ಸಿ.ಟಿ ಸ್ಕ್ಯಾನ್‌ನಲ್ಲಿ ಮಗುವಿಗೆ ಕ್ರೇನಿಯೊ ಸಿನೋಸ್ಟೊಸಿಸ್ ಇರುವುದು ದೃಢಪಟ್ಟಿರುತ್ತದೆ.

ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಗುವಿನ ಪೋಷಕರಿಗೆ ವಿವರಿಸಿದಾಗ ಅವರು ಕೂಡ ದೃಢ ಮನಸ್ಸಿನಿಂದ ಈ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ, ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿದೆ, ಮಗು ಕೂಡಾ ಆರೋಗ್ಯವಾಗಿದ್ದಾರೆ.
ಸಂದರ್ಭದಲ್ಲಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯ ರಾದ ಡಾ. ಚೇತನ್ ಕುಮಾರ್ ನವಿಲೆಹಾಳ್ ಅವರು, ಮಕ್ಕಳ ಅರವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಅವರು, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞವೈದ್ಯರಾದ ಡಾ.ಪ್ರಶಾಂತ್ ಶ್ರೀಪುರಂ ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವಿಜ ಯ ಕುಮಾರ ಮಾಯೆರ ಉಪಸ್ಥಿತರಿದ್ದರು.