ಶಿವಮೊಗ್ಗ : ಮನೆಯ ಬಾತ್ ರೂಂ ನಲ್ಲಿ ಹೆಬ್ಬಾವುವೊಂದು ಕಾಣಿಸಿಕೊಂಡು ಮನೆಯವರಿಗೆ ಭಯ ಹುಟ್ಟಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ನಗರದ ಗೋಪಾಳದ ತುಳಸಿ ಬಡಾವಣೆಯ ವಿನಯ್ ಎಂಬುವರ ಮನೆಯ ಬಾತ್ ರೂಂ ನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಇದನ್ನ ಕಂಡ ಮನೆಯವರು ಶಾಕ್ ಆಗಿದ್ದಾರೆ. ವಿನಯ್ ಮನೆಯಲ್ಲಿ ಕಳೆದ ರಾತ್ರಿ ಏಕಾಏಕಿ ಹೆಬ್ಬಾವು ಕಾಣಿಸಿಕೊಂಡಿದೆ. ಮನೆಯೊಳಗೆ ಬಂದ ಹೆಬ್ಬಾವು ಬಾತ್ ರೂಂ ಕಾಣಿಸಿಕೊಂಡಿದೆ.
ಕೂಡಲೇ ಉರಗ ತಜ್ಞ ಸ್ನೇಕ್ ಕಿರಣ್ ಗೆ ಮನೆಯವರು ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹೆಬ್ಬಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇದರಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.