ಪಾಲಿಕೆ ವೈಫಲ್ಯ ಖಂಡಿಸಿ 3ಕ್ಕೆ ಪ್ರತಿಭಟನೆ
ಶಿವಮೊಗ್ಗ : ಮಹಾನಗರ ಪಾಲಿಕೆಯ ವೈಫಲ್ಯತೆ ಯನ್ನ ಖಂಡಿಸಿ ರಾಷ್ಟ್ರಭಕ್ತರ ಬಳಗ ಜ.೩ ರಂದು ರಾಮಣ್ಣ ಶ್ರೇಷ್ಠಿಪಾರ್ಕ್ ನಿಂದ ಪಾಲಿಕೆಯ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲು ತೀರ್ಮಾ ನಿಸಲಾಗಿದೆ ಎಂದು ರಾಷ್ಟ್ರ ಭಕ್ತ ಬಳಗ ಮುಖಂಡ ಕೆ.ಈ.ಕಾಂತೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದನಗರದಲ್ಲಿರುವ ಸವಾರಲೈನ್ ರಸ್ತೆ, ವಿನೋಬ ನಗರ, ಬಹುಮಹಡಿ ಕಟ್ಟಡಗಳ ಮಳಿಗೆಗಳು ಮಹಾನಗರ ಪಾಲಿಕೆಗೆ ಸೇರಿದ್ದು ಮಳಿಗೆ ಹಂಚಿಕೆ ಸರಿಯಾಗಿ ಆಗಿಲ್ಲ. ಡಿಸಿ ಕಚೇರಿ ಎದುರಿನ ಆಟದ ಮೈದಾನಕ್ಕೆ ನ್ಯಾಯಾಲ ಯ ಸೂಕ್ತ ವರದಿ ನೀಡುವಂತೆ ಕೇಳಿದರೂ ಪಾಲಿಕೆ ನ್ಯಾಯಾಲ ಯದ ಆದೇಶವನ್ನೇ ಪಾಲಿಸಿಲ್ಲ. ಗೋವಿಂದಾಪುರ ಮತ್ತು ಗೋಪಿಶೆಟ್ಟಿ ಕೊಪ್ಪದಲ್ಲಿರುವ ಆಶ್ರಯ ಮನೆಗಳನ್ನ ಹಂಚಿಕೆ ಮಾಡಿಲ್ಲ. ರೋಟರಿ ಚಿತಾಗಾರದಲ್ಲಿ ದುರಸ್ತಿಕಾರ್ಯ ವಾಗಿಲ್ಲ. ಕೊಳಚೆ ಪ್ರದೇಶದ ನಿವಾಸಿಗೆ ಹಕ್ಕುಪತ್ರ ನೀಡದೆ ಹಿನ್ನಲೆಯಲ್ಲಿ ಜನವರಿ ೩ ರವರೆಗೆ ರಾಷ್ಟ್ರಭಕ್ತರ ಬಳಗ ಪಾಲಿಕೆಯ ಬಗ್ಗೆ ತೀರ್ಮಾನವನ್ನ ಕಾಯಲಿದೆ. ಇ-ಸ್ವತ್ತಿನಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನ ನಿಯಂತ್ರಿಸಬೇ ಕು. ಗುಂಡಿ ಬಿದ್ದಿರುವ ರಸ್ತೆಯನ್ನ ದುರ ಸ್ಥಿಪಡಿಸಬೇಕು. ೨೪/೭ ಕುಡಿಯು ವ ನೀರಿನ ಯೋಜನೆಯನ್ನ ಸೂಕ್ತವಾಗಿ ಜಾರಿಗೊಳಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನ ಜನವರಿ ೩ ರ ಒಳಗೆ ಆಗದಿದ್ದರೆ ಪಾಲಿಕೆ ವಿರುದ್ಧ ಪ್ರತಿಭಟಿಸಲಾಗುವುದು ಎಂದರು.
ದ್ವೇಷ ಭಾಷಣ ಅಪರಾದ ವಿಧೇಯಕ ಮಂಡನೆಗೆ ಬಿಜೆಪಿ ವಿರೋಧವೇಕೆ…?
ಶಿವಮೊಗ್ಗ : ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ವಿಧೇಯಕ ಬೆಳಗಾವಿ ಸದನದಲ್ಲಿ ಕಾಂಗ್ರೆಸ್ ಮಂಡನೆ ಮಾಡಿದೆ. ದ್ವೇಷ ಮಾಡಲು ಅನೇಕ ಕಾರಣ ಸಿಗಲಿದೆ. ಪ್ರೀತಿ ಮಾಡಲು ಕಾರಣ ಬೇಕಾಗಿಲ್ಲ. ಹಾಗಾಗಿ ದ್ವೇಷ ಭಾಷಣ ವಿಧೇಕ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ನ ಹೆಚ್.ಸಿ.ಯೋಗೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮಾಡಿಕೊಂಡು ಬಂದ ರಿಗೆ ಇದು ಸಹಿಸಲಾಗುತ್ತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟಿಸಿ ಗೌವ ರ್ನರ್ಗೆ ಒತ್ತಾಯ ಮಾಡಿದ್ದರು. ಅಂದು ಚೆನ್ನಬಸಪ್ಪ ಅವರು ಸಿದ್ದರಾಮಯ್ಯನವರ ಕೈ ಕಡಿಯು ವುದಾಗಿ ಹೇಳಿದ್ದರು.
ಈಶ್ವರಪ್ಪನ ವರು ಇದರಿಂದ ಹೊರತಾಗಿಲ್ಲ. ೨೫ ವರ್ಷ ಈಶ್ವರಪ್ಪ ಶಾಸಕರಾಗಿ ದ್ದಾರೆ. ನಗರವನ್ನ ಅಭಿವೃದ್ಧಿ ಮಾಡಲಿಲ್ಲ. ದ್ವೇಷವನ್ನೇ ಬಿತ್ತುಕೊಂ ಡು ಬಂದಿದ್ದರು ಎಂದು ದೂರಿದರು.
ಈ ಕಾನೂನು ಬಿಜೆಪಿ ಮತ್ತು ಇತರೆಗೆ ಮಾತ್ರ ಸೀಮಿತವಾಗೋ ದಿಲ್ಲ. ಸಮಸ್ತ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗುತ್ತಿದೆ. ಹಿಂದೂಸ್ತಾನ, ಮುಸ್ಲಿಂ, ಪಾಕಿಸ್ತಾನ್ ಬಗ್ಗೆ ಮಾತನಾಡುತ್ತಾರೆ ವಿನಃ ಬೇರೆ ಅಭಿವೃದ್ಧಿ ಮಾಡಲಿಲ್ಲ ಬಿಜೆಪಿ. ಒಂದು ಎಂದು ಕರೆದುಕೊಂಡು ಹೋಗಿಲ್ಲ.
ನಮ್ಮ ಪಕ್ಷದ ಕಚೇರಿಯಲ್ಲಿ ದ್ವೇಷ ಭಾಷಣ ಮಾಡಲಿಲ್ಲ. ಆದರೆ ವಿರೋಧ ಪಕ್ಷದ ದ್ವೇಷ ಭಾಷಣ ಮಾಡಿದ್ದಾರೆ. ಆದುದರಿಂದ ಭಯದಿಂದ ವಿಧೇಯಕ ಬೇಡ ಎನ್ನುತ್ತಾರೆ ಎಂದರು. ಬಿಜೆಪಿ ನಾಯಕರಿಗೆ ಸೀಮಿತವಾದ ಜೈಲು ನಿರ್ಮಿಸಬೇಕಿ ದೆ. ಆರ್ಎಂಎಲ್ ನಗರದ ಪ್ರಕರಣದಲ್ಲಿ ಶಾಸಕರು ಹೇಗೆ ನಡೆದುಕೊಂಡರು. ಸೀಗಹಟ್ಟಿಯ ದೇವಸ್ಥಾನದಲ್ಲಿ ಅನ್ಯ ಕೋಮಿನವರು ಮುರಿದಿದ್ದಾರೆ ಎಂದು ಗಲಭೆನಡೆ ಸಲು ಮುಂದಾಗಿದ್ದು ಎಲ್ಲವೂ ಬಿಜೆಪಿಯ ದ್ವೇಷದ ಕಾರಣವಾಗಿದೆ. ಇದನ್ನೆಲ್ಲ ಬಿಟ್ಟು ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದರು.


