ಸೆ.೨೫ ರಂದು ರೈತ ದಸರಾ
ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾ ೨೦೨೫ ರ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಸೆ.೨೫ ರಂದು ನಗರದ ಕುವೆಂಪು ರಂಗಮಂದಿರ ರೈತ ದಸರಾ ಕಾರ್ಯಕ್ರಮವನ್ನು ಆಯೇಜಿಸಲಾಗಿದೆ.ಬೆಳಿಗ್ಗೆ ೯ ಗಂಟೆಗೆ ಬಿ.ಹೆಚ್ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಜಾಥ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಶ್ರೀಮತಿ ಕಮಲಮ್ಮ ಹಾಗೂ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಈರಪ್ಪ ನಾಯ್ಕ ಉದ್ಘಾಟನೆ ನೆರವೇರಿಸುವರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಗೌರವ ಉಪಸ್ಥಿತಿರಾಗಿ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವರು.
ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಪ್ರಾಣಿಗಳ ವಿನಿಮಯ ಕಾರ್ಯಕ್ರಮ
ಶಿವಮೊಗ್ಗ : ದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದವರಿಂದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ, ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟ್ರ ಮತ್ತು ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕಿದ್ದು ಈ ಕಾರ್ಯಕ್ರಮ ಸೆ. ೨೫ ರಿಂದ ಅ.೦೨ರವರೆಗೆ ನಡೆಯಲಿದೆ.
ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ದಿಂದ ಸಿದ್ದಾರ್ಥ ಗಾರ್ಡನ್ ಮತ್ತು ಝೂ ಮುನ್ಸಿಪಲ್ ಕಾರ್ಪೋರೇಷನ್, ಔರಂಗಾಬಾದ್- ಮಹಾರಾಷ್ಟ್ರಕ್ಕೆ ಕರಡಿ (Sloth bear) -2, ಸಿಂಹ (Asiatic Lion)-2 ಹಾಗೂ ನರಿ (Golden Jackal) -2 ಕಳುಹಿಸುತ್ತಿದ್ದು ಅಲ್ಲಿಂದ ಹುಲಿ(Royal Bengal Tiger) -2 ಬಿಳಿ ಹುಲಿ (White Tiger)-1 ತರಿಸಲಾಗುತ್ತಿದೆ. ಹಾಗೆಯೇ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ದಿಂದ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಮುನ್ಸಿಪಲ್ ಕಾರ್ಪೋರೇಷನ್, ಇಂದೋರ್‌ಗೆ ಕಾಡುಕೋಣ (Indian Gaur) -4,, ಆಸ್ಟ್ರೀಚ್ (Ostrich) 4 ಕಳುಹಿಸಲಾಗುತ್ತಿದ್ದು ಅಲ್ಲಿಂದ ಸಿಂಹ (Asiatic Lion)-2, ಹುಲಿ(Royal Bengal Tiger)-1 ತರಿಸಲಾಗುತ್ತಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
