ಶಿವಮೊಗ್ಗ : ಮೆಗ್ಗಾ ನ್ ಆಸ್ಪತ್ರೆಯ ಆವರಣ ದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುರಹೊನ್ನೆಯ ನಿವಾಸಿ ಆಕಾಶ್ (೨೮) ನೇಣಿಗೆ ಶರಣಾಗಿದ್ದಾನೆ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ಒಪಿಡಿಗೆ ಅಡ್ಮಿಷನ್ ಪತ್ರ ಪಡೆಯುವ ಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿಗೆ ದಾರಿ ಎಂಬ ನಾಮಫಲಕಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಆಸ್ಪತ್ರೆ ಮುಂಭಾಗ ಈತ ನೇಣು ಬಿಗಿದುಕೊಳ್ಳುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ವ್ಯಸನಿಯಾಗಿದ್ದ ಆಕಾಶ್ ಮೆಗ್ಗಾನ್ ನಿಂದ ೩-೩೦ ಕ್ಕೆ ಹೊರಹೋಗಿ ಆಟೋದವರಿಗೆ ಹೊಳೆ ಬಸ್ ನಿಲ್ದಾಣಕ್ಕೆ ಬಿಡಿ ಎಂದು ಕೇಳಿದ್ದಾನೆ. ೭೦ ರೂ ಬಾಡಿಗೆ ಆಗುತ್ತೆ ಎಂದಿದ್ದಾರೆ. ನಿಮಗೆ ಯಾಕೆ ೭೦ ರೂ. ಕೊಡಬೇಕು ಎಂದು ಹೇಳಿ ನಾಮಫಲಕಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಈ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು ಅದು ತಡವಾಗಿ ಬೆಳಕಿಗೆ ಬಂದಿದೆ.
Subscribe to Updates
Get the latest creative news from FooBar about art, design and business.