
ಶಿವಮೊಗ್ಗ : ಸೇನೆ ಹಿಂದೆ ದೇಶ ಇರುತ್ತದೆ ಅಲ್ಲಿ ಜಯ ಸಿಗಲಿದೆ. ಆಪರೇಷನ್ ಸಿಂಧೂ ರ ಯಶಸ್ವಿಯಾಗಿದ್ದೆ ಅದಕ್ಕೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮ ಶೇಖರ್ ರಾಜು ತಿಳಿಸಿದರು.

ಅವರು ದಸರಾ ಕಾರ್ಯ ಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡುತ್ತಾ ೩೯ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮೊದಲ ಸೇವೆ ಲಡಾಕ್ ನಲ್ಲಿ ಆಗಿತ್ತು. ಅಲ್ಲಿ -೩೦ ಡಿಗ್ರಿ ಸೆಂಟಿ ಗ್ರೇಡ್ ನಲ್ಲಿ ಕೆಲಸ ಮಾಡಿರುವೆ. ಅದೇ ತರ +೫೦ ಡಿಗ್ರಿ ಸೆಂಟಿ ಗ್ರೇಡ್ ವಾತಾವರಣ ವನ್ನೂ ನಾನು ನೋಡಿದ್ದೇನೆ. ಇಂತಹ ಸಂಭ್ರಮದಲ್ಲಿಯೂ ಸೇನೆ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸುತ್ತದೆ ಎಂದರು.
ದಸರಾ ಎಂದರೆ ಧರ್ಮದ ಜಯ, ಮಹಿಷಾಸುರ ಮರ್ದ ನಿ, ರಾಮ ರಾವಣರ ಕಥೆ ಈ ದಸರಾ ವೇಳೆ ಪ್ರಸ್ತುತಗೊಳ್ಳಲಿದೆ. ಈ ಕಥೆಗಳ ಅರ್ಥ ಇಷ್ಟೆ, ಅನ್ಯಾ ಯ ಎಷ್ಟೇ ಬಲಿಷ್ಠವಾ ದರೂ ಸತ್ಯದ ಮುಂದೆ ಸೋಲಲೇಬೇಕು ಎಂದರು.
ಹಬ್ಬ ನಮ್ಮನ್ನ ಒಟ್ಟುಗೂಡಿ ಸುತ್ತದೆ. ಹಬ್ಬ ಪಾಠಕಲಿಸುವ ಶಾಲೆ ಅಲ್ಲಿ ಸಾಂಸ್ಖೃತಿಕ ಕಾರ್ಯಕ್ರಮಗಳು ಶಿಸ್ತು ಮತ್ತು ಮೌಲ್ಯ ಕಲಿಸುತ್ತದೆ. ದಸರಾ ಯಶಸ್ವಿಯಾಗಿ ನಡೆಯಲು ಸ್ವಚ್ಛತೆ ಮತ್ತು ಶ್ರದ್ಧೆ ಮುಖ್ಯ ಎಂದರು.ಸ್ಚಚ್ಛತೆ ದೇಶದಲ್ಲಿ ಬಹಳ ಸವಾಲಾಗಿದೆ. ದಸರಾ ಹೊರಗೆ ಮಾತ್ರ ಆಚರಣೆಯಾಗಬಾರದು ನಮ್ಮ ಒಳಗೂ ವಿಕಾಸವಾಗ ಬೇಕು. ಸತ್ಯ ಪ್ರಾಮಾಣಿಕತೆ ಸೇವಾ ಭಾವ ಇದು ಮುಖ್ಯ ವಾಗಿದೆ. ನಮ್ಮ ದೇಶ ಮುಂದು ಹೋಗಲು ಆಶಿಸುತ್ತೇನೆ. ನಿಮ್ಮ ಕರ್ತವ್ಯವನ್ನ ಸರಿಯಾಗಿ ಮಾಡಿ ಆಗ ದೇಶ ಸರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಪಾಲಿಕೆ ಅಯುಕ್ತ ಮಾಯಣ್ಣಗೌಡ ಹೆಚ್ ಸಿ ಯೋಗೀಶ್, ಜ್ಞಾನೇಶ್ವರ್, ಯಮುನಾ ರಂಗೇಗೌಡ ಮೊದ ಲಾದವರು ಉಪಸ್ಥಿತರಿದ್ದರು.