ಶಿವಮೊಗ್ಗ : ಕರ್ನಾಟಕ ರಾಜ್ಯ ಸಮುದಾಯ ಸಂಘಕ್ಕೆ ೫೦ ವರ್ಷಗಳು ಆದ ಹಿನ್ನೆಲೆಯಲ್ಲಿ ಶಿವಮೊಗ್ಗ ಸಮುದಾಯವು ರಾಜ್ಯಮಟ್ಟದ ಮೂರು ನಾಟಕವನ್ನು ಶಿವಮೊಗ್ಗದಲ್ಲಿ ಪ್ರದರ್ಶನ ಮಾಡುತ್ತಿದೆ ಎಂದು ಸಮುದಾಯದ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶ್ರೀಮತಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ವಿರುದ್ಧವಾಗಿ ೧೯೭೫ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಸಮುದಾಯ ಸಂಘವನ್ನು ಕಟ್ಟಿಕೊಂಡರು. ಹೆಗ್ಗೋಡಿನ ಪ್ರಸನ್ನ, ಕೀರಂ ನಾಗರಾಜ್, ಕೆ.ವಿ. ನಾರಾಯಣ್, ಶ್ರೀ ವೀರಣ್ಣ ಸಮುದಾಯಕ್ಕೆ ಚಾಲನೆಯನ್ನು ನೀಡಿದರು.ಸಂಸ ರ ನಾಟಕ ವಿಗಡ ವಿಕ್ರಮರಾಯ ವನ್ನು ಬಸವಲಿಂಗಯ್ಯ ನವರು ಹೊಸ ರೀತಿಯಲ್ಲಿ ಆಡಿಸಿ ಸಮುದಾಯಕ್ಕೆ ಚಾಲನೆ ಮೂಡಿಸಿದರು. ಸಮುದಾಯವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ತೊಡಗಿ ಬೀದಿ ನಾಟಕ ಮತ್ತು ವಿಚಾರ ಸಂಕಿರಣ ಜಾಥಾವನ್ನು ನಡೆಸಿ ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಿತು ಎಂದರು.
ಶಿವಮೊಗ್ಗದಲ್ಲಿ ೧೯೭೮ ರಲ್ಲಿ ಬೆಂಗಳೂರು ಸಮುದಾಯದಿಂದ ತರಬೇತಿ ಪಡೆದ ಕೆ ಲಕ್ಷ್ಮೀನಾರಾಯಣರಾವ್ ಸಮುದಾಯ ಸಂಘವನ್ನು ಸ್ಥಾಪಿಸಿದರು. ಬ್ರೇಕ್ಟ್ ನ ಗೆಲಿಲಿಯೋ ತಾಯಿ ಎಂ.ಎಸ್. ಸತ್ಯ ನಿರ್ದೇಶನದ ಕುರಿ ಹೊಸ ರೀತಿಯಲ್ಲಿ ಪ್ರದರ್ಶನ ಮಾಡಲಾಯಿತು.
ಈ ೩೦ ವರ್ಷಗಳಲ್ಲಿ ಸಮುದಾಯ ಚಿತ್ರಕಲಾ ಶಿಬಿರ, ಬೀದಿ ನಾಟಕ ಭಾಷಣ, ನಾಟಕ ಪ್ರದರ್ಶನ ಕವಿಗೋಷ್ಠಿ ವಿಚಾರ ಸಂಕಿರಣ ಜಾನಪದ ಉತ್ಸವ ಜಾಥಾ ಕಿರು ಹೊತ್ತಿಗೆಯ ಪ್ರಕಟಣೆ ಗೀತಾ ಗಾಯನ ಸ್ಪರ್ಧೆ ಹಮ್ಮಿಕೊಳ್ಳುತ್ತಾ ಬಂದಿದೆ. ೧೯೭೯ ಮತ್ತು ೧೯೮೧ ರಲ್ಲಿ ಜಾಥಾವನ್ನು ಕೈಗೊಂಡು ಪತ್ರ ಸಂಗಪ್ಪನ ಕೊಲೆ, ಬೆಳ್ಳಿ, ಅನುಸೂಯ ಬೀದಿ ನಾಟಕವನ್ನು ಮಾಡಲಾಗಿತ್ತು ಎಂದರು.
ನಿರ್ದೇಶಕ ಆಜಯ್ ಗೌಡ ನೀನಾಸಂ ಕಾಂತೇಶ್ ಕದರಮಂಡಲಗಿ, ಸತೀಶ್ ಸಾಸ್ತೆಹಳ್ಳಿ ಸಮುದಾಯಕ್ಕಾಗಿ ನಾಟಕವನ್ನು ನಿರ್ದೇಶನ ಮಾಡಿದರು ರಾಯಚೂರಿನ ರೈತ ಮತ್ತು ಕೂಲಿಯವರ ಹೋರಾಟದಲ್ಲಿ ಸಮುದಾಯ ಶಿವಮೊಗ್ಗದ ಪರವಾಗಿ ಕೆ ಲಕ್ಷ್ಮೀನಾರಾಯಣ್ ರಾವ್ ಮತ್ತು ಡಾ. ಕೆ ಜಿ ವೆಂಕಟೇಶ್ ಭಾಗವಹಿಸಿದ್ದು ಕಿರು ನಾಟಕ ತರಬೇತಿ ಪಡೆದು ಅದನ್ನು ಶಿವಮೊಗ್ಗದಲ್ಲಿ ಜಾಥಾ ನಡೆಸುವ ಮೂಲಕ ಗ್ರಾಮಾಂತರದಲ್ಲಿ ಉರುಳು ನಾಟಕವನ್ನು ಯಶಸ್ವಿಯಾಗಿ ಮಾಡಲಾಗಿತ್ತು ಎಂದರು.
ನ.೦೭ರ ಶುಕ್ರವಾರ ಸಹ್ಯಾದ್ರಿ ಕಾಲೇಜಿನಲ್ಲಿ ರಂಗಭೂಮಿಯಲ್ಲಿ ಸಾಂಸ್ಕೃತಿಕ ಸಾಧ್ಯತೆಗಳು ಎನ್ನುವ ವಿಷಯವಾಗಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಮಾತನಾಡುತ್ತಾರೆ. ರಂಗಾಯಣದ ನಿರ್ದೇಶಕ ಪ್ರಸನ್ನ ಉಪಸ್ಥಿತಿ ಇರುತ್ತಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಡಾ ಕೆ.ವಿ ನಾಗರಾಜ ಮೂರ್ತಿ ಮಾಡಲಿದ್ದು ಅಧ್ಯಕ್ಷತೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಟಿ. ವಹಿಸಲಿದ್ದಾರೆ ಎಂದರು.
ಸಂಜೆ ೬ ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ ನಾಟಕ ಉದ್ಘಾಟನೆ ನೇರವೇರಿಸುವವರು. ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ, ಆಶಯ ನುಡಿ ಕೆ.ವಿ.ನಾಗರಾಜ್ ಮೂರ್ತಿ, ಮುಖ್ಯ ಅತಿಥಿಯಾಗಿ ಜನಾರ್ಧನ್, ಅಶೋಕ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲ ಸಂಧ್ಯಾ ಕಾವೇರಿ ಭಾಗವಹಿಸಲಿದ್ದಾರೆ. ನಂತರ ಬೆಂಗಳೂರು ನೆನಪು ತಂಡದಿಂದ ಪುನೀತ್ ಕರ್ತ ನಿರ್ದೇಶನದ ಮಾಯಾದ್ವೀಪ ನಾಟಕ ಪ್ರದರ್ಶನವಿದೆ ಎಂಧರು.
ನ.೮ರ ಶನಿವಾರ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶ್ರೀಮತಿ ಶೈಲಜಾ ಕೊಡಗು, ಡಾ.ಮೇಟಿ ಮಲ್ಲಿಕಾರ್ಜುನ್, ಎಸ್.ದೇವೇಂದ್ರ ಗೌಡ, ಕಾಂತೇಶ್ ಕದರಮಂಡಲಗಿ ಸನ್ಮಾನಿಸಿ ಗೌರವಿಸಲಾಗುವುದು. ನಂತರ ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ಶಿವಮೊಗ್ಗ ಸಮುದಾಯದ ನೀರೊಳಗಣ ಕಿಚ್ಚು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ನ.೯ರ ಭಾನುವಾರ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಜೆ ೫.೩೦ಕ್ಕೆ ನಡೆಯಲಿದ್ದು. ಸಮಾರೋಪ ಭಾಷಣ ಗೌರಿ ಚಂದ್ರಕೇಸರಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಮಂಜಪ್ಪ ಪಿ.ಎ. ಸಿ.ಕೆ.ಗುಂಡಣ್ಣ, ಶೇಷಾಚಲ ಎಸ್.ಕೆ. ಉಪಸ್ಥಿತಯಲ್ಲಿ ಸಂಜೆ ೬.೩೦ಕ್ಕೆ ಅಳ್ವಾಸ್ ರಂಗ ಶಿಕ್ಷಣ ಕೇಂದ್ರದ ಜೀವನ ರಾಮ್ ಸುಳ್ಯ ನಿರ್ದೇಶನದ ನಾಡೋಜ ಕಮಲಾಹಂಪನದ ಚಾರು ವಸಂತ ನಾಟಕ ನಡೆಯಲಿದೆ ಎಂದರು.
ಸಂದರ್ಭದಲ್ಲಿ ಕಾಂತೇಶ್ ಕದರಮಂಡಲಗಿ, ಸತೀಶ್ ಸಾಸ್ತೆಹಳ್ಳಿ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ನ.7 ರಿಂದ ಮೂರು ದಿನಗಳ ಕಾಲ ಸಮುದಾಯ ರಾಜ್ಯಮಟ್ಟದ ನಾಟಕೋತ್ಸವ
State-level drama festival
