ಶಿವಮೊಗ್ಗ : ಹಿಂದೂ ಸಮಾಜ ಛಿದ್ರ ಮಾಡುವ ಹುನ್ನಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಸಮೀಕ್ಷೆಯಿಂದ ಸಾಧುಸಂತರು ನಡುವೆ ಗೊಂದಲ ಸೃಷ್ಟಿ ಮಾಡಿ ಬಿರುಕು ಉಂಟು ಮಾಡುತ್ತಿದೆ ಇದರ ಶಾಪ ಸಿದ್ದರಾಮಯ್ಯನವರು ಅನುಭವಿಸಬೇಕಾಗುತ್ತದೆ ಎಂದರು.
ಈ ಸಮೀಕ್ಷೆ ಲಿಂಗಾಯತ ಸಮಾಜದಲ್ಲಿ ಬಿರುಕು ಉಂಟು ಮಾಡುತ್ತಿದೆ, ಕೆಲವು ಸ್ವಾಮೀಜಿ ಹಿಂದೂ ಎಂದು ಬರೆಯಿರಿ ಎಂದ್ರೆ ಕೆಲವು ವೀರಶೈವ ಮುಖಂಡರು ವೀರಶೈವ ಎಂದು ಧರ್ಮ ಕಾಲಂನಲ್ಲಿ ನಮೂದಿಸಿ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಈಶ್ವರ ಖಂಡ್ರೆ ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಹಿಂದೂ ಎಂದು ನಮೂದಿಸಿ ಎನ್ನುತ್ತಾರೆ. ಮಹಾ ಸಭಾ ಲೆಟರ್‌ಹೆಡ್‌ನಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ ಎಂದು ನಮೂದಿಸಿ ಎಂದು ಹೇಳಿ ಸಹಿ ಮಾಡಿದ್ದಾರೆ ಇವರ ಈ ಗೊಂದಲ ನೀತಿ ಇವರನ್ನು ಸರ್ವನಾಶಕಕ್ಕೆ ತಲ್ಲುತ್ತದೆ ಎಂದರು.
ಸಮೀಕ್ಷೆ ವರದಿ ಬಿಡುಗಡೆಯಾದರೇ ರಾಜ್ಯ ಗಲಾಟೆ ಅಗುವಂತು ಸತ್ಯ. ನಮ್ಮ ಜಾತಿ ಜಾಸ್ತಿ, ನಿಮ್ಮ ಜಾತಿ ಕಮ್ಮಿಯಿದೆ ಎಂಬ ಗೊಂದಲ ಗಲಾಟ ಆರಂಭವಾಗುತ್ತದೆ ಎಂದು ಭವಿಷ್ಯ ನುಡಿದರು.
ಶೇಕಡಾ ೯೯% ಭಾಗ ಸಮೀಕ್ಷೆ ವರದಿ ಬಿಡುಗಡೆ ಆಗಲ್ಲ, ೪೨೦ ಕೋಟಿ ಅನವಶ್ಯಕ ದುಂದುವೆಚ್ಚ ಮಾಡಲಾಗುತ್ತಿದೆ ಎಂದರು.
ಹಾವನೂರು ವರದಿ ಯಾರೇ ಏನೂ ಖಂಡಿಸಿದರು ದೇವರಾಜ ಅರಸು ಬಿಡುಗಡೆ ಮಾಡಿದ್ದರು ಅಂತಹ ತಾಕತ್ತು ಇಲ್ಲಾ ಸಿದ್ದರಾಮಯ್ಯಗೆ ಇಲ್ಲವೆಂದರು.
ಈ ಸಮೀಕ್ಷೆಗೆ ವರದಿ ಬರುತ್ತಿದ್ದಂತೆಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಕಾಂತರಾಜ್ ವರದಿ ೧೦ ವರ್ಷವಾಯಿತು ಎಂದು ಬಿಡುಗಡೆ ಮಾಡಿಲ್ಲ, ತಡ ಮಾಡಿದ್ದೇ ಇವರೇ ಈಗ ತಡವಾಯಿತು ಎನ್ನುವುದು ಇವರೇ ಎಂತಹ ಮೂರ್ಖತನ ನೋಡಿ ಎಂದರು.
ಸಮೀಕ್ಷೆ ಪೂರ್ಣ ಆಗುತ್ತಾ ಬಿಡುತ್ತೋ ಗೊತ್ತಿಲ್ಲ ಆದರೇ ಬಿಡುಗಡೆಯಂತು ಆಗಲ್ಲ, ಎಲ್ಲಾರೂ ಧರ್ಮದಲ್ಲಿ ಹಿಂದೂ ಎಂದು ಬರೆಸಿ ಎಂದು ಹೇಳಿ ಜಾತಿ ಹೆಸರಲ್ಲಿ ನಿಮ್ಮ ಜಾತಿ ನಮೂದಿಸಿ ಎಂದು ಮನವಿ ಮಾಡಿದರು.
Subscribe to Updates
Get the latest creative news from FooBar about art, design and business.
