ಶಿವಮೊಗ್ಗ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷಯನ್ನು ಸೆ.೨೨ ರಿಂದ ಅ.೭ ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಮನೆ-ಮನೆಗೆ ಬೇಟಿ ಸಮೀಕ್ಷಯನ್ನು ಹಮ್ಮಿಕೊಂಡಿ ರುವುದು ಸಂತಸ ವಿಚಾರ ಹಾಗೂ ಈ ಸಮೀಕ್ಷೆ ಅದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮ ಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದನೆಗಳು ಎಂದು ಉಪ್ಪಾ ಸಮಾಜದ ಜಿಲ್ಲಾಧ್ಯ ಕ್ಷರಾ ಎಸ್.ಟಿ.ಹಾಲಪ್ಪ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಸಮೀಕ್ಷೆಯಿಂದ ಹಿಂದೂಳಿದ ಜಾತಿಗಳಿಗೆ ಸಿಗಬೇ ಕಾದ ಸರ್ಕಾರವ ಸೌವಲತ್ತುಗಳು ಸರಿಯಾಗಿ ದೊರಕಲು ಸಹಕಾರಿ ಯಾಗಿಲಿದೆ, ಶೈಕ್ಷಣಿಕ, ಆರ್ಥಿಕ ಔಧ್ಯೋಗಿಕ, ರಾಜಕೀಯ ಬೆಳವಣಿಗೆ ಇದು ಸಹಕಾರಿಯಾಗಿಲಿದೆ ಎಂದರು.
ನಮ್ಮ ಉಪ್ಪಾರ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಉಪ್ಪಾರ, ಉಪಜಾತಿ ಕಾಲಂನಲ್ಲಿ ಉಪ್ಪಾರ, ಕೋಡ್ ಸಂಖ್ಯೆ ಎ-೧೪೬೫ ಎಂದು ನಮೂದಿಸಿ ಎಂದು ಮನವಿ ಮಾಡಿದರು.
ಇದರಿಂದ ನಮ್ಮ ಜಾತಿಗೆ ಸಿಗಬೇಕಾದ ಮಾನ್ಯತೆಗಳು ಹಾಗೂ ಸೌವಲತ್ತು ಸರಿಯಾಗಿ ಸಿಗಲು ಸಹಕಾರಿಯಾಗಲಿದೆ ಎಂದರು.
ನಮ್ಮ ಸಮುದಾಯ ಶೈಕ್ಷಣಿಕ ಹಾಗೂ ಆರ್ಥಿಕ ಮತ್ತು ರಾಜಕೀಯ ಪ್ರಗತಿಗೂ ಸಹಕಾರಿಯಾಗಲಿದೆ ಎಂದರು.
ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಾಗರಾಜ್ ಕಂಕಾರಿ, ಹನುಮಂತಪ್ಪ, ರೇಣು ಕೇಶ್ ಮುಂತಾದವರು ಉಪಸ್ಥಿತರಿ ದ್ದರು.
