ಶಿವಮೊಗ್ಗ : ನಗರದ ಎಸ್‌ಬಿಐ ನಿವೃತ ನೌಕರ ತೆನ್ನರಸು ಮತ್ತು ಕಲಾವತಿಯವರ ಮಗಳಾದ ಪ್ರೀತಿ ನ.16ಕ್ಕೆ ಭರತನಾಟ್ಯ ರಂಗಪ್ರವೇಶ ಕುವೆಂಪು ರಂಗಮಂದಿರದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ ಎಂದು ಎಸ್.ಕೇಶವಕುಮಾರ್ ಪಿಳ್ಳೈ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ನೃತ್ಯ ಗುರು ರಾಧಾಕೃಷ್ಣ ನೃತ್ಯ ನಿಕೇತನದ ವೀಣಾ ಎಂ.ಸಾಮಗ ವಸಹಿಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್, ಡಾ.ಜಿ.ಎಸ್.ಸಂತೋಷ್ ಭಾಗವಹಿಸಲಿದ್ದಾರೆಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಕಾರ್ಯಕ್ರಮ ಅಂದು ಸಂಜೆ 4 ಗಂಟೆಗೆ ನೃತ್ಯ ಕಲಾತಾರೆಯ ಮೆರವಣಿಗೆ ಮಹಾವೀರ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ನಡೆಯಲಿದೆ. ಸಂಜೆ.4.45ಕ್ಕೆ ವಿಘ್ನೇಶ್ವರಸ್ತುತಿ ಮತ್ತು ನಟರಾಜ ಪೂಜೆ, ಸಂಜೆ 5 ಗಂಟೆಗೆ ರಂಗಪ್ರವೇಶ ಪೂವಾರ್ಧ, ಸಂಜೆ.7.30ಕ್ಕೆ ಗುರುವಂದನಾ ಕಾರ್ಯಕ್ರಮ, ಸಂಜೆ 8 ಕ್ಕೆ ರಂಗಪ್ರವೇಶ ಉತ್ತರಾರ್ಧ ನಡೆಯಲಿ ಎಂದರು.
