ಶಿವಮೊಗ್ಗ: ಸೆ. 28ರ ಬೆಳಗ್ಗೆ 10 ಗಂಟೆಗೆ ಗಾರ್ಡನ್ ಏರಿಯಾದ ಮೂರನೇ ತಿರುವಿನಲ್ಲಿ ಎಸ್.ಆರ್. ಆರ್ಕೆಡ್‌ನ ಸಂಘದ ಆವರಣದಲ್ಲಿ ಮಲೆನಾಡು ಪೈಂಟರ‍್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಉದ್ಘಾಟನಾ ಸಮಾ ರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಗೌರವಾಧ್ಯಕ್ಷರಾದ ಎಂ.ಆರ್. ಮುರಳೀಧರ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪೈಂಟರ‍್ಸ್ ಸಂಘದ ಸುಮಾರು ೧೫ ವರ್ಷಗಳಿಂದ ಕಾರ್ಯನಿರ್ವಹಿ ಸುತ್ತ ಬಂದಿದೆ.
ಅದರಂತೆ ಪೈಂಟರ‍್ಸ್‌ಗಳಿಗೆ ಯಾವುದೇ ಸಂಘಟನೆ ಇಲ್ಲದೆ, ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಆರೋಗ್ಯ ಸಮಸ್ಯೆಯಾದ ಆಸ್ಪತ್ರೆಗಳಲ್ಲಿ ಹಣ ಪಾವತಿ ಮಾಡಲು ಸಾದ್ಯವಾಗದೆ ಸಮಸ್ಯೆ ಎದುರಿಸಿದ್ದಾರೆ.
ಆ ಸಮಯದಲ್ಲಿ ನಮ್ಮ ಪೈಂಟರ‍್ಸ್ ಸಂಘವೇ ಖುದ್ದಾಗಿ ಸಹಕಾರ ನೀಡಿತ್ತು. ಆದ್ದರಿಂದ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬೇಕಾ ದರೇ ಸಂಘಟನೆ ಮತ್ತು ಸೊಸೈಟಿ ಮುಖ್ಯ ಎಂದು ಬಾವಿಸಿ ಸುಮಾರು ೪ ತಿಂಗಳ ಹಿಂದೆ ಈ ಸೊಸೈಟಿ ಯನ್ನು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಮ್ಮತ ತೀರ್ಮಾನ ಕೈಗೊಂಡು ಮಲೆನಾಡು ಪೈಂಟರ‍್ಸ್ ಕ್ರೆಡಿಟ್-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸ್ಥಾಪಿಸಿದ್ದೇವೆ ಇದರಲ್ಲಿ ಈಗ 700 ಸದಸ್ಯರು ಇದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಸೊಸೈಟಿ ಸದಸ್ಯರಿಗೆ ನಮ್ಮ ಮೊದಲ ಆದ್ಯತೆ ಆರೋಗ್ಯ ಕಾರ್ಡ್ ಎಂದರೇ ಯಶಸ್ವಿ ಕಾರ್ಡ್ ನೀಡಬೇಕು ಎನ್ನುವುದು, ಹಾಗೇ ಹಣಕಾಸಿನ ನೆರವು ನೀಡಲಾಗು ವುದು ಎಂದರು.
ಮುಂದಿನ ದಿನಗಳಲ್ಲಿ ಪೈಂಟರ‍್ಸ್‌ಗಳ ಮೇಲೆ ಬರುತ್ತಿರುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸೊಸೈಟಿಯಿಂದಲೇ ಗುರುತಿನ ಚೀಟಿ ವಿತರಣೆ ಮತ್ತು ಪೈಂಟರ‍್ಸ್‌ಗಲು ಹೇಗೇ ಕಾರ್ಯ ನಿರ್ವಹಿಸಬೇಕು ಎಂಬುವುದರ ಬಗ್ಗೆ ಸೂಚಿಸುವಂತೆ ಕೆಲಸ ಕೂಡ ನಮ್ಮ ಸೊಸೈಟಿಯಿಂದ ಮಾಡಲಾ ಗುವುದು ಎಂದರು.
ಪೈಂಟರ‍್ಸ್ ಕಾರ್ಯಕ್ಕೆ ಬರುವ ವರು ಸಾಮಾನ್ಯವಾಗಿ ವಿದ್ಯೆಯಿಂದ ವಂಚಿತರಾದಂತ ವರೇ, ಆಗಾಗಿ ಅವರು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸೊಸೈಟಿ ಯಿಂದ ಪ್ರೋತ್ಸಾಹಿಸಿ ಕೆಲಸ ಮಾಡಲಾಗುವುದು, ಸಂಬಳ ಕೂಡ ಕಡಿಮೆಯಿದೆ ಅದು ಕೂಡ ಮುಂದಿ ನ ಹೆಚ್ಚು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಸೊಸೈಟಿ ಉದ್ಘಾಟನೆ ಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ನೆರವೇರಿಸುವರು. ಕಚೇರಿ ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೆರವೇರಿಸುವವರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಶಾರದಾ ಪೂರ್ಯಾನಾಯ್ಕ್, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಕಾರ್ಮಿಕ ಅಧಿಕಾರಿ ಗಳಾದ ಎಂ.ಪಿ. ವೇಣುಗೋ ಪಾಲ್, ಎಂ. ಕೃಷ್ಣ, ಸುಖಿತಾ, ಹಾಗೂ ನಿಗಮ ಮಂಡಳಿ ಅಧ್ಯಕ್ಷರು, ಸೊಸೈಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದರು.
ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್.ಉದಯ್ ಕುಮಾರ್, ಖಜಾಂಚಿ ಮಹದೇವ ಪಿ. ಗೌಡ. ನಿರ್ದೇಶಕರಾದ ಜೆ.ಕೃಷ್ಣ, ಹೆಚ್.ವಿ. ಕೃಷ್ಣಪ್ಪ, ಜಿ. ರಾಜಶೇಖರ್, ಡಿ. ಶ್ಯಾಮ್, ರಾಮಚಂದ್ರ, ಶಂಕರ್. ಎಸ್., ಶ್ರೀಮತಿ ಶಿಲ್ಪಾ ಆರ್.ಎಂ., ಶಬ್ಬಿರ್ ಖಾನ್ ಉಪಸ್ಥಿತರಿದ್ದರು.
