Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»Home»ಕೇಂದ್ರ ವಿರೋಧವೇ ಕಾಂಗ್ರೆಸ್ ಸರ್ಕಾರದ ಏಕೈಕ ಅಜೆಂಡಾ : ಬಿ.ವೈ. ವಿಜಯೇಂದ್ರ
Home

ಕೇಂದ್ರ ವಿರೋಧವೇ ಕಾಂಗ್ರೆಸ್ ಸರ್ಕಾರದ ಏಕೈಕ ಅಜೆಂಡಾ : ಬಿ.ವೈ. ವಿಜಯೇಂದ್ರ

Opposition is the only agenda of the Congress government
Raghu ShettyBy Raghu ShettyFebruary 2, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ: ಕೇಂದ್ರ ಹಣಕಾಸು ಸಚಿವರು ಮಂಡಿಸಿದ 9ನೇ ಬಜೆಟ್ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಹಾಗೂ ಸ್ವಾವಲಂಬಿ ಭಾರತದ ನಿರ್ಮಾಣದ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದು, ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಜನಪ್ರಿಯತೆಯ ಲೆಕ್ಕಾಚಾರಕ್ಕಲ್ಲ, ರಾಷ್ಟ್ರದ ದೀರ್ಘಕಾಲೀನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು. ಜಾಗತಿಕ ಆರ್ಥಿಕ ಅಸ್ಥಿರತೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಧೈರ್ಯಶಾಲಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ ಸೇರಿದಂತೆ ಎಲ್ಲ ವಲಯಗಳಿಗೂ ಸಮಾನ ಆದ್ಯತೆ ನೀಡಲಾಗಿದ್ದು, ಆರ್ಥಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿದೆ ಎಂದು ಹೇಳಿದರು.
ಹಿಂದಿನ ಆರ್ಥಿಕ ವರ್ಷದಲ್ಲಿ ಹಣಕಾಸು ಕೊರತೆಯನ್ನು 4.4 ಶೇಕಡಕ್ಕೆ ಇಳಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಅಲ್ಪ ಅನುದಾನ ನೀಡಲಾಗುತ್ತಿದ್ದರೆ, ಎನ್‌ಡಿಎ ಸರ್ಕಾರದ ಕಾಲದಲ್ಲಿ ರಸ್ತೆ, ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಇತಿಹಾಸದಲ್ಲೇ ಅತ್ಯಧಿಕ ವೆಚ್ಚ ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ದಿಕ್ಕಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆಹಾರ ಮತ್ತು ವಾಣಿಜ್ಯ ಮೀನುಗಾರಿಕೆಗೆ ಶೇ.6ರಷ್ಟು ಹೆಚ್ಚುವರಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.
ಯುವಕರು, ಬಡವರು, ರೈತರು ಮತ್ತು ಮಹಿಳೆಯರು ಎಂಬ ನಾಲ್ಕು ಪ್ರಮುಖ ವರ್ಗಗಳನ್ನು ಕೇಂದ್ರಬಿಂದುವಾಗಿ ಬಜೆಟ್ ರೂಪಿಸಲಾಗಿದೆ. ಮಹಿಳಾ ಉದ್ಯಮಶೀಲತೆಗೆ ‘ಶೀ ಮಾರ್ಟ್’ ಮೂಲಕ ಉತ್ತೇಜನ ನೀಡಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಚೆನ್ನೈ–ಬೆಂಗಳೂರು ಹಾಗೂ ಹೈದ್ರಾಬಾದ್–ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಗಳಿಗೂ ಬಜೆಟ್‌ನಲ್ಲಿ ಸ್ಪಷ್ಟ ಬೆಂಬಲ ನೀಡಲಾಗಿದೆ. ತೆಂಗು, ಮೀನುಗಾರಿಕೆ ಮತ್ತು ಶ್ರೀಗಂಧ ಬೆಳೆಗಾರರಿಗೂ ವಿಶೇಷ ನೆರವು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯೇಂದ್ರ, ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಲೇ ಬಂದಿದೆ. ರಾಜ್ಯದ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ವಿರುದ್ಧ ಬೊಟ್ಟು ತೋರಿಸುವುದೇ ಕಾಂಗ್ರೆಸ್ ಸರ್ಕಾರದ ನಿತ್ಯದ ಕೆಲಸವಾಗಿದೆ ಎಂದು ಆರೋಪಿಸಿದರು.
16ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಜಿಡಿಪಿಗೆ ಅನುಗುಣವಾಗಿ ಹೆಚ್ಚಿನ ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕರ್ನಾಟಕದ ಪಾಲು ಶೇ.3.65ರಿಂದ 4.13ಕ್ಕೆ ಹೆಚ್ಚಾಗಿದೆ. ಇದರಿಂದ ಪ್ರತಿವರ್ಷ 7,387 ಕೋಟಿ ರೂ. ಹೆಚ್ಚುವರಿ ಅನುದಾನ ಸಿಗಲಿದ್ದು, ಮುಂದಿನ ವರ್ಷಕ್ಕೆ ಒಟ್ಟು 63,050 ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗಲಿದೆ. ಆದರೂ ಸಿದ್ದರಾಮಯ್ಯ ಅವರು ವಾಸ್ತವವನ್ನು ಮರೆಮಾಚಿ ಜನರನ್ನು ತಪ್ಪು ದಾರಿಯಲ್ಲಿ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ವಿಭಜಕ ಮನಸ್ಥಿತಿಯಿಂದ ಹೊರಬರಬೇಕು. ವೀರಶೈವ–ಲಿಂಗಾಯಿತರನ್ನು ವಿಭಜಿಸಲು  ಮನಸ್ಥಿತಿಯೇ ಈಗ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ದಾಳಿ ಮಾಡುವ ಮಟ್ಟಕ್ಕೆ ತಲುಪಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾತುಗಳು ದೇಶದ ಏಕತೆಗೆ ಧಕ್ಕೆಯಾಗುತ್ತವೆ. ಇದು ರಾಜ್ಯಕ್ಕೂ ರಾಷ್ಟ್ರಕ್ಕೂ ಅಪಾಯಕಾರಿ ರಾಜಕಾರಣವಾಗಿದೆ ಎಂದು ವಿಜಯೇಂದ್ರ ಕಟುವಾಗಿ ಟೀಕಿಸಿದರು.
‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಘೋಷಣೆಯಡಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕೇವಲ ನಾಟಕವಾಗಿದ್ದು, ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ತೆರಿಗೆ ಗುರಿಯನ್ನು 40 ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅಬಕಾರಿ ಗುತ್ತಿಗೆದಾರರು ಇದೇ ಬೇಡಿಕೆಯನ್ನು ಮುಂದಿಟ್ಟು ವಿಧಾನಸೌಧ ಮುತ್ತಿಗೆ ಹಾಕಿದರೆ ಸರ್ಕಾರ ಏನು ಉತ್ತರ ನೀಡಲಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಅವ್ಯವಸ್ಥೆಯಿಂದ ಅಧಿಕಾರಿಗಳು ರಾತ್ರಿ 3 ಗಂಟೆಯವರೆಗೂ ಕೆಲಸ ಮಾಡುವಂತಾಗಿದೆ. ಇದು ಜನಪರ ಆಡಳಿತವಲ್ಲ, ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಅರಾಜಕ ಆಡಳಿತವಾಗಿದೆ ಎಂದು ಹೇಳಿದರು. ಈಶಾನ್ಯ ರಾಜ್ಯಗಳಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿರುವುದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇಂತಹ ದೃಢ ನಿರ್ಧಾರಗಳೇ ಇರಲಿಲ್ಲ ಎಂದು ಹೇಳಿದರು.
ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ವರೆಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮಹತ್ವದ ರಿಲೀಫ್ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೊಳಿಸಿದ್ದು, ಇದು ವಿಪಕ್ಷಗಳನ್ನು ಧಮನ ಮಾಡುವ ರಾಜಕೀಯ ಅಸ್ತ್ರವಾಗಿದೆ ಎಂದು ಆರೋಪಿಸಿದರು. ಬಾಂಗ್ಲಾದೇಶೀಯರ ಅಕ್ರಮ ವಾಸ ಕುರಿತು ಮಾತನಾಡಿದ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿರುವುದು ಮಾತಿನ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಕಿಡಿಕಾರಿದರು. ಅಕ್ರಮ ಗೋಸಾಗಾಣಿಕೆಗೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ನೀಡಲು ಸರ್ಕಾರ ಯತ್ನಿಸಿದ್ದನ್ನು ರಾಜ್ಯಪಾಲರು ತಡೆದಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.

ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ಒಬಿಸಿ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯಾ, ಮಾಜಿ ಶಾಸಕರುಗಳಾದ ಎಸ್.ರುದ್ರೇಗೌಡ್ರು, ಅಶೋಕ ನಾಯ್ಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಮಾಲತೇಶ್, ಒಬಿಸಿ ಜಿಲ್ಲಾಧ್ಯಕ್ಷರಾದ ಸುಧಾಕರ್, ಮಾಧ್ಯಮ ಪ್ರಮುಖ್ ಎಸ್.ಚಂದ್ರಶೇಖರ್, ಸಹ ಪ್ರಮುಖ್ ಮಂಜುನಾಥ್ ಎನ್ ಉಪಸ್ಥಿತರಿದ್ದರು

Shivamogga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026

ಆಗುಂಬೆ ಘಾಟ್ : ಡಿಪಿಆರ್ ಹಾಗೂ ಸುರಂಗ ಮಾರ್ಗ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಟೆಂಡರ್

February 10, 2026

ಕಾರಿನ ಮೇಲೆ ಹಾರಿದ ಕಾಡುಕೋಣ…

February 10, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,293 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026260 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025248 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025206 Views
Don't Miss
ಪ್ರಮುಖ ಸುದ್ದಿ

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

By Raghu ShettyFebruary 28, 20260

ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ…

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.