ಶಿವಮೊಗ್ಗ : 2025-26
ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು 165 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದುವರೆಗೆ ಮಹಾನಗರ ಪಾಲಿಕೆಗೆ ಯಾವುದೇ ಅನುದಾನ ಬಿಡುಗಡೆಯಾ ಗಿಲ್ಲ ಎಂದು ಪಾಲಿಕೆ ಆಯುಕ್ತ ಡಿ.ಸಿ. ಮಾಯಣ್ಣಗೌಡ ತಿಳಿಸಿದ್ದಾರೆ.
ಅವರು ಬುಧವಾರ 2025-26ನೇ ಸಾಲಿನ ಆಯ-ವ್ಯಯದ ಮೊದಲ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಭೆಯ ಆರಂಭದಲ್ಲಿ ಕಳೆದ ಸಾಲಿನ ಆಯವ್ಯಯ ಅನುಷ್ಟಾನದ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಅಧಿಕಾರಿಗಳು ಪಿಪಿಟಿ ಮೂಲಕ ವಿವರಿಸಲು ಮುಂದಾದಾಗ, ನಾಗರಿಕ ಹಿತರಕ್ಷಣಾ ಸಮಿತಿಗಳ ಒಕ್ಕೂಟದ ಪದಾಧಿಕಾರಿ ಗಳಾದ ಕೆ.ವಿ. ವಸಂತ್‌ಕು ಮಾರ್, ಡಾ. ಸತೀಶ್‌ಕು ಮಾರ್ ಶೆಟ್ಟಿ ಹಾಗೂ ಪರಿಸರ ರಮೇಶ್ ಅವರು ಅಂಕಿ ಅಂಶಗಳ ಮುದ್ರಿತ ಪ್ರತಿಯನ್ನು ಸಭೆಗೆ ಪೂರೈಸಿದ ಬಳಿಕವೇ ಚರ್ಚೆ ಮುಂದುವರಿಸಬೇಕು ಎಂದು ಪಟ್ಟು ಹಿಡಿದರು. ಪ್ರಮುಖ ಸಭೆಗಳಲ್ಲಿ ಸದಸ್ಯರಿಗೆ ಮುದ್ರಿತ ದಾಖಲೆ ನೀಡುವುದು ಕಡ್ಡಾಯವಾಗ ಬೇಕು ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಹಲವು ಯೋಜ ನೆಗಳಿಗೆ ಸರ್ಕಾರದಿಂದ ಇದುವರೆಗೆ ಒಂದು ನಯಾ ಪೈಸೆಯೂ ಬಿಡುಗಡೆಯಾ ಗಿಲ್ಲ. ಮಹಾತ್ಮಗಾಂಧಿ ನಗರ ಯೋಜನೆ 2ಕ್ಕೆ 120 ಕೋಟಿ ಹಾಗೂ ಎನ್‌ಜಿಟಿ ಕಾಮಗಾರಿಗಳಿಗೆ 40 ಕೋಟಿ ಮಂಜೂರಾತಿ ದೊರೆತಿದ್ದರೂ ಅನುದಾನ ಬಂದಿಲ್ಲ. ಹಣ ಬಿಡುಗಡೆಯಾದರೂ ಎನ್‌ಜಿಟಿ ಹಾಗೂ ಕೆಯುಐಡಿಎಫ್‌ಸಿ ಮೂಲಕವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಪಾಲಿಕೆ ವ್ಯಾಪ್ತಿಯ ನವುಲೆ, ತ್ಯಾವರೆಚಟ್ನಹಳ್ಳಿ, ಗೋಪಿಶೆಟ್ಟಿಕೊಪ್ಪ ಹಾಗೂ ಪುರಲೆ ಕೆರೆಗಳ ಅಭಿವೃದ್ಧಿಗೆ ೨೫ ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದು ಡಿಪಿಆರ್ ಹಂತದಲ್ಲಿದೆ. ಪಾರ್ಕ್ ಅಭಿವೃದ್ಧಿಗೆ ೫ ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ಇವುಗಳಿಗೆ ಸರ್ಕಾರದಿಂದ ನೇರ ಅನುದಾನ ಲಭ್ಯವಾಗು ವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 196 ಪಾರ್ಕುಗಳಿದ್ದು, 98 ಪಾರ್ಕುಗಳಲ್ಲಿ ಬೇಲಿ ಹಾಗೂ ಕಾಂಪೌಂಡ್ ಗೋಡೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಈಗ ಪಾಲಿಕೆಯನ್ನು ಮೂರು ವಲಯಗಳಾಗಿ ವಿಭಜಿಸಿ ೭೫ ಪಾರ್ಕುಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಶೌಚಾಲಯಗಳ ದುಸ್ಥಿತಿ, ವಾಣಿಜ್ಯ ಸಂಕೀರ್ಣಗಳು ಬಾಡಿಗೆಗೆ ನೀಡದೇ ಇರುವುದರಿಂದ ಆಗುತ್ತಿರುವ ಆದಾಯ ನಷ್ಟ, ಕುಡಿಯುವ ನೀರಿನ ಪ್ರಯೋಗಾಲಯ ಸ್ಥಾಪನೆಯಲ್ಲಿ ಆಗುತ್ತಿರುವ ವಿಳಂಬ ಸೇರಿದಂತೆ ಹಲವು ವಿಷಯಗಳ ಕುರಿತು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನವುಲೆ ಕೆರೆಗೆ ತ್ಯಾಜ್ಯ ನೀರು ಸೇರುತ್ತಿರುವುದರಿಂದ ಪರಿಸರ ಹಾನಿಯಾಗುತ್ತಿದೆ ಎಂಬ ಆರೋಪವೂ ಕೇಳಿಬಂತು.
ಸಂದರ್ಭದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
