ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು, ಜನ ವಿರೋಧಿ ಮತ್ತು ಪರಿಸರ ವಿರೋಧಿ ಯೋಜನೆಯಾಗಿದ್ದು, ಈ ಯೋಜನೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.
ಅವರು ಪತ್ರಿಕಾಗೋಷ್ಠೀಯಲ್ಲಿ ಮಾತನಾಡುತ್ತಾ ಕೆಪಿಸಿಎಲ್‌ನವರು ಅ.೨೭ ಮತ್ತು ೨೮ ರಂದು ಪತ್ರಿಕಾಗೋಷ್ಠಿ ನಡೆಸಿ, ಕೆಲವು ವಿಚಾರಗಳನ್ನು ಜನರಿಗೆ ದಾರಿ ತಪ್ಪಿಸುವಂತೆ ತಪ್ಪು ಮಾಹಿತಿ ನೀಡಿದ್ದಾರೆ. ಹಾಗೂ ಶರಾವತಿ ಯೋಜನಾ ಪ್ರದೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಡಲು ಹೊರಟಿರುವುದು ಸರ್ಕಾರಗಳೇ ಮಾಡಿರುವ ಅರಣ್ಯಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು.
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ನಿರ್ಮಿಸಲು ಹೊರಟಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಎರಡು ಜಿಲ್ಲೆಗಳ ಜನರಲ್ಲದೇ ರಾಜ್ಯದಲ್ಲಿ ವಿರೋಧಿಸುತ್ತಿದ್ದಾರೆ. ಇದ್ದರಿಂದ ನಾಗರೀಕ ಸಮಾಜಕ್ಕೆ ಆರ್ಥಿಕ ಹೊರೆಯಾಗುವುದು,, ಪರಿಸರ ನಾಶವಾಗುವುದುಮ, ವನ್ಯಜೀವಿಗಳ ನೆಲೆ ಛಿದ್ರವಾಗಿಸುವುದು, ಶರಾವತಿ ನದಿಯನ್ನು ಕೊಲ್ಲುವ ಯೋಜನೆಯಾಗಿದೆ ಎಂದರು.
ಕಾರ್ಗಲ್ ಮತ್ತು ಗೇರುಸೊಪ್ಪದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಈ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಎರಡೂ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗದ ಮಠಾಧೀಶರುಗಳು. ರಾಜ್ಯದ ಎಲ್ಲಾ ರೈತ ಸಂಘಗಳು, ವಿಜ್ಞಾನಿಗಳು, ಪರಿಸರವಾದಿಗಳು, ವನ್ಯಜೀವಿ ತಜ್ಞರು, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು ಈ ಯೋಜನೆಯನ್ನು ವಿರೋಧಿಸಿ ಅನೇಕ ಪ್ರತಿಭಟನಾ ಮೆರವಣಿಗೆಗಳನ್ನು ಮಾಡಿದ್ದಾರೆ. ಪತ್ರಿಕಾಗೋಷ್ಠಗಳಾಗಿವೆ. ನೂರಾರು ಸಭೆಗಳಲ್ಲಿ ಈ ಯೋಜನೆಯನ್ನು ವಿರೋಧಿಸಲಾಗಿದೆ ಎಂದರು.
ಸಾರ್ವಜನಿಕರ ತೀರ್ವ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲಿ ಕೆಪಿಸಿಎಲ್ ಮಾಧ್ಯಮ ಸಂವಾದಕ್ಕೆ ಮುಂದಾಗಿದೆ. ಇಂಧನ ಸಚಿವರು ಹಾಗೂ ಇಂಧನ ಇಲಾಖೆಯ ಅಪರ ಕಾರ್ಯದರ್ಶಿಯವರು ಕೂಡಾ ಈ ಮಹತ್ವಾಕಾಂಕ್ಷಿ ಯೋಜನೆಯ ವಾಸ್ತವಾಂಶಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಲು ಕೆಪಿಸಿಎಲ್‌ಗೆ ನಿರ್ದೇಶನ ನೀಡಿದೆ, ಅದರಂತೆ, ಕೆಪಿಸಿಲ್ ಅಧಿಕಾರಿಗಳು ದಿನಾಂಕ:೨೭/೧೦/೨೦೨೫ರಂದು ಶಿವಮೊಗ್ಗ ಮತ್ತು ಸಾಗರದಲ್ಲೂ ಮತ್ತು ದಿನಾಂಕ:೨೮/೧೦/೨೦೨೫ರಂದು ಕಾರವಾರ ಮತ್ತು ಹೊನ್ನಾವರದಲ್ಲು ಪತ್ರಿಕಾಗೋಷ್ಠಿಗಳನ್ನು ನಡೆಸಿ ಕೆಪಿಸಿಎಲ್ ಅಧಿಕಾರಿಗಳು ಜನರನ್ನು ದಿಕ್ಕು ತಪ್ಪಿಸುವ ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸುವ ಹುನ್ನಾರವಾಗಿದೆ ಎಂದರು.
ಕೆಪಿಸಿಲ್ ಅಧಿಕಾರಿಗಳು ಶರಾವತಿ ಪಂಪ್ ಸ್ಟೋರೇಜ್ ಯೋಜನೆಯು ರಾಜ್ಯಕ್ಕೆ ಅನಿವಾರ್ಯವಾಗಿದೆ ಮತ್ತು ಇದರಿಂದ ಯಾವುದೇ ರೀತಿಯ ಅರಣ್ಯ ನಾಶವಾಗುವುದಿಲ್ಲ ಹಾಗೂ ಯೋಜನೆಗಾಗಿ ಯಾವುದೇ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಸುಳ್ಳು ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆ. ಏಕೆಂದರೇ ಇತ್ತೀಚೆಗೆ ಸುಮಾರು ಜಮೀನು ವಶಪಡಿಸಿಕೊಳ್ಳುವುದಕ್ಕಾಗಿ ೪೬ ಜನ ರೈತರಿಗೆ ನೋಟಿಸ್ ಕೊಟ್ಟಿದ್ದಾರೆಂದರು.
ಕೆಪಿಸಿಎಲ್ ನವರು ನಡೆಸಿದ ನಾಲ್ಕೂ ಪತ್ರಿಕಾಗೋಷ್ಠಿಗಳಲ್ಲಿ ಅನೇಕ ತಪ್ಪು ಮತ್ತು ಅಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಪಂಪ್ಸ್ ಪ್ರೋರೇಜ್ ಯೋಜನೆಯ ಅವಶ್ಯಕತೆಯೇ ಇರುವುದಿಲ್ಲ ಹಾಗೂ ಇದಕ್ಕೆ ಸಮರ್ಥವಾದ ಪರ್ಯಾಯಮಾರ್ಗಗಳಿವೆ ಅದನ್ನು ಬಳಸಿಕೊಂಡು ಈ ಯೋಜನೆ ಕಾರ್ಯಗತಗೊಳಿಸಲಿ, ಆದರೆ ಈ ಸ್ಥಳದಲ್ಲಿ ಬೇಡ ಎನ್ನವುವು ನಮ್ಮ ನಿಲುವು ಎಂದರು.
Subscribe to Updates
Get the latest creative news from FooBar about art, design and business.
ಕೆಪಿಸಿಎಲ್‌ನಿಂದ ಜನರಿಗೆ ದಾರಿ ತಪ್ಪಿಸುವ ಮಾಹಿತಿ
ಪಂಪ್ಡ್ ಸ್ಟೋರೇಜ್ ಪರಿಸರ ವಿರೋಧಿ ಯೋಜನೆ
