ಶಿವಮೊಗ್ಗ : ನಾನೇ ನಿರ್ದೇಶಿಸಿ ನಟಿಸಿರುವ ಚಿತ್ರ ಜೈ .ನ.14 ರಂದು ರಾಜ್ಯ ಮತ್ತು ಆರು ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಬಿಗ್‌ಬಾಸ್ ಸೀಸನ್ ೯ರ ವಿಜೇತ ರೂಪೇಶ್ ಶೆಟ್ಟಿ ತಿಳಿಸಿದರು.
ಜೈ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೇ ಚಿತ್ರದಲ್ಲಿ ರಾಜಕೀಯ ನಾಟಕ, ಸಾಮಾಜಿಕ ಕಾಮಿಡಿಗಳನ್ನು ಒಳಗೊಂಡು ಉತ್ತಮವಾಗಿ ಮೂಡಿ ಬಂದಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್, ನವೀನ್ ಡಿ.ಪಡೀಲ್, ಡಾ.ದೇವದಾಸ್ ಕಾಪಿಕಾಡ್, ನಟಿಸಿದ್ದಾರೆ.
ಛಾಯಾಗ್ರಾಹಣ ವಿನುತ್ ಕೆ.ಸುವರ್ಣ, ಸಂಕಲವನ್ನು ರಾಹುಲ್ ವಸಿಷ್ಠ, ಸಂಗೀತ ನಿರ್ದೇಶನ ಸಲ್ದಾನಾ ನಿರ್ವಹಿಸಿದ್ದಾರೆಂದರು.
ಸಿನಿಮಾ ಎರಡು ಹಾಡುಗಳಿದ್ದು, ಒಂದನ್ನು ಈಗಾಗಲೇ ಬಿಡುಗಡೆ ಮಾಡಿ, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ, ಹಾಗೇ ಚಿತ್ರದಲ್ಲಿ ಅದ್ಧೂರಿಯಾಗಿ ಚಿತ್ರಕರಿಸಲಾಗಿದ್ದು ಚಿತ್ರಪ್ರೇಮಿಗಳು ಸಿನಿಮಾ ಥೀಯಟರಿಗೆ ಬಂದು ನೋಡಿ ಸಹಕರಿಸುವಂತೆ ಮನವಿ ಮಾಡಿದರು.
Subscribe to Updates
Get the latest creative news from FooBar about art, design and business.
