ಶಿವಮೊಗ್ಗ : ಸಕ್ರಬೈಲಿ ಆನೆ ಬಿಡಾರದಲ್ಲಿರುವ ಬಾಲಣ್ಣ ಶಿವಮೊಗ್ಗ ನಗರದಲ್ಲಿ ಪಾಲಿಕೆಯಿಂದ ನಡೆದ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಲ್ಲಾ ಮನಸೂರೆಗೊಂಡಿತ್ತು. ಆದರೆ ಮೆರವಣಿಗೆ ವೇಳೆ ಉಂಟಾದ ಕಾಲು ನೋವಿನಿಂದ ತೊಂದ್ರೆ ಅನುಭವಿಸುತ್ತಿದ್ದ ಬಾಲಣ್ಣನಿಗೆ ನೋವುನ್ನು ಹೋಗಲಾಡಿಸಲು ಕಿವಿಗೆ ಚುಚ್ಚುಮದ್ದನ್ನು ನೀಡಲಾಗಿತ್ತು. ಆದರೆ ಅದ್ದರಿಂದ ಕಿವಿ ಭಾಗದಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ಬಾಲಣ್ಣ ಆರೋಗ್ಯ ಹದಗೆಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದ್ದರಿಂದ ಅಧಿಕಾರಿಗಳು ಮತ್ತು ಸಕ್ರಬೈಲಿ ಆನೆ ಬಿಡಾರದಲ್ಲಿ ಸ್ವಲ್ಪ ಮಟ್ಟಿನ ಆತಂಕ ಸೃಷ್ಟಿಯಾಗಿತ್ತು. ಇದ್ದರಿಂದ ಹೆಚ್ಚತ್ತಾ ಅಧಿಕಾರಿಗಳು ಬಾಲಣ್ಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಿಂದ ತಜ್ಞ ವೈದರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದು. ಈಗ ಬಾಲಣ್ಣ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾನೆ ಎಂದು ಡಿಸಿಎಫ್ ಪ್ರಸನ್ನ ಪಟಾಗಾರ್ ಎ೧ಸುದ್ದಿ ತಿಳಿಸಿದ್ದಾರೆ.

ಬಾಲಣ್ಣ ಆರೋಗ್ಯದಲ್ಲಿ ಯಾವುದೇ ತೊಂದ್ರೆಯಿಲ್ಲ
ಬೆಂಗಳೂರು ತಜ್ಞ ವೈದ್ಯರ ತಂಡದಿಂದ ಬಾಲಣ್ಣನಿಗೆ ಅಗತ್ಯವಾದ ಚಿಕಿತ್ಸೆ ನೀಡಿ, ರಕ್ತ ಸಂಚಲನ ಇಲ್ಲದೆ, ಸಂಪೂರ್ಣ ಸ್ವಾಧೀನ ಕಳೆದುಕೊಂಡ ಕಾರಣ ಹಾಗೂ ಸೋಂಕು ತೀವ್ರವಾಗಿದ್ದರಿಂದ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಕಿವಿಯನ್ನು ಕತ್ತರಿಸಿ ತೆಗೆಯಲಾಗಿದೆ. ಈಗ ಬಾಲಣ್ಣನ್ನ ಎಂದಿನಂತೆ ಆಹಾರ ಸೇವನೆ ಮಾಡುತ್ತಿದ್ದು. ಆರೋಗ್ಯದಲ್ಲಿ ಯಾವುದೇ ತೊಂದ್ರೆಯಾಗದೆ ಮೊದಲ ಸ್ಥಿತಿಯತ್ತ ಬಾಲಣ್ಣ ಮರಳುತ್ತಿದ್ದಾನೆ.
: ಡಿಸಿಎಫ್ ಪ್ರಸನ್ನ ಪಟಾಗಾರ್
ಬೆಂಗಳೂರಿನಿಂದ ಬಂದ ತಜ್ಞ ವೈದ್ಯರಾದ ಡಾ. ಜಟ್ಟಿಯಪ್ಪ, ಡಾ.ಆನಂದ್, ಡಾ.ಜಗದೀಶ ಹಾಗೂ ಡಾ.ವಾಸಿಂ ಅವರ ನೇತೃತ್ವದಲ್ಲಿ ಮೆಡಿಕಲ್ ಟೀಂ ಬಾಲಣ್ಣ ಅಗತ್ಯವಿರುವ ಚಿಕಿತ್ಸೆ ನೀಡಿ, ಕೊಳತೆ ಬಲಗಿವಿಯಲ್ಲಿ ರಕ್ತ ಸಂಚಾರ ಸಂಪೂರ್ಣ ಬಂದಾಗಿದ್ದು. ಅದು ಸಂಪೂರ್ಣ ಸ್ವಾಧೀನ ಕಳೆದುಕೊಂಡ ಹಿನ್ನಲೆಯಲ್ಲಿ, ಮೇಲಾಧಿಕಾರಿಗಳಿಂದ ಹಾಗೂ ತಜ್ಞರೊಂದಿಗೆ ಚರ್ಚೆಸಿ ಕಿವಿಯನ್ನು ಕತ್ತರಿಸಿ ತೆಗೆಯಲಾಗಿದ್ದು.
ಈಗ ಬಾಲಣ್ಣ ಯಾವುದೇ ರೀತಿಯ ತೊಂದ್ರೆಯಿಲ್ಲದೆ ಆಹಾರವನ್ನು ಚನ್ನಾಗಿ ಸೇವಿಸುತ್ತಿದ್ದು. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾನೆ ಎಂದು ತಿಳಿಸಿದರು.
ಈ ತಜ್ಞ ವೈದ್ಯರ ಸಲಹೆಯಂತೆ ಆಹಾರ ಮತ್ತು ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಪ್ರತಿಯೊಂದು ಚಿಕಿತ್ಸೆಗೂ ಬಾಲಣ್ಣ ಉತ್ತಮ ಸ್ಪಂಧಿಸುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗುತ್ತಿದೆ ಎಂದರು.
