
ಸಿದ್ದರಾಮಯ್ಯ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ
ರಾಜಕೀಯ, ಮಳೆ ಬಗ್ಗೆ ಆಗಾಗ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿಯುತ್ತಲಿರುತ್ತಾರೆ. ಇನ್ನೂ ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ತಾವು ಹಿಂದೆ ನುಡಿದ ಭವಿಷ್ಯವನ್ನು ಮತ್ತೆ ಪುನರುಚ್ಚಾರ ಮಾಡಿದ್ದಾರೆ. ಸದ್ಯ ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಕೋಡಿಶ್ರೀಗಳು ಯುಗಾದಿ ಹಬ್ಬದ ವೇಳೆ ಭವಿಷ್ಯ ನುಡಿದಿದ್ದರು.
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ, ಸಚಿವ ಸಂಪುಟ ವಿಸ್ತರಣೆ ವಿಚಾರ ಮುನ್ನಲೆಗೆ ಬರುತ್ತಲಿದೆ. ಇದೇ ವೇಳೆಯೇ ಕೋಡಿಮಠ ಶ್ರೀಗಳು ಹೇಳಿರು ಹೇಳಿಕೆಯೊಂದು ಭಾರೀ ಕುತೂಹಲ ಸೃಷ್ಟಿಸಿದೆ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಎಂದು ಹೇಳಿದ್ದರು. ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಎದ್ದೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೋಳಾದೀತು ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು. ಸಾಮೂಹಿಕ ಹತ್ಯೆ ಆಗುತ್ತದೆ ಎಂದು ಹೇಳಿದ್ದೆ,
ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು, ಪ್ರವಾಸಿಗರನ್ನು ಕೊಂದರು. ಸುತ್ತುವರಿದು ಬಂದಾಗ ಜಗವೆಲ್ಲಾ ಕೋಳಾದೀತು ಎಂದರೆ, ಆ ಕೃತ್ಯ ಜಗತ್ತಿನಾದ್ಯಂತ ಹರಡುತ್ತದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಅಲ್ಲದೆ, ಮತೀಯ ಗಲಭೆಗಳು ಹೆಚ್ಚಾಗಿ, ಜನರಲ್ಲಿ ಅಶಾಂತಿ ಮೂಡುತ್ತದೆ ಎಂದು ಹಿಂದೆ ಹೇಳಿದ್ದೆ. ಹಿಂದೆಲ್ಲಾ, ರಾಜರು, ಮಹಾರಾಜರು, ಚಕ್ರವರ್ತಿಗಳಿದ್ದರು. ಅವರು ಒಂದು ಸ್ಥಾನವನ್ನು ಗುರುಗಳಿಗಾಗಿ ಮೀಸಲಿಡುತ್ತಿದ್ದರು. ಅವರು ಕೊಡುವ ಮಾರ್ಗದರ್ಶನದಲ್ಲಿ ಸಾಗುತ್ತಿದ್ದರು, ರಾಜ್ಯಭಾರ ಮಾಡುತ್ತಿದ್ದರು. ಈಗ ಅದು ಇಲ್ಲ ಎಂದು ಹೇಳಿದ್ದಾರೆ.
ನಾವು ಸನ್ಯಾಸಿಗಳು, ಯಾವ ದೇಶದಲ್ಲಿ ಇರುತ್ತೇವೆ, ಯಾವ ಮಣ್ಣಿನಲ್ಲಿ ಇರುತ್ತೇವೆ, ಎಲ್ಲಿ ಅನ್ನ ತಿನ್ನುತ್ತೇವೆ ಅಲ್ಲಿಗೆ ಒಳ್ಳೆದಾಗಬೇಕು ಎಂದು ನಾವು ಪ್ರಾರ್ಥನೆಯನ್ನು ಮಾಡುತ್ತೇವೆ. ಸರಿಯಾದ ಸಮಯಕ್ಕೆ ಮಳೆ ಸುರಿಯುತ್ತಿರುವುದರಿಂದ ಸಕಾಲದಲ್ಲಿ ಮಳೆ ಬರದೇ ಇರಬಹುದು ಎಂದು ಕೋಡಿಮಠದ ಸ್ವಾಮೀಜಿಗಳು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಂದ ವಿಶೇಷ ಮನವಿ ” ಹಾಲು ಕೆಟ್ಟರೂ, ಹಾಲುಮತ ಕೆಡುವುದಿಲ್ಲ ಎನ್ನುವ ಮಾತು ನಮ್ಮಲ್ಲಿ ಇದೆ. ಹಾಲುಮತದವರ ಬಳಿ ಅಧಿಕಾರವಿದ್ದರೆ, ಅದನ್ನು ವಾಪಸ್ ತೆಗೆದುಕೊಳ್ಳುವುದು ತುಂಬಾ ಕಷ್ಟ. ಅವರಾಗಿಯೇ ಕೊಟ್ಟರೆ, ಬದಲಾಗಬಹುದೇ ಹೊರತು ಇಲ್ಲದಿದ್ದರೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರೇ ೫ ವರ್ಷ ಮುಂದುವರೆಯಲಿದ್ದಾರೆ. ಅವರಿಗೆ ಯಾವುದೇ ಕಂಟಕ ಇಲ್ಲ ಎಂದು ಹೇಳಿದ್ದಾರೆ.
ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದರು. ಅವರಿಂದಲೇ ವಿಜಯದಶಮಿ ಆಚರಣೆ ಮಾಡಲು ಆರಂಭ ಆಯಿತು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಸಹ ಹಾಲುಮತ ಸಮುದಾಯದವರು. ಹಾಲುಮತ ಸಮಾಜದಲ್ಲಿ ಲೋಕೋತ್ತರ ಕಾಣಿಕೆಗಳು ಇವೆ. ಅವರಿಗೆ ದೈವಬಲ ಇದೆ ಎಂದು ಕೋಡಿಮಠ ಶ್ರೀಗಳು ಹೇಳಿದ್ದಾರೆ. ಕಳೆದ ಬಾರಿ ೫ ವರ್ಷವಾದರೂ ಅವರನ್ನು ಏನೂ ಮಾಡಲು ಆಗಲಿಲ್ಲ. ಆದ್ದರಿಂದ ಹೇಳುತ್ತಿದ್ದೇನೆ, ಅವರಾಗಿಯೇ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ. ಹಾಲುಮತ ಸಮಾಜಕ್ಕೆ ಘನತೆ, ಗೌರವ ಇದೆ. ಅಧಿಕಾರ ಬಂದರೆ, ಹಿಂತೆಗೆದುಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಇದೀಗ ಅವರು ಮತ್ತೆ ರಾಜ್ಯವನ್ನು ಆಳುತ್ತಿದ್ದಾರೆ, ಅವರನ್ನು ಕೆಳಗಿಳಿಸುವುದು ಕಷ್ಟ. ಅವರಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ. ಹೀಗೆ ರಾಜಕೀಯ ಕುರಿತು ಇದೇ ಮೊದಲೇನಲ್ಲ ಸುಮಾರು ಬಾರಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಅವರು ನುಡಿಯುವ ಭವಿಷ್ಯಗಳು ನಿಜವಾಗುತ್ತವೆ ಎನ್ನುವ ನಂಬಿಕೆಯೂ ಬಹುತೇಕ ಮಂದಿಯಲ್ಲಿದೆ.
