:ಏಕತೆ ಮತ್ತು ನಂಬಿಕೆಯು ಜಾಗತಿಕ ಮಟ್ಟದಲ್ಲಿ ಭಾರತದ ಸುಸ್ಥಿರ ಭವಿಷ್ಯವನ್ನು ಪ್ರೇರೇಪಿಸುತ್ತದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು

ರಾಜಸ್ತಾನದ ಬ್ರಹ್ಮ ಕುಮಾರಿಯರ ಶಾಂತಿವನದ ಡೈಮಂಡ್ ಹಾಲ್ ನಲ್ಲಿ ಶುಕ್ರವಾರ ಸಂಜೆ ನಡೆದ ಒಗ್ಗಟ್ಟು ಮತ್ತು ನಂಬಿಕೆ ಕುರಿತ ಜಾಗತಿಕ ಸಮಾವೇಶದಲ್ಲಿ ಆರ್ಥಿಕ ಮತ್ತು ಪರಿಸರ ಹಿತಾಸಕ್ತಿಗಳ ಸಮತೋಲನ ಕುರಿತು ಮಾತನಾಡಿದ ಅವರು, ದೇಶದ ಪ್ರಗತಿಗೆ ಆರ್ಥಿಕತೆ ಎಂಬುದು ಇಂಜಿನ್ ಇದ್ದಂತೆ. ಬಹಳ ಸಮಯದಿಂದ ಆರ್ಥಿಕತೆ ಮತ್ತು ಪರಿಸರವನ್ನು ಒಂದೇ ವಲಯದಲ್ಲಿವೆ. ಇವೆರಡು ಪ್ರತಿಸ್ಪರ್ಧಿಗಳಲ್ಲ. ವಾಸ್ತವವಾಗಿ ಪಾಲುದಾರರಾಗಿದ್ದಾರೆ. ಹಾಗಾಗಿ ಎರಡನ್ನೂ ಸಮಾನವಾಗಿ ಪರಿಗಣಿಸಬೇಕಿದೆ ಎಂದರು.

ಅನಸೂಯಾ ದೀದಿ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಈ ಸಾಧನೆ ಮಾಡಿದೆ
ಈ ಆಗಸ್ಟ್ ವೇದಿಕೆಯಲ್ಲಿ ನಾನು ಇಂದು ಇಲ್ಲಿ ನಿಲ್ಲಲು ಸಾಧ್ಯ. ಪರಿಶುದ್ಧತೆ ಮತ್ತು ಶಕ್ತಿಯ ಮೂಲಕ ಜಗತ್ತನ್ನು ಪರಿವರ್ತಿಸುತ್ತಿರುವ ಸಾವಿರಾರು ಬ್ರಹ್ಮಕುಮಾರಿ ಸಹೋದರಿಯರಿಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ ಅವರ ದಣಿವರಿಯದ ಸೇವೆಯು ನಮ್ಮ ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪೋಷಿಸುತ್ತಲೇ ಇದೆ.
:ಬಿ. ವೈ. ರಾಘವೇಂದ್ರ
ಸಂಸದರು
ವಿಶೇಷವಾಗಿ ಆರ್ಥಿಕತೆಯು ಉದ್ಯೋಗಗಳ ಮೂಲ, ಬಡತನ ನಿರ್ಮೂಲನೆ ಮಾಡುವ ಸಾಧನ ಮತ್ತು ಪ್ರತಿಯೊಬ್ಬ ನಾಗರಿಕನ ಜೀವನದ ಘನತೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗವಾಗಿದೆ. ಇಂದು ಮಹತ್ವಾಕಾಂಕ್ಷೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತವು ನಮ್ಮ ಎಲ್ಲ ಜನರಿಗೆ ಉತ್ತಮ ಜೀವನವನ್ನು ಒದಗಿಸಲು ಬದ್ಧವಾಗಿದೆ. ಅದಕ್ಕೆ ಬಲವಾದ, ಸ್ಥಿರವಾದ ಆರ್ಥಿಕ ಬೆಳವಣಿಗೆಯ ಅಗತ್ಯವಿದೆ. ಅಷ್ಟೇ ಅಲ್ಲದೆ, ಪರಿಸರವು ಜೀವನದ ಅಡಿಪಾಯವಾಗಿದ್ದು, ಅದು ದುರ್ಬಲವಾಗಿದ್ದರೆ ನಮ್ಮ ಆರ್ಥಿಕತೆಯ ಕಟ್ಟಡ ಎಷ್ಟೇ ಎತ್ತರವಾಗಿದ್ದರೂ ಅದು ಅಂತಿಮವಾಗಿ ಕುಸಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜಯೋಗದ ಪರಿಶುದ್ಧತೆ ಮತ್ತು ಶಕ್ತಿಯ ಮೂಲಕ ಜಗತ್ತನ್ನು ಪರಿವರ್ತಿಸುತ್ತಿರುವ ಸಾವಿರಾರು ಬ್ರಹ್ಮಕುಮಾರಿ ಸಹೋದರಿಯರ ದಣಿವರಿಯದ ಸೇವೆಯು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪೋಷಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂಡಿಯಾ ಟಿವಿ ಸಂಪಾದಕಿ ಮೀನಾಕ್ಷಿ ಜೋಶಿ ಮಾತನಾಡಿ, ನಂಬಿಕೆ ಮತ್ತು ಒಗ್ಗಟ್ಟಿನ ಮೇಲೆ ದೇಶದ ಇತಿಹಾಸ ನಿಂತಿದೆ. ದೇಶದ ಗಡಿರೇಖೆ ಸದೃಢವಾಗಿದ್ದರೆ ಒಗ್ಗಟ್ಟಿನ ಸೂತ್ರ ಬಲಿಷ್ಠವಾಗಿರಲಿದೆ. ಆದರೆ ಆಧ್ಯಾತ್ಮ ದ ಸೂತ್ರವು ಒಗ್ಗಟ್ಟಿನ ಮಂತ್ರದ ಮೇಲೆ ಅವಲಂಬಿತವಾಗಿದೆ ಎಂದರು.
ನಮ್ಮ ಆತ್ಮವು ಪರಿಶುದ್ಧವಾಗಿರಬೇಕು. ಬ್ರಹ್ಮಕುಮಾರಿ ಪರಿವಾರದ ಜತೆ ಈಶ್ವರ ನೆಲೆಸಿದ್ದಾನೆ. ಯೋಗದಿಂದ ಸರದವ ರೋಗಗಳೂ ಮುಕ್ತವಾಗಲಿವೆ. ರಾಜಯೋಗ ಪ್ರಾಪ್ತವಾಗಲಿದೆ. ನಮ್ಮ ಮನಸ್ಸು ಸುಸ್ಥಿರತೆಯಿಂದ ಇರಬೇಕಾದರೆ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಸುಸ್ಥಿರ ಸಮಾಜ ನಿರ್ಮಾಣವು ನಮ್ಮಮನೆಯ ಅಡುಗೆ ಮನೆ, ಮಕ್ಕಳ ಊಟದ ಬಾಕ್ಸ್ ಪ್ಲಾಸ್ಟಿಕ್ ಮುಕ್ತವಾಗಬೇಕು. ಪ್ರತಿ ಮನೆಯಿಂದಲೇ ಅದು ಶುರುವಾಗಬೇಕು. ಆಗ ದೇಶವೇ ಪ್ಲಾಸ್ಟಿಕ್ ಮುಕ್ತವಾಗಲು ಸಾಧ್ಯವಿದೆ. ಸುಸ್ಥಿರ ಭಾರತದ ಭವಿಷ್ಯವು ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಅಡಗಿದೆ ಎಂದು ಹೇಳಿದರು.
ಜರ್ಮನಿಯ ಪರಿಸರವಾದಿ ಜೊಲೊ ಜೆ.ಪಿಲ್ಜಾ, ರಾಜಸ್ತಾನ ಪತ್ರಿಕೆ ನಿರ್ದೇಶಕಿ ದೀಪ್ತಿ ಕೊಟಾರಿ ಮಾತನಾಡಿದರು.
- ರಾಜಯೋಗಿಗಳಾದ ಚಕ್ರದಾರಾ ದಿದಿ, ಕರುಣಾ ದಿದಿ, ಸುದೇಶ್ ದಿದಿ, ಕರ್ನಾಟಕದ ಅಬಕಾರಿ ಸಚಿವ ಆರ್.ವಿ.ತಿಮ್ಮಾಪುರ, ನೇಪಾಳದ ಗಾಯಕ ಆನಂದ ಕರ್ಕಿ, ಆಕಾಶ ಚೌರಾಸ್ಯ, ಎಂಎಲ್ ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.

